ದಣಿದ ದೇಹಕ್ಕೆ ಜಾತ್ರೆ, ಧರ್ಮದ ಆರಾಧನೆ ಅಗತ್ಯ

KannadaprabhaNewsNetwork |  
Published : Feb 25, 2024, 01:46 AM IST
ಪೊಟೊ ಶಿರ್ಷಿಕೆ ೨೪ಎಚ್‌ಕೆಆರ್‌೦೨ | Kannada Prabha

ಸಾರಾಂಶ

ದೇವರ ಮೇಲೆ ವಿಶ್ವಾಸ, ನಂಬಿಕೆ, ಆಶೀರ್ವಾದ ಇದ್ದರೆ ಮಾತ್ರ ನಾವು ಮಾಡುವ ಯಾವುದೇ ಕಾರ್ಯ ಅತ್ಯಂತ ಸುಗಮವಾಗಿ ಸಾಗುತ್ತವೆ. ಜಾತ್ರೆ ಮಾಡುವುದು ಅಷ್ಟೊಂದು ಸುಲಭದ ಕೆಲಸವಲ್ಲ, ಈ ಜವಾಬ್ದಾರಿ ವಹಿಸಿಕೊಂಡ ಸಮಿತಿಯವರಿಗೆ ನಿಂದನೆ, ಅಪಾದನೆ, ಟೀಕೆ ಸಹಜ, ಇವೆಲ್ಲವನ್ನು ಮೆಟ್ಟಿ ನಿಂತಾಗ ಮಾತ್ರ ಜಾತ್ರೆ ಯಶಸ್ಸಿನಿಂದ ಸಾಗಲು ಸಾಧ್ಯ

ಹಿರೇಕೆರೂರು: ದೇವರ ಕೃಪೆಯಿದ್ದು, ಭಕ್ತರು ಮನಸ್ಸು ಮಾಡಿದರೆ ಅಸಾಧ್ಯವಾದುದನ್ನು ಸಾಧಿಸಿ ತೋರಿಸುತ್ತಾರೆ ಎಂಬುದಕ್ಕೆ ಬರಗಾಲದಲ್ಲಿ ಬಹಳ ಅದ್ಧೂರಿಯಿಂದ ಇಲ್ಲಿ ನಡೆದ ದುರ್ಗಾದೇವಿ ಜಾತ್ರೆ ಸಾಕ್ಷಿಯಾಗಿದೆ ಎಂದು ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಹೇಳಿದರು.

ಪಟ್ಟಣದ ಪೊಲೀಸ್‌ ಪರೇಡ್ ಮೈದಾನದಲ್ಲಿ ದುರ್ಗಾದೇವಿ ಜಾತ್ರೆ ನಿಮಿತ್ತ ಉತ್ಸವ ಸಮಿತಿಯವರು ಸಂಜೆ ಏರ್ಪಡಿಸಿದ್ದ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ಜಾತ್ರೆಯಲ್ಲಿ ಪಕ್ಷ ಭೇದ ಮರೆತು,ಎಲ್ಲ ಜನಾಂಗದವರನ್ನು ಒಗ್ಗೂಡಿಸಿಕೊಂಡು,ಇಷ್ಟೊಂದು ಯಶಸ್ವಿಯಾಗಿ ಉತ್ಸವ ಸಮೀತಿಯವರು ಜಾತ್ರೆಗೆ ಹೊಸ ಆಯಾಮ ತಂದುಕೊಟ್ಟಿದ್ದಾರೆ.ನಿತ್ಯ ಒಂದಿಲ್ಲೊಂದು ಸಮಸ್ಯೆ, ದುಡಿಮೆಯಿಂದ ದಣಿದ ದೇಹಗಳ,ಮಾನಸಿಕ ಒತ್ತಡ, ಸಮಸ್ಯೆ, ದೈಹಿಕ ಸಮಸ್ಯೆ ಸೇರಿದಂತೆ ಇತರೆ ಕಷ್ಟ ಕಾರ್ಪಣ್ಯ ದೂರ ಮಾಡಲು ಜಾತ್ರೆ, ಧರ್ಮದ ಆರಾಧನೆಯಿಂದ ಮಾತ್ರ ಸಾಧ್ಯ. ಮುಂದಿನ ದಿನಗಳಲ್ಲಿ ದೇವಿಯ ಕೃಪೆಯಿಂದ ಒಳ್ಳೆಯ ಮಳೆ ಬೆಳೆಯಾಗಿ ಎಲ್ಲರ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಲಿ ಎಂದರು.

ಸರ್ವಜ್ಞ ಸ್ಮಾರಕ ಸಮಿತಿ ಅಧ್ಯಕ್ಷ ಎಸ್.ಎಸ್. ಪಾಟೀಲ ಮಾತನಾಡಿ, ದೇವರ ಮೇಲೆ ವಿಶ್ವಾಸ, ನಂಬಿಕೆ, ಆಶೀರ್ವಾದ ಇದ್ದರೆ ಮಾತ್ರ ನಾವು ಮಾಡುವ ಯಾವುದೇ ಕಾರ್ಯ ಅತ್ಯಂತ ಸುಗಮವಾಗಿ ಸಾಗುತ್ತವೆ. ಜಾತ್ರೆ ಮಾಡುವುದು ಅಷ್ಟೊಂದು ಸುಲಭದ ಕೆಲಸವಲ್ಲ, ಈ ಜವಾಬ್ದಾರಿ ವಹಿಸಿಕೊಂಡ ಸಮಿತಿಯವರಿಗೆ ನಿಂದನೆ, ಅಪಾದನೆ, ಟೀಕೆ ಸಹಜ, ಇವೆಲ್ಲವನ್ನು ಮೆಟ್ಟಿ ನಿಂತಾಗ ಮಾತ್ರ ಜಾತ್ರೆ ಯಶಸ್ಸಿನಿಂದ ಸಾಗಲು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉತ್ಸವ ಸಮಿತಿ ಅಧ್ಯಕ್ಷ ಮಹೇಂದ್ರ ಬಡಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಮಾಜ ಸೇವಕ ಜಿ.ಪಿ. ಪ್ರಕಾಶಗೌಡ, ಆರ್.ಎಂ.ಕುಬೇರಪ್ಪ ಮಾತನಾಡಿದರು. ಇದೆ ವೇಳೆ ಭಾಗವಹಿಸಿದ್ದ ಎಲ್ಲ ಗಣ್ಯರನ್ನು ಉತ್ಸವ ಸಮೀತಿ ಪರವಾಗಿ ಸನ್ಮಾನಿಸಿ,ನೆನಪಿನ ಕಾಣಿಕೆ ನೀಡಲಾಯಿತು.

ಪಪಂ ಸದಸ್ಯರಾದ ಗುರುಶಾಂತ ಯತ್ತಿನಹಳ್ಳಿ, ಚಂದ್ರಕಲಾ ಕೋರಿಗೌಡ್ರ, ಕುಸುಮಾ ಬಣಕಾರ, ಬಸವರಾಜ ಕಟ್ಟಿಮನಿ, ಜಿಪಂ ಮಾಜಿ ಸದಸ್ಯ ಪ್ರಕಾಶ ಬನ್ನಿಕೋಡ, ಮುಖಂಡರಾದ ಪ್ರವೀಣ ಮರಿಗೌಡ್ರ, ಶಂಬು ಕರ್ಜಗಿ, ರುದ್ರೇಶ ಬೇತೂರ, ಶಿವಕುಮಾರ ಪ್ಯಾಟೇರ, ಪ್ರವೀಣ.ಬಿ.ಎಚ್.,ಮಂಜುನಾಥ ಹಡಪದ, ಪ್ರವೀಣ ಅಬಲೂರ, ದೇವರಾಜ ಹಂಚಿನಮನಿ, ವಿನಾಯಕ ತಳವಾರ, ಲಿಂಗರಾಜ ಬಣಕಾರ, ಬಸವರಾಜ ಚಿಂದಿ, ಅನಿಲ್ ಪಾಟೀಲ, ಕ್ಯೋತಿಬಾ ಜಾದವ್, ವಿನಯ್ ಪಾಟೀಲ, ಪರಮೇಶ ಕರಿಗಾರ, ಆನಂದ ನಾಯ್ಕರ್, ಸುರೇಶ ಮಡಿವಾಳರ, ಮಾಲತೇಶ ಬೆಟಕೇರೂರ, ಆನಂದ ನಲವಾಲದ, ಬಿರೇಶ ಹರ‍್ನಳ್ಳಿ ಹಾಗೂ ಉತ್ಸವ ಸಮಿತಿಯ ಎಲ್ಲ ಪದಾಧಿಕಾರಿಗಳು, ಸಾರ್ವಜನಿಕರು ಇದ್ದರು.

ಪ್ರಾಚಾರ್ಯ ರಾಘು ಅಗಸಿಬಾಗಿಲ, ಶಿಕ್ಷಕರಾದ ನಾಗರಾಜ ಪುರದ, ಮಂಜುನಾಥ ಸುಳಗನ್ನಿ, ಜಗದೀಶ ಗೋಣಗೇರಿ ನಿರ್ವಹಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ