ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಇಲ್ಲಿನ ಪುರಸಭೆಯು ಮುಖ್ಯಾಧಿಕಾರಿ ಕೆ.ಪಿ.ವಸಂತ ಕುಮಾರಿಯವರನ್ನು ಡಿ.೩ರಂದು ವರ್ಗಾವಣೆಗೊಳಿಸಿ, ಸದರಿ ಜಾಗಕ್ಕೆ ಎಸ್.ಶರವಣರನ್ನು ನೇಮಿಸಿ ಆದೇಶ ಹೊರಡಿಸಿತ್ತು. ಅದರಂತೆ ಡಿ.೪ ರಂದು ಎಸ್.ಶರವಣ ಅಧಿಕಾರ ವಹಿಸಿಕೊಂಡರು.
ಇದಾದ ಬಳಿಕ ವರ್ಗಾವಣೆಗೊಂಡ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ ಕೆಎಟಿ ಮೊರೆ ಹೋದ ಪರಿಣಾಮ ಡಿ.೧೦ ರಂದು ಕೆಎಟಿಯು ಮುಖ್ಯಾಧಿಕಾರಿಯಾಗಿ ವಸಂತಕುಮಾರಿಯವರಿಗೆ ಮುಂದುವರಿಯಲು ಆದೇಶ ನೀಡಿದೆ.ಆದೇಶ ಪ್ರತಿಯೊಂದಿಗೆ ತಡೆಗೊಂಡಿದ್ದ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ ಡಿ.೧೨ ರಂದು ಸಂಜೆ ಪುರಸಭೆಗೆ ಬಂದಾಗ ಮುಖ್ಯಾಧಿಕಾರಿ ಎಸ್.ಶರವಣ ಇರಲಿಲ್ಲ. ಮುಖ್ಯಾಧಿಕಾರಿ ಕಚೇರಿ ಬೀಗ ಕೂಡ ಹಾಕಿದ್ದ ಕಾರಣ ಕೆ.ಪಿ.ವಸಂತಕುಮಾರಿ ಕಂಪ್ಯೂಟರ್ ಆಪರೇಟರ್ ಕಚೇರಿಯಲ್ಲಿಯೇ ಮತ್ತೆ ವರದಿ ಮಾಡಿಕೊಂಡರು.
ಡಿ.೧೩ರ ಶುಕ್ರವಾರ ವರ್ಗಾವಣೆಗೆ ತಡೆ ತಂದ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ ಕಚೇರಿಗೆ ಬರುವ ವೇಳೆಗೆ ವರ್ಗಾವಣೆಯಾಗಿ ಅಧಿಕಾರ ಸ್ವೀಕರಿಸಿದ್ದ ಎಸ್.ಶರವಣ ಮುಖ್ಯಾಧಿಕಾರಿ ಕಚೇರಿಯಲ್ಲಿ ಕುರ್ಚಿ ಹಿಡಿದು ಕುಳಿತಿದ್ದರು.
ರಾಜಕೀಯ ಒತ್ತಡ:
ಇದಾದ ಬಳಿಕ ಪುರಸಭೆ ಮುಖ್ಯಾಧಿಕಾರಿಯಾಗಿ ಮುಂದುವರಿಯಲು ಅವಕಾಶ ಕೊಡಬಾರದು ಎಂದು ಕೆಲ ಕಾಂಗ್ರೆಸ್ ಪುರಸಭೆ ಸದಸ್ಯರು ಎಸ್.ಶರವಣರನ್ನು ಬೆಳ್ಳಂ ಬೆಳಗ್ಗೆಯೇ ಕಚೇರಿ ಕರೆಸಿ ಕುರ್ಚಿಯಲ್ಲಿ ಕೂರಿಸುವ ಮೂಲಕ ವರ್ಗಾವಣೆಗೆ ತಡೆ ತಂದ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿಗೆ ವಸಂತಕುಮಾರಿಗೆ ಟಾಂಗ್ ನೀಡುವಲ್ಲಿ ಶುಕ್ರವಾರ ಸಫಲರಾದರು.
ಪುರಸಭೆ ಮುಖ್ಯಾಧಿಕಾರಿ ಕೂಡ ಗೆಜೆಟೆಡ್ ಅಧಿಕಾರಿ. ಸರ್ಕಾರ ವರ್ಗಾವಣೆ ಮಾಡಿದ ಬಳಿಕ ನೇರವಾಗಿ ಬಂದು ಪುರಸಭೆ ಅಧಿಕಾರ ಪಡೆದುಕೊಳ್ಳಬಹುದಾಗಿದೆ. ವರದಿ ಮಾಡಿಕೊಂಡ ಬಳಿಕ ಜಿಲ್ಲಾಧಿಕಾರಿಗಳ ಭೇಟಿ ಮಾಡಿ ಪರಿಚಯ ಮಾಡಿಕೊಳ್ಳುವುದು ವಾಡಿಕೆ ಎಂದರು.
ಕೆಎಟಿಯಿಂದ ತಡೆ ತಂದು ಆದೇಶ ತೋರಿಸಿದ ತಕ್ಷಣ ಮುಖ್ಯಾಧಿಕಾರಿ ಎಸ್.ಶರವಣ ಜಾಗ ಬಿಟ್ಟು ಕೊಡಬೇಕಿತ್ತು. ಒಂದು ವೇಳೆ ಕಚೇರಿ ಸಹಿ ಹಾಕಿದ್ದರೂ ನ್ಯಾಯಾಂಗ ನಿಂದನೆ ಆಗುತ್ತದೆ ಎಂದರು.