ದಾಬಸ್‌ಪೇಟೆ: ನೆಲಮಂಗಲ ಪ್ರಾದೇಶಿಕ ವಲಯ ಅರಣ್ಯ ಇಲಾಖೆ ವತಿಯಿಂದ ಚಿಣ್ಣರ ವನ ದರ್ಶನ ಕಾರ್ಯಕ್ರಮದಡಿ ಸೋಂಪುರ ಹೋಬಳಿಯ ಹೊನ್ನೇನಹಳ್ಳಿ, ಅವ್ವೇರಹಳ್ಳಿ ಹಾಗೂ ಬರಗೇನಹಳ್ಳಿ ಸರ್ಕಾರಿ ಶಾಲೆಗಳ 100 ಮಕ್ಕಳನ್ನು ಬನ್ನೇರುಘಟ್ಟ ಪ್ರಕೃತಿ ಶಿಬಿರಕ್ಕೆ ಕರೆದೊಯ್ದು ಅರಣ್ಯ, ಪರಿಸರ, ಪ್ರಾಣಿ, ಪಕ್ಷಿಗಳ ಕುರಿತು ಸಮಗ್ರ ಮಾಹಿತಿ ನೀಡಲಾಯಿತು.ಇಲಾಖೆ ಮೊದಲ ಹಂತದಲ್ಲಿ ಸೆಪ್ಟೆಂಬರ್ 11ರಿಂದ 14ರವರೆಗೆ ವನ ದರ್ಶನ ಕಾರ್ಯಕ್ರಮ ಆಯೋಜಿಸಿತ್ತು. ಹೊನ್ನೇನಹಳ್ಳಿ ಶಾಲೆಯ 50 ಮಕ್ಕಳು, ಎರಡನೇ ಹಂತದಲ್ಲಿ ಅವ್ವೇರಹಳ್ಳಿ ಮತ್ತು ಬರಗೇನಹಳ್ಳಿ ಶಾಲೆಗಳ 50 ಮಕ್ಕಳನ್ನು ಶಿಬಿರಕ್ಕೆ ಕರೆದೊಯ್ದು ಮಕ್ಕಳಿಗೆ ಪರಿಸರದಲ್ಲಿ ಆಸಕ್ತಿ ಬೆಳೆಸುವ ಪ್ರಯತ್ನ ಯಶಸ್ವಿಗೊಂಡಿದೆ.
ಪ್ರಾಥಮಿಕ ಮಕ್ಕಳು:4ರಿಂದ 7ನೇ ತರಗತಿ ಮಕ್ಕಳನ್ನು ಈ ಚಿಣ್ಣರ ವನ ದರ್ಶನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಪ್ರಕೃತಿ ಶಿಬಿರಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗುವ ಮಾರ್ಗದಲ್ಲಿ ವಲಯ ಅರಣ್ಯಾಧಿಕಾರಿ ಕಚೇರಿ ಹಾಗೂ ನರ್ಸರಿಯಲ್ಲಿಯೂ ಮಕ್ಕಳಿಗೆ ಹಲವು ಮಾಹಿತಿ ನೀಡಲಾಯಿತು.
ವಿವಿಧ ಅಧ್ಯಯನಗಳು:ಪ್ರಕೃತಿ ಶಿಬಿರದಲ್ಲಿ ಮಕ್ಕಳಿಗೆ ಪ್ರಾಣಿ ಸಂಗ್ರಹಾಲಯ, ಬಟರ್ ಫ್ಲೈ ಕ್ಯಾಂಪ್ ವೀಕ್ಷಣೆ ಜೊತೆಗೆ ಸಫಾರಿಯಲ್ಲಿ ಪ್ರಾಣಿ, ಪಕ್ಷಿಗಳ ಕುರಿತು ಅರಿವು ಮೂಡಿಸಲಾಯಿತು. ಪ್ರಕೃತಿ ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳನ್ನು ಕಾಲ್ನಡಿಗೆ ಮೂಲಕ ಅರಣ್ಯ, ಪ್ರಾಣಿ, ಪಕ್ಷಿಗಳ ಬಗ್ಗೆ ಸಮಗ್ರ ಮಾಹಿತಿ ನೀಡಲಾಗಿದೆ.
2 ದಿನ ಪ್ರವಾಸ:ಸರ್ಕಾರ ಮತ್ತು ಅರಣ್ಯ ಇಲಾಖೆಯಿಂದ 2 ದಿನಗಳ ಶಿಬಿರದಲ್ಲಿ ಮಕ್ಕಳಿಗೆ ಪ್ರಾಣಿ ಸಂಗ್ರಾಹಲಯ ನಿರ್ವಹಣೆ, ಪ್ರಾಣಿ, ಪಕ್ಷಿಗಳ ಆರೋಗ್ಯ ಕಾಳಜಿ, ಅರಣ್ಯದಲ್ಲಿ ಒಂದು ದಿನ ಎಂಬಂತೆ, ಎರಡು ದಿನಗಳ ಕಾಲ ಮಕ್ಕಳು ಅರಣ್ಯದ ಸಂಪೂರ್ಣ ಮಾಹಿತಿ ನೀಡಲಾಗುವುದು. ಮಕ್ಕಳ ಮನಸ್ಸಿನ ಮೇಲೂ ಈ ಶಿಬಿರ ಪ್ರಭಾವ ಬೀಳುತ್ತದೆ.
ಸಿರಿ ಧಾನ್ಯದ ಮಹತ್ವ:ವನ ದರ್ಶನದ ಪ್ರತಿ ಅವಧಿಯಲೂ ಸಿರಿಧಾನ್ಯದ ಆಹಾರ ಮಕ್ಕಳಿಗೆ ನೀಡಿ, ಇಲಾಖೆ ಸಿರಿಧಾನ್ಯದ ಮಹತ್ವ, ಅರಣ್ಯದಲ್ಲಿ ಊಟೋಪಚಾರದ ಮಹತ್ವ, ಆರೋಗ್ಯ ಕಾಳಜಿ ಸೇರಿದಂತೆ, ಉಚಿತ ಲೇಖನ ಸಾಮಗ್ರಿ ಕಿಟ್ ಅನ್ನು ಸಹ ನೀಡಿತು.
ಕೋಟ್ ...............
ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಅರಣ್ಯ ಮತ್ತು ಪರಿಸರದ ಸಮಗ್ರ ಮಾಹಿತಿ ತಿಳಿಸಲು ಚಿಣ್ಣರ ವನ ದರ್ಶನ ಸಹಕಾರಿ. ಇತ್ತೀಚಿನ ದಿನಗಳಲ್ಲಿ ಪ್ರವಾಸದಲ್ಲಿ ಮಕ್ಕಳ ಭಾಗವಹಿಸುವಿಕೆ ಹೆಚ್ಚಾಗಿದೆ. ಜಿಲ್ಲೆಯಲ್ಲಿ 2 ಹಂತದಲ್ಲಿ ಪ್ರವಾಸ ನಡೆಯಲಿದ್ದು, ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಮಕ್ಕಳನ್ನು ಕರೆದೊಯ್ಯಲಾಗಿತ್ತು.-ಸರೀನಾ ಸಿಕ್ಕಲಿಗರ್, ಉಪ ಅರಣ್ಯ ಸಂರಕ್ಷಣಾಧಿಕಾರಿ, ಬೆಂ.ಗ್ರಾ.ಜಿಲ್ಲೆ
ಕೋಟ್ .............ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಿಂದ ಪ್ರಕೃತಿ ಶಿಕ್ಷಣದ ಭಾಗವಾಗಿ ಅರಣ್ಯ, ವನ್ಯಜೀವಿ, ಪರಿಸರದ ಮಾಹಿತಿ ನೀಡಲಾಯಿತು. ಮಕ್ಕಳಿಗೆ ಪ್ರಕೃತಿ ಸಂಬಂಧಿತ ಆಟಗಳು ಆಡಿಸಲಾಯಿತು. ರಸಪ್ರಶ್ನೆ, ಅಭಿನಯ ಮತ್ತು ಸಂರಕ್ಷಣೆಗೆ ಸಂಬಂಧಿಸಿದಂತೆ ನಾಟಕಗಳಲ್ಲಿ ಮಕ್ಕಳನ್ನು ತೊಡಗಿಸಿ ಅರಿವು ಮೂಡಿಸಲಾಯಿತು.
-ಪುಟ್ಟರುದ್ರಾರಾಧ್ಯ, ಮುಖ್ಯ ಶಿಕ್ಷಕರು, ಹೊನ್ನೇನಹಳ್ಳಿ ಸರ್ಕಾರಿ ಶಾಲೆಫೋಟೋ 1 :
ಶಿಬಿರದಲ್ಲಿ ಪಾಲ್ಗೊಂಡಿದ್ದ ಮಕ್ಕಳು.ಫೋಟೋ 2:ಬನ್ನೇರುಘಟ್ಟ ಬಟರ್ ಫ್ಲೈ ಕ್ಯಾಂಪ್ ಮುಂದೆ ಶಾಲಾ ಮಕ್ಕಳು.