ಶಿಕ್ಷಕ ಸಮಾಜ ತಿದ್ದುವ ಸೂತ್ರಧಾರನಾಗಬೇಕಿದೆ-ಗುಂಡಪಲ್ಲಿ

KannadaprabhaNewsNetwork |  
Published : Sep 30, 2024, 01:28 AM IST
ಫೋಟೋ : ೨೮ಎಚ್‌ಎನ್‌ಎಲ್೨ | Kannada Prabha

ಸಾರಾಂಶ

ನಮ್ಮ ಶಾಲೆಗಳು ನೈತಿಕ ಶಿಕ್ಷಣದ ಸೂತ್ರದಲ್ಲಿ ಸಮಾಜ ವಿಜ್ಞಾನ ಸೇರಿದಂತೆ ಜ್ಞಾನ ಹಂಚುವ ಪುಣ್ಯ ಕಾರ್ಯದಲ್ಲಿ ತಲ್ಲೀನವಾಗುವ ಅಗತ್ಯವಿದ್ದು, ಶಿಕ್ಷಕ ಸಮಾಜ ತಿದ್ದುವ ಸೂತ್ರಧಾರನಾಗಬೇಕಾಗಿದೆ ಎಂದು ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಎಂ.ಎಸ್. ಗುಂಡಪಲ್ಲಿ ತಿಳಿಸಿದರು.

ಹಾನಗಲ್ಲ: ನಮ್ಮ ಶಾಲೆಗಳು ನೈತಿಕ ಶಿಕ್ಷಣದ ಸೂತ್ರದಲ್ಲಿ ಸಮಾಜ ವಿಜ್ಞಾನ ಸೇರಿದಂತೆ ಜ್ಞಾನ ಹಂಚುವ ಪುಣ್ಯ ಕಾರ್ಯದಲ್ಲಿ ತಲ್ಲೀನವಾಗುವ ಅಗತ್ಯವಿದ್ದು, ಶಿಕ್ಷಕ ಸಮಾಜ ತಿದ್ದುವ ಸೂತ್ರಧಾರನಾಗಬೇಕಾಗಿದೆ ಎಂದು ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಎಂ.ಎಸ್. ಗುಂಡಪಲ್ಲಿ ತಿಳಿಸಿದರು.ಶನಿವಾರ ಹಾನಗಲ್ಲಿನ ಗುರುಭವನದಲ್ಲಿ ಸಮಾಜ ವಿಜ್ಞಾನ ಶಿಕ್ಷಕರಿಗೆ ಆಯೋಜಿಸಿದ ತಾಲೂಕು ಮಟ್ಟದ ಮೂರು ದಿನಗಳ ತರಬೇತಿ ಸಮಾರೋಪದಲ್ಲಿ ಮಾತನಾಡಿದ ಅವರು, ಶಿಕ್ಷಕನಿಗೆ ಮಗುವಿನ ಭವಿಷ್ಯ ರೂಪಿಸುವ ಜವಾಬ್ದಾರಿ ಇದೆ. ಕಲಿಕೆಯನ್ನು ಸಂತಸಮಯಗೊಳಿಸುವ ಕುಶಲತೆ ಗುರುವಿಗೆ ಬೇಕು. ಇಂದು ಶಿಕ್ಷಣದ ರೀತಿ ನೀತಿಗಳು ಬದಲಾಗಿವೆ. ಆದರೆ ನೈತಿಕತೆಯ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದು ಬೇಡ. ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ನೈತಿಕ ಶಿಕ್ಷಣದ ಪಾತ್ರ ದೊಡ್ಡದು. ಸ್ಪರ್ಧಾತ್ಮಕ ಯುಗದಲ್ಲಿರುವ ಹೊಸ ಪೀಳಿಗೆಗೆ ಹೊಸ ಚಿಂತನೆಗಳು ಬೇಕು. ಆದರೆ ಹಳೆಯದನ್ನು ಮರೆಯುವುದು ಬೇಡ ಎಂದರು.ಮುಖ್ಯ ಅತಿಥಿಯಾಗಿ ಮಾತನಾಡಿದ ಸಾಹಿತಿ ಪ್ರೊ.ಮಾರುತಿ ಶಿಡ್ಲಾಪೂರ, ವೃತ್ತಿ ಪ್ರವೃತ್ತಿಗಳಲ್ಲಿ ಸಾಕಷ್ಟು ಅಂತರವಿದೆ. ಗುರು ಕಲಿಕೆಯ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದು ಬೇಡ. ಹಲವು ಕಾನೂನುಗಳು ಶಿಕ್ಷಕನ ಕಲಿಕಗೆ ಒಂದಷ್ಟು ಆತಂಕವನ್ನೂ ಸೃಷ್ಟಿಸಿವೆ. ಆದರೆ ಮೌಲ್ಯ ಬಿತ್ತುವ ಕಾರ್ಯದಲ್ಲಿ ಸಮಾಜದ ಹಿತಕ್ಕೆ ದೂರ ದೃಷ್ಟಿ ಇಟ್ಟುಕೊಂಡು ಕಲಿಸಬೇಕು. ಭಾಷೆ, ಸಮಾಜ ವಿಜ್ಞಾನ, ವಿಜ್ಞಾನ ಸೇರಿದಂತೆ ಎಲ್ಲ ವಿಷಯ ಬೋಧನೆಯಲ್ಲಿ ಮೌಲ್ಯಗಳನ್ನೊಳಗೊಂಡು ಮಕ್ಕಳಲ್ಲಿ ನೈತಿಕೆ ಬಿತ್ತಲು ಸಾಧ್ಯ. ಪಾಠವನ್ನು ಹೊರತುಪಡಿಸಿ ಸಾಮಾಜಿಕ ಸಾಮರಸ್ಯ ಸೌಖ್ಯವನ್ನು ಬಯಸುವ ನೀತಿ ಪಾಠಗಳು ಸಹಜವಾಗಿ ಮಕ್ಕಳ ಮನಸ್ಸಿನಲ್ಲಿ ಬಿತ್ತುವಂತಾಬೇಕು ಎಂದರು.ವಿಷಯ ಸಂಪನ್ಮೂಲ ವ್ಯಕ್ತಿಗಳಾದ ಮಂಜುನಾಥ ಕಲ್ಲೇದೇವರ, ಆರ್. ಕಿರಣ, ಟಿ.ಸಿ. ಮೋಹನಕುಮಾರ ನವೀನ ಪಿಸೆ ತರಬೇತಿ ನೀಡಿ ಮಾತನಾಡಿ, ಬದಲಾದ ಕಾಲದಲ್ಲಿ ಮಕ್ಕಳ ಹಿತಾಸಕ್ತಿಗೆ ಉತ್ತಮ ಮಾರ್ಗದರ್ಶನ ಈಗ ಬೇಕಾಗಿದೆ. ಅದಕ್ಕಾಗಿ ಈ ತರಬೇತಿ ಶಿಕ್ಷಕರಿಗೆ ಅತ್ಯಂತ ಮೌಲ್ಯಯುತವಾದುದು. ಕಾಲ ಕಾಲಕ್ಕೆ ಶಿಕ್ಷಕರು ತಮ್ಮನ್ನು ಮರು ಚಿಂತನೆಗೆ ಒಳಪಡಿಸಿಕೊಳ್ಳುವ ಅಗತ್ಯವಿದೆ. ಅದಕ್ಕಾಗಿ ಸಮೂಹ ಹಾಗೂ ವಿಶೇಷ ತರಬೇತಿ ಅತ್ಯವಶ್ಯಕ ಎಂದರು.ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಡಿ. ನಾಗೇಂದ್ರಪ್ಪ, ಗೀತಾ ಚಕ್ರಸಾಲಿ, ಶಿವಾನಂದ ಚಕ್ರಸಾಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ