ನಿವೃತ್ತರಾದ ಮಾಸ್ಟರ್ ಪ್ರಸನ್ನ ಕುಮಾರ್‌ಗೆ ಆತ್ಮೀಯ ಬೀಳ್ಕೊಡುಗೆ

KannadaprabhaNewsNetwork |  
Published : Nov 02, 2026, 02:30 AM IST
1ಎಚ್ಎಸ್ಎನ್4 :  ಹಳೇಬೀಡಿನ ಸರ್ಕಾರಿ  ಕೆ.ಪಿ.ಎಸ್ ಹೈಸ್ಕೂಲು ವಿಭಾಗದಲ್ಲಿ ಗಣಿತ ವಿಷಯದ ಶಿಕ್ಷಕ ಪ್ರಸನ್ ಕುಮಾರ್‌ಗೆ ಆತ್ಮೀಯವಾಗಿನಿವೃತ್ತಿ ಬೀಳ್ಕೊಡುಗೆ ನೀಡಲಾಯಿತು. | Kannada Prabha

ಸಾರಾಂಶ

ಹಳೇಬೀಡಿನ ಸರ್ಕಾರಿ ಕೆಪಿಎಸ್ ಪ್ರೌಢಶಾಲೆ ಅತ್ಯುತ್ತಮವಾಗಿ ದಾಖಲಾತಿ ನೀಡಿದ ೨೦೨೫-೨೬ ಸಾಲಿನ ಎಸ್.ಎಸ್.ಎಲ್.ಸಿ ೧೦೦% ಫಲಿತಾಂಶ ಹಾಗೂ ೬೦೧ ಅಂಕ ಪಡೆದಂತ ಜಿಲ್ಲೆಯ ಏಕೈಕ ಸರ್ಕಾರಿ ಶಾಲೆಯಾಗಿದೆ. ಈ ಶಾಲೆಯಲ್ಲಿ ಸುಮಾರು ೫೦೦ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು ಈ ಶಾಲೆಗೆ ಗಣಿತ ಶಿಕ್ಷಕರಾಗಿ ಪ್ರಸನ್ನ ಕುಮಾರ್‌ ೫ ವರ್ಷಗಳ ಹಿಂದೆ ಬಂದು ನಿರಂತರವಾಗಿ ಮಕ್ಕಳಿಗೆ ಪ್ರೀತಿಯ ಶಿಕ್ಷಕರಾಗಿ ಇಂದು ನಿವೃತ್ತಿಯಾದರು. ಸಮಾರಂಭದಲ್ಲಿ ಮಕ್ಕಳು ಕಣ್ಣೀರು ಹಾಕುತ್ತ ಶಿಕ್ಷಕರ ಬಗ್ಗೆ ಮಾತನಾಡಿದರು. ನಿವೃತ್ತ ಉಪ ಪ್ರಾಂಶುಪಾಲರಾದ ಮುಳ್ಳಯ್ಯ ಮಾತನಾಡುತ್ತಾ, ಸರ್ಕಾರಿ ನೇಮಕಾತಿ, ವರ್ಗಾವಣೆ, ನಿವೃತ್ತಿ ಸಾಮಾನ್ಯ. ನೇಮಕಾತಿಯಲ್ಲಿ ಸಂತೋಷ, ಜೀವನ ಸಾಗಿದಂತೆ ವರ್ಗಾವಣೆ, ಕೊನೆಯಲ್ಲಿ ನಿವೃತ್ತಿ ಸಮಯದಲ್ಲಿ ಮನಸ್ಸಿಗೆ ನೋವಾಗುತ್ತದೆ. ಏಕೆಂದರೆ ಇಷ್ಟು ವರ್ಷಗಳು ಮಕ್ಕಳೊಂದಿಗಿನ ಅತ್ಯುತ್ತಮ ಬಾಂಧವ್ಯ ಕಾರಣ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಹಳೇಬೀಡು

ಇಲ್ಲಿನ ಸರ್ಕಾರಿ ಕೆ.ಪಿ.ಎಸ್ ಶಾಲೆಯ ಪ್ರೌಢಶಾಲೆ ವಿಭಾಗದಲ್ಲಿ ಗಣಿತ ವಿಷಯದ ಶಿಕ್ಷಕರಾಗಿ ಐದು ವರ್ಷಗಳ ಸೇವೆಯನ್ನು ನಿರಂತರವಾಗಿ ಸಲ್ಲಿಸಿ ನಿವೃತ್ತರಾದ ಶಿಕ್ಷಕ ಪ್ರಸನ್ ಕುಮಾರ್‌ಗೆ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಪಕ್ಕದ ಶಾಲೆ ಸಹದ್ಯೋಗಿಗಳು ಹಾಗೂ ತಾಲೂಕು- ಜಿಲ್ಲಾದ್ಯಂತ ವೃತ್ತಿ ಬಾಂಧವರು ಆತ್ಮೀಯವಾಗಿ ಬೀಳ್ಕೊಡುಗೆ ನೀಡಿದರು.

ಹಳೇಬೀಡಿನ ಸರ್ಕಾರಿ ಕೆಪಿಎಸ್ ಪ್ರೌಢಶಾಲೆ ಅತ್ಯುತ್ತಮವಾಗಿ ದಾಖಲಾತಿ ನೀಡಿದ ೨೦೨೫-೨೬ ಸಾಲಿನ ಎಸ್.ಎಸ್.ಎಲ್.ಸಿ ೧೦೦% ಫಲಿತಾಂಶ ಹಾಗೂ ೬೦೧ ಅಂಕ ಪಡೆದಂತ ಜಿಲ್ಲೆಯ ಏಕೈಕ ಸರ್ಕಾರಿ ಶಾಲೆಯಾಗಿದೆ. ಈ ಶಾಲೆಯಲ್ಲಿ ಸುಮಾರು ೫೦೦ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು ಈ ಶಾಲೆಗೆ ಗಣಿತ ಶಿಕ್ಷಕರಾಗಿ ಪ್ರಸನ್ನ ಕುಮಾರ್‌ ೫ ವರ್ಷಗಳ ಹಿಂದೆ ಬಂದು ನಿರಂತರವಾಗಿ ಮಕ್ಕಳಿಗೆ ಪ್ರೀತಿಯ ಶಿಕ್ಷಕರಾಗಿ ಇಂದು ನಿವೃತ್ತಿಯಾದರು. ಸಮಾರಂಭದಲ್ಲಿ ಮಕ್ಕಳು ಕಣ್ಣೀರು ಹಾಕುತ್ತ ಶಿಕ್ಷಕರ ಬಗ್ಗೆ ಮಾತನಾಡಿದರು. ನಿವೃತ್ತ ಉಪ ಪ್ರಾಂಶುಪಾಲರಾದ ಮುಳ್ಳಯ್ಯ ಮಾತನಾಡುತ್ತಾ, ಸರ್ಕಾರಿ ನೇಮಕಾತಿ, ವರ್ಗಾವಣೆ, ನಿವೃತ್ತಿ ಸಾಮಾನ್ಯ. ನೇಮಕಾತಿಯಲ್ಲಿ ಸಂತೋಷ, ಜೀವನ ಸಾಗಿದಂತೆ ವರ್ಗಾವಣೆ, ಕೊನೆಯಲ್ಲಿ ನಿವೃತ್ತಿ ಸಮಯದಲ್ಲಿ ಮನಸ್ಸಿಗೆ ನೋವಾಗುತ್ತದೆ. ಏಕೆಂದರೆ ಇಷ್ಟು ವರ್ಷಗಳು ಮಕ್ಕಳೊಂದಿಗಿನ ಅತ್ಯುತ್ತಮ ಬಾಂಧವ್ಯ ಕಾರಣ ಎಂದು ಹೇಳಿದರು. ಪತ್ರಕರ್ತ ರಘುನಾಥ್ ಮಾತನಾಡುತ್ತಾ, ಪ್ರಸನ್ನಕುಮಾರ್‌ ಶಾಲೆಗೆ ಬಂದ ಮೇಲೆ ಉತ್ತಮದ ವಾತಾವರಣ, ಶಿಸ್ತು ಬದ್ಧತೆ, ಸಮಯದ ಬಗ್ಗೆ ಅರಿವು ಮೂಡಿಸಿ ಪ್ರತಿವರ್ಷ ಗಣಿತ ವಿಷಯದಲ್ಲಿ ಮಕ್ಕಳು ತೇರ್ಗಡೆ ಹೊಂದುತ್ತಿದ್ದರು. ಮಕ್ಕಳಿಗೆ ಗಣಿತ ವಿಜ್ಞಾನ ಎಂದರೆ ಕಷ್ಟ ಗಣಿತ ವಿಷಯದ ಬಗ್ಗೆ ಸುಲಭವಾಗಿ ಲೆಕ್ಕವನ್ನು ಬಿಡಿಸಲು ಸೂತ್ರವನ್ನು ಹೇಳಿಕೊಟ್ಟರು. ಬೆಳಗ್ಗೆ ಎದ್ದು ಮಕ್ಕಳಿಗೆ ವಿಶೇಷವಾದ ತರಬೇತಿ, ಸಂಜೆ ಅವರೊಂದಿಗೆ ಕ್ರೀಡೆಯಲ್ಲಿ ಭಾಗವಹಿಸಿ ಮಕ್ಕಳ ವಾತ್ಸಲ್ಯವನ್ನು ಕಂಡಂತಹ ಪ್ರೀತಿಯ ಶಿಕ್ಷಕ ಪಿ ಕೆ. ತಮ್ಮ ಸಾಧನ ಉಪಕರಣಗಳು ಅಂದರೆ ವಿಜ್ಞಾನ ಪ್ರಯೋಗಾಲಯದ ವಸ್ತುಗಳು ಹಾಗೂ ಹಲವಾರು ಗಣಿತ, ವಿಜ್ಞಾನ ಪುಸ್ತಕಗಳನ್ನು ಶಾಲೆಯ ಗ್ರಂಥಾಲಯಕ್ಕೆ ನೀಡಿ ತಮ್ಮ ನಿವೃತ್ತಿಯನ್ನು ಹೊಂದಿದ್ದು ಇದು ಅಚ್ಚರಿಯ ವಿಚಾರವಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸೋಮಶೇಖರ್‌ ಮಾತನಾಡುತ್ತ, ನಮ್ಮ ಶಾಲೆಗೆ ಒಳ್ಳೆಯ ಶಿಕ್ಷಕರು ಬಂದು ಶಾಲೆಗೆ ಒಳ್ಳೆಯ ಹೆಸರನ್ನು ನೀಡಿರುತ್ತಾರೆ. ಇದು ಹಾಸನ ಜಿಲ್ಲೆಗೆ ಅತ್ಯುತ್ತಮವಾದ ಸರ್ಕಾರಿ ಶಾಲೆಯಾಗಿದೆ. ಸುಮಾರು ೬೦ ವರ್ಷಗಳ ಸಾಧನೆಯ ಶಾಲೆಯಾಗಿದೆ. ಈ ಕಾರ್ಯಕ್ರಮದಲ್ಲಿ ಉಪಪ್ರಾಂಶಪಾಲ ಪ್ರದೀಪ್‌ ಕುಮಾರ್‌, ಪ್ರಾಂಶುಪಾಲದ ವಿನುತ, ಪಿ.ಕೆ. ಅವರ ತಾಯಿ, ಪತ್ನಿ, ಅಣ್ಣ-ತಮ್ಮ, ಪುತ್ರ, ಸಹದ್ಯೋಗಿಗಳು ಅಕ್ಕಪಕ್ಕ ಶಾಲೆಗಳ ಶಿಕ್ಷಕ ವೃಂದ ಗೌರವ ಸಮರ್ಪಣೆ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಗರ ಮಕ್ಕಳಿಗೆ ಹಳ್ಳಿ ಜೀವನ ಪರಿಚಯಿಸುವ ‘ಗ್ರಾಮಾನುಭವ’ಕ್ಕೆ ಚಾಲನೆ
ಕಡಲ ಜೈವಿಕ ತಂತ್ರಜ್ಞಾನ ನೀತಿಗೆ ಅನುಮೋದನೆ: ರಿಝ್ವಾನ್ ಅರ್ಷದ್