ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ಸಾಹಿತ್ಯ ಸಂಭ್ರಮದ ಬಿಟ್ವೀನ್ ಟೂ ನಾಕ್ಸ್ ಸಕೀನಾಸ್ ಕಿಸ್ ಕುರಿತ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಪುಸ್ತಕ ಅನುವಾದ ಮಾಡುವಾಗ ಪರಸ್ಪರ ಪದವನ್ನು ಅರ್ಥಮಾಡಿಕೊಳ್ಳುವುದು ಮತ್ತು ಬರಹಗಾರರ ಆಂತರಿಕ ಪ್ರಪಂಚವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಅನುವಾದ ಮಾಡುವ ಮೊದಲು ಈ ಪುಸ್ತಕದ ಬಗ್ಗೆ ಇತರರೊಡನೆ ಚರ್ಚೆ ಮಾಡುವುದರಿಂದ ಅನುವಾದ ಮಾಡಲು ಸಹಾಯ ಮಾಡುತ್ತದೆ ಎಂದರು.ಕೃತಿಯ ಲೇಖಕ ವಿವೇಕ್ ಶಾನುಭಾಗ್ ಮಾತನಾಡಿ, ನಾನು ಇಂಗ್ಲಿಷ್ ನಲ್ಲಿ ಚೆನ್ನಾಗಿ ಮಾತನಾಡಬಲ್ಲೆ ಎಂಬ ಕಾರಣಕ್ಕೆ ಕನ್ನಡದೊಂದಿಗೆ ಹೊಂದಿರುವ ಸಂಬಂಧವನ್ನು ಇಂಗ್ಲಿಷ್ ನಲ್ಲಿ ಹೊಂದಿದ್ದೇನೆ ಎಂದಲ್ಲ. ಆದ್ದರಿಂದ ಶ್ರೀನಾಥ್ ಪೆರೂರ್ ಅವರನ್ನು ಕೊಚ್ಚಿಯಲ್ಲಿ ಭೇಟಿಯಾಗಿದ್ದು, ಸಕೀನಾ ಕಿಸ್ ಕೃತಿಯನ್ನು ಭಾಷಾಂತರಿಸಲು ನಿಮಗೆ ಆಸಕ್ತಿ ಇದೆಯೇ ಎಂದು ನಾನು ಅವರನ್ನು ಕೇಳಿದೆ. ಅವರು ಮೂರು ದಿನಗಳನ್ನು ತೆಗೆದುಕೊಂಡು ನಂತರ ಒಪ್ಪಿಕೊಂಡಿದ್ದಾಗಿ ಹೇಳಿದರು.
ಕಥೆ ಬರೆಯುವಾಗ ನಮ್ಮ ಸುತ್ತ ನಡೆಯುತ್ತಿರುವ ಘಟನೆಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ರಾಜಕೀಯದಲ್ಲಿ ಏನಾಗುತ್ತದೆ ಎಂಬುದರ ಬಗ್ಗೆ ಸಾಮಾನ್ಯ ತಿಳುವಳಿಕೆ ನಿಮಗೆ ತಿಳಿದಿದೆ. ಜೀವನದಲ್ಲಿ ನಾವು ರಾಜಕೀಯದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಅದು ಪಕ್ಷ ರಾಜಕಾರಣವಲ್ಲ. ವಿಭಿನ್ನ ರಾಜಕೀಯಗಳಿವೆ ಎಂದು ಬರಹಗಾರನಾಗಿ ನಾನು ಹೇಳಬಲ್ಲೆ ಎಂದು ವಿವರಿಸಿದರು.