ಮಾಗಡಿ: ಪಟ್ಟಣದಲ್ಲಿ ಕಳೆದ ಎರಡು ದಿನಗಳಿಂದ ಗುಡುಗು, ಮಿಂಚು, ಬಿರುಗಾಳಿ ಸಹಿತ ಭಾರಿ ಮಳೆಗೆ ಜ್ಯೋತಿನಗರದ ಮುಖ್ಯ ರಸ್ತೆಯಲ್ಲಿದ್ದ ಸಿಲ್ವರ್ ಮರ ಉದ್ಯಾನವನದೊಳಗೆ ಬುಡ ಸಮೇತ ಬಿದ್ದಿದ್ದು ಬಾರಿ ಅನಾಹುತ ತಪ್ಪಿದಂತಾಗಿದೆ.
ಒಂದು ವೇಳೆ ರಸ್ತೆಗೆ ಬಿದ್ದಿದ್ದರೆ ಮನೆ, ವಿದ್ಯುತ್ ಕಂಬ, ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರುಗಳಿಗೆ ಸಾಕಷ್ಟು ಹಾನಿ ಉಂಟಾಗುತ್ತಿತ್ತು. ಈ ರಸ್ತೆಯಲ್ಲಿ ಸಾಕಷ್ಟು ಹಳೆಯ ಸಿಲ್ವರ್ ಮರಗಳಿದ್ದು ಇದನ್ನು ಕೂಡಲೇ ಅರಣ್ಯ ಇಲಾಖೆಯವರು ತೆರವುಗೊಳಿಸಬೇಕು. ಇಲ್ಲವಾದರೆ ಮರ ಬಿದ್ದು ಸಾಕಷ್ಟು ತೊಂದರೆ ಆಗಲಿದ್ದು ಸಿಲ್ವರ್ ಮರಗಳನ್ನು ತೆಗೆದು ಹೊಂಗೆ ಸಸಿಗಳನ್ನು ಹಾಕಿದರೆ ಯಾವುದೇ ರೀತಿ ತೊಂದರೆ ಆಗುವುದಿಲ್ಲ. ಕೂಡಲೇ ಅರಣ್ಯ ಇಲಾಖೆಯವರು ಮರ ತೆರವು ಮಾಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.ಪಟ್ಟಣದ ಮಂಜುನಾಥ ಬಡಾವಣೆಯ ಮುಖ್ಯರಸ್ತೆಯಲ್ಲಿ ಕೂಡ ಸಿಲ್ವರ್ ಮರಗಳಿದ್ದು ಅಪಾಯಕ್ಕೆ ಆಹ್ವಾನ ನೀಡುವಂತೆ ಇರುವುದರಿಂದ ಅವುಗಳನ್ನು ತೆರವುಗೊಳಿಸಬೇಕಾಗಿದೆ. ಒಂದು ವೇಳೆ ಬಿರುಗಾಳಿ ಮಳೆಗೆ ಮರಗಳು ಮನೆಗಳ ಮೇಲೆ ಬಿದ್ದರೆ ಮನೆಗೆ ಆಗುವ ನಷ್ಟವನ್ನು ಯಾರು ಕಟ್ಟಿಕೊಡುತ್ತಾರೆ? ಮುಖ್ಯ ರಸ್ತೆಯಲ್ಲಿ ಪ್ರತಿ ದಿನ ನೂರಾರು ವಾಹನಗಳು ಓಡಾಡುತ್ತಿದ್ದು ಒಂದು ವೇಳೆ ಸಾರ್ವಜನಿಕರ ಮೇಲೆ ಬೃಹತ್ ಗಾತ್ರದ ಮರಗಳು ಬಿದ್ದರೆ ಪ್ರಾಣಹಾನಿಯಾಗಲಿದೆ. ಕೂಡಲೇ ಅರಣ್ಯ ಇಲಾಖೆ ಅಪಾಯಕಾರಿ ಮರಗಳನ್ನು ತೆರವುಗೊಳಿಸುವ ಮೂಲಕ ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಬೇಕೆಂದು ಸ್ಥಳೀಯ ನಾಗರಿಕರು ಒತ್ತಾಯಿಸಿದ್ದಾರೆ.
ಕೋಟ್.............ಬಿರುಗಾಳಿ ಮಳೆಗೆ ಸಿಲ್ವರ್ ಮರ ಬಿದ್ದ ಹಿನ್ನೆಲೆಯಲ್ಲಿ ಅಪಾಯಕಾರಿ ಮರಗಳ ಪರಿಶೀಲನೆ ನಡೆಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಮರ ತೆರವುಗೊಳಿಸಲಾಗುವುದು. ಜಿಲ್ಲಾಧಿಕಾರಿಗಳು ಮಳೆಯಿಂದ ಹಾನಿಯಾಗುವ ಅಪಾಯಕಾರಿ ಮರಗಳನ್ನು ಕೂಡಲೇ ತೆರವುಗೊಳಿಸಬೇಕೆಂಬ ಆದೇಶ ಹೊರಡಿಸಿದ್ದಾರೆ. ನಮ್ಮ ಸಿಬ್ಬಂದಿ ಸ್ಥಳ ಪರಿಶೀಲಿಸಿ ಕೂಡಲೇ ಕ್ರಮ ಕೈಗೊಳ್ಳಲಾಗುವುದು.
- ಚೈತ್ರ, ವಲಯ ಅರಣ್ಯ ಅಧಿಕಾರಿ, ಮಾಗಡಿಪೋಟೋ 7ಮಾಗಡಿ1: ಜ್ಯೋತಿನಗರದಲ್ಲಿ ಬಿರುಗಾಳಿ ಸಹಿತ ಮಳೆಗೆ ಸಿಲ್ವರ್ ಮರ ಬುಡ ಸಮೇತ ಬಿದ್ದಿರುವುದು.