ಅಪಾಯಕ್ಕೆ ಕಾದಿರುವ ರಸ್ತೆ ಮಧ್ಯದ ತಿರುವು

KannadaprabhaNewsNetwork |  
Published : Sep 12, 2024, 01:46 AM IST
11ಐಎನ್‌ಡಿ1,ಇಂಡಿ-ಮಾವಿನಹಳ್ಳಿ ರಸ್ತೆಯಲ್ಲಿ ರಸ್ತೆ ತಿರುವು ಇರುವ ಚಿತ್ರ. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ ಇಂಡಿ ನಗರದಿಂದ ಮಾವಿನಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿರುವ ತಿರುವೊಂದು ಅಪಾಯಕ್ಕೆ ಕಾದು ಕುಳಿತಿದೆ. ಈ ರಸ್ತೆಯಲ್ಲಿ ಕಾಲುವೆ ಹಾಗೂ ಹಳ್ಳದ ಬಳಿ ಎರಡ್ಮೂರು ಕಡೆಗಳಲ್ಲಿ ರಸ್ತೆ ತಿರುವು ಇರುವುದರಿಂದ ಮುಂದೆ ಬರುವ ವಾಹನಗಳು ಕಾಣುವುದೇ ಇಲ್ಲ. ಅಪಾಯ ಸಂಭವಿಸುವ ಸಾಧ್ಯತೆಯೇ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ರಸ್ತೆ ತಿರುವಿನಲ್ಲಿನ ಗಿಡಗಂಟಿಗಳನ್ನು ಸ್ವಚ್ಛಗೊಳಿಸಿ, ಅಲ್ಲೊಂದು ವೇಗ ನಿಯಂತ್ರಕ (ಹಂಪ್ಸ್‌) ನಿರ್ಮಿಸಿ ವಾಹನ ಸವಾರರು ನಿಧಾನವಾಗಿ ತೆರಳುವಂತೆ ಮಾಡಬೇಕಿದೆ. ಇದರಿಂದ ಅಪಾಯ ಸಂಭವಿಸುವ ಸಾಧ್ಯತೆ ಕಡಿಮೆ ಇದ್ದು, ಅಪಾಯವಾಗುವ ಸಾಧ್ಯತೆಯೂ ಕ್ಷೀಣಲಿದೆ.

ಖಾಜು ಸಿಂಗೆಗೋಳ

ಕನ್ನಡಪ್ರಭ ವಾರ್ತೆ ಇಂಡಿ

ಇಂಡಿ ನಗರದಿಂದ ಮಾವಿನಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿರುವ ತಿರುವೊಂದು ಅಪಾಯಕ್ಕೆ ಕಾದು ಕುಳಿತಿದೆ. ಈ ರಸ್ತೆಯಲ್ಲಿ ಕಾಲುವೆ ಹಾಗೂ ಹಳ್ಳದ ಬಳಿ ಎರಡ್ಮೂರು ಕಡೆಗಳಲ್ಲಿ ರಸ್ತೆ ತಿರುವು ಇರುವುದರಿಂದ ಮುಂದೆ ಬರುವ ವಾಹನಗಳು ಕಾಣುವುದೇ ಇಲ್ಲ. ಅಪಾಯ ಸಂಭವಿಸುವ ಸಾಧ್ಯತೆಯೇ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ರಸ್ತೆ ತಿರುವಿನಲ್ಲಿನ ಗಿಡಗಂಟಿಗಳನ್ನು ಸ್ವಚ್ಛಗೊಳಿಸಿ, ಅಲ್ಲೊಂದು ವೇಗ ನಿಯಂತ್ರಕ (ಹಂಪ್ಸ್‌) ನಿರ್ಮಿಸಿ ವಾಹನ ಸವಾರರು ನಿಧಾನವಾಗಿ ತೆರಳುವಂತೆ ಮಾಡಬೇಕಿದೆ. ಇದರಿಂದ ಅಪಾಯ ಸಂಭವಿಸುವ ಸಾಧ್ಯತೆ ಕಡಿಮೆ ಇದ್ದು, ಅಪಾಯವಾಗುವ ಸಾಧ್ಯತೆಯೂ ಕ್ಷೀಣಲಿದೆ.

ಈ ರಸ್ತೆಯ ಮೂಲಕ ಸುಕ್ಷೇತ್ರ ಲಚ್ಯಾಣ ಗ್ರಾಮದ ಸಿದ್ದಲಿಂಗ ಮಹಾರಾಜರ ಮಠಕ್ಕೆ ನಿತ್ಯ ನೂರಾರು ಜನರು ದರ್ಶನಕ್ಕೆ ಹೋಗುತ್ತಾರೆ. ಅಲ್ಲದೆ ಈ ರಸ್ತೆಯ ಮಾರ್ಗದ ಮೂಲಕ ಪಡನೂರ, ಬರಗುಡಿ, ಆಳೂರ, ಹಿಂಗಣಿ ಸೇರಿದಂತೆ ಮಹಾರಾಷ್ಟ್ರದ ಹಲವು ಗ್ರಾಮಗಳಿಗೆ ಇದೇ ರಸ್ತೆಯಿಂದ ಸಂಚರಿಸಬೇಕು. ಇಂಡಿ ನಗರದಿಂದ ಕೇವಲ 3 ಕಿಮೀ ಅಂತರದಲ್ಲಿ ಇಂಡಿ ಶಾಖಾ ಕಾಲುವೆ ಇದೆ. ಅಲ್ಲಿಯೂ ರಸ್ತೆಯೂ ತಿರುವಿದ್ದು, ಮುಂದೆ ಹಳ್ಳವಿದೆ.ಎರಡು ಕಡೆಗಳಲ್ಲಿ ರಸ್ತೆ ತಿರುವುಗಳಿವೆ. ರಸ್ತೆಯ ಬದಿಯಲ್ಲಿ ಗಿಡಗಂಟಿಗಳು ಬೆಳೆದಿರುವುದರಿಂದ ಮುಂದೆ ಬರುವ ವಾಹನಗಳು ವಾಹನ ಸವಾರರಿಗೆ ಕಾಣುವುದಿಲ್ಲ. ಹೀಗಾಗಿ ರಸ್ತೆಗಳಿಗೆ ಎಡೆಮಾಡಿಕೊಟ್ಟಂತಾಗಿದೆ. ಮೇಲಾಗಿ, ರಾತ್ರಿ ವೇಳೆಯಲ್ಲಿ ವಾಹನಗಳ ಹೆಡ್‌ಲೈಟ್‌ ಫೋಕಸ್‌ ಬೆಳಕಿನಲ್ಲಿ ತಿರುವು ರಸ್ತೆ ಕೂಡ ಸರಿಯಾಗ ಕಾಣಿಸುವುದಿಲ್ಲ. ರಸ್ತೆ ಬದಿಯೂ ಕಾಣದಂತಾಗುತ್ತದೆ. ಹೀಗಾಗಿ, ರಸ್ತೆ ತಿರುವುಗಳಿಂದ ರಸ್ತೆ ಅಪಘಾತವಾಗುವ ಮುಂಚೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ರಸ್ತೆ ತಿರುವಿನಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆಗೆದು ಸ್ವಚ್ಛಗೊಳಿಸಬೇಕಿದೆ. ಇಲ್ಲವೇ ನೇರ ರಸ್ತೆಯನ್ನಾಗಿ ಮಾಡಿದರೆ ವಾಹನ ಸವಾರರಿಗೆ ಅನುಕೂಲವಾಗುತ್ತದೆ.

ರಸ್ತೆ ತಿರುವು ಇದ್ದರೂ ರಸ್ತೆ ಅಗಲವಾಗಿರದೆ ಕಿರಿದಾಗಿರುವುದರಿಂದ ವಾಹನಗಳ ಅಪಘಾತಕ್ಕೆ ಸಾಧ್ಯತೆ ಹೆಚ್ಚು. ಅಲ್ಲದೇ, ಕಾಲುವೆ ಮೇಲಿಂದ ಇಳಿಜಾರು ತಿರುವು ರಸ್ತೆ ಇರುವುದರಿಂದ, ವಾಹನಗಳು ಇಳಿಜಾರು ರಸ್ತೆಯಲ್ಲಿ ವೇಗವಾಗಿ ಚಲಿಸುತ್ತವೆ. ಮುಂದೆ ಬರುವ ವಾಹನಕ್ಕೆ ಅಪಘಾತಪಡಿಸುವ ಸಂಭವ ಇದೆ. ಹೀಗಾಗಿ ಅರ್ಧ ಕಿಮೀಯಲ್ಲಿರುವ ರಸ್ತೆ ತಿರುವು, ನೇರ ರಸ್ತೆಯನ್ನಾಗಿ ಮಾಡುವುದರ ಮೂಲಕ ಮತ್ತು ರಸ್ತೆ ಅಗಲೀಕರಣ ಮಾಡಿದರೆ ವಾಹನಗಳ ಸವಾರರಿಗೆ ಅನುಕೂಲವಾಗುತ್ತದೆ.

---------

ಕೊಟ್‌.......

ಇಂಡಿ ತಾಲೂಕು ಕೇಂದ್ರಕ್ಕೆ ನಿತ್ಯ ಮಾವಿನಹಳ್ಳಿ, ಆಳೂರ, ಲಚ್ಯಾಣ, ಪಡನೂರ, ಬರಗುಡಿ, ಹಿಂಗಣಿ ಸೇರಿ ಮಹಾರಾಷ್ಟ್ರದ ಹಲವು ಗ್ರಾಮಗಳಿಗೆ ಈ ರಸ್ತೆಯಲ್ಲೇ ಓಡಾಡುತ್ತಾರೆ. ರಸ್ತೆ ತಿರುವುಗಳು ಇರುವುದರಿಂದ ಹಲವು ಅಪಘಾತಗಳು ಸಂಭವಿಸಿವೆ. ರಾತ್ರಿ ವೇಳೆಯಂತೂ ವಾಹನಗಳ ಲೈಟಿನ ಬೆಳಕಿಗೆ ಎದುರಿಗೆ ಬರುವ ವಾಹನಗಳು ತಿಳಿಯುವುದಿಲ್ಲ. ಹೀಗಾಗಿ ರಸ್ತೆ ತಿರುವು ತಗೆದು, ನೇರ ರಸ್ತೆ ಮಾಡಿದರೆ ಅನುಕೂಲವಾಗಿ. ಇದರಿಂದ ಅಪಘಾತ ತಪ್ಪಿಸಬಹುದು.

- ಯಲ್ಲಪ್ಪ ಪೂಜಾರಿ, ಮಾವಿನಹಳ್ಳಿ ಗ್ರಾಮಸ್ಥ

------------

ಇಂಡಿಯಿಂದ ಮಾವಿನಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿನ ತಿರುವುಗಳನ್ನು ಗಮನಿಸಲಾಗಿದೆ. ತಿರುವು ತಗೆದು ನೇರ ರಸ್ತೆ ಮಾಡಬೇಕಾದರೆ ಜಮೀನು ಪಡೆಯಬೇಕಾಗುತ್ತದೆ. ಜಮೀನ ಮಾಲೀಕರಿಗೆ ಪರಿಹಾರ ನೀಡಬೇಕಾಗುತ್ತದೆ.ಅದು ಸಾಧ್ಯವಾಗುವುದಿಲ್ಲ. ರಸ್ತೆ ತಿರುವುಗಳು ಇರುವ ಕಡೆಗಳಲ್ಲಿ ರೋಡ್‌ಬ್ರೇಕ್‌ ಹಾಕಿ,ಸಂಚಾರ ನಿಯಮದ ಫಲಕಗಳನ್ನು ಅಳವಡಿಸಲಾಗುತ್ತದೆ.

- ದಯಾನಂದ ಮಠ, ಎಇಇ, ಲೋಕೊಪಯೋಗಿ ಇಲಾಖೆ, ಇಂಡಿ.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ