ಮನೆಯವರ ಸಹಕಾರದಿಂದ ಮಹಿಳೆಯಿಂದ ಅದ್ಭುತ ಸಾಧನೆ ಸಾಧ್ಯ: ಚಂಪಾಶೆಟ್ಟಿ

KannadaprabhaNewsNetwork |  
Published : Jan 12, 2024, 01:45 AM IST
ಮಮತ ಮಹಿಳಾ ಸಮಾಜದ ವಾರ್ಷಿಕೋತ್ಸವ ಕಾರ್ಯಕ್ರಮ | Kannada Prabha

ಸಾರಾಂಶ

ತರೀಕೆರೆಯಲ್ಲಿ ಏರ್ಪಡಿಸಿದ್ದ ಮಮತ ಮಹಿಳಾ ಸಮಾಜದ ವಾರ್ಷಿಕೋತ್ಸವದಲ್ಲಿ ಚಲನಚಿತ್ರ ನಿರ್ದೇಶಕಿ, ಕಂಠದಾನ ಕಲಾವಿದೆ ಚಂಪಾಶೆಟ್ಟಿ ಮಾತನಾಡಿ ಮನೆಯವರು ಸಹಕಾರ ನೀಡಿದರೆ ಮಹಿಳೆಯರು ಅದ್ಭುತವಾದ ಸಾಧನೆ ಮಾಡುತ್ತಾರೆ ಎಂದರು.

ಕನ್ನಡಪ್ರಭ ವಾರ್ತೆ, ತರೀಕೆರೆ

ಮನೆಯವರು ಸಹಕಾರ ನೀಡಿದರೆ ಮಹಿಳೆಯರು ಅದ್ಭುತವಾದ ಸಾಧನೆ ಮಾಡುತ್ತಾರೆ ಎಂದು ಬೆಂಗಳೂರು ಚಲನಚಿತ್ರ ನಿರ್ದೇಶಕಿ, ಕಂಠದಾನ ಕಲಾವಿದೆ ಚಂಪಾಶೆಟ್ಟಿ ಹೇಳಿದ್ದಾರೆ.

ಪಟ್ಟಣದ ಅರಮನೆ ಹೋಟೆಲ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಮಮತ ಮಹಿಳಾ ಸಮಾಜದ ವಾರ್ಷಿಕೋತ್ಸವದಲ್ಲಿ

ಮಾತನಾಡಿದರು. ಪ್ರತಿಯೊಬ್ಬರಲ್ಲೂ ಒಂದೊಂದು ಪ್ರತಿಭೆ ಇರುತ್ತದೆ. ನಮ್ಮನ್ನು ನಾವು ಗುರುತಿಸಿಕೊಂಡಾಗ ಸಾಧನೆ ಸಾಧ್ಯ. ಮಹಿಳೆಯರನ್ನು ಮನೆಯಲ್ಲೇ ಕೂರಿಸುವುದು ಸರಿಯಲ್ಲ. ಮಹಿಳೆ ಗಂಡಿಗೆ ಜೊತೆ ಜೊತೆಯಾಗಿ ನಡೆದುಕೊಂಡು ಹೋಗುವ ಕಾಲ ಬರಬೇಕು ಎಂದು ಹೇಳಿದರು.

ಪ್ರತಿಯೊಬ್ಬರಲ್ಲೂ ಒಂದೊಂದು ನೋವು ಇರುತ್ತದೆ, ನಾನು ಹೆಚ್ಚಾಗಿ ಮಹಿಳಾ ಕಥೇನೆ ಹೇಳುವುದು, ಕನ್ನಡದಲ್ಲಿ ಹೆಚ್ಚು ಕಲಾತ್ಮಕ ಚಿತ್ರಗಳು ಬರಬೇಕು ಎಂದು ಅವರು ಮಮತ ಮಹಿಳಾ ಸಮಾಜದ ಹೆಸರು ತುಂಬಾ ಚೆನ್ನಾಗಿದೆ, ಮಹಿಳೆ ಎಂದರೆ ಮಮತೆ ಎಂದರು.

ಮಮತ ಮಹಿಳಾ ಸಮಾಜದ ಅಧ್ಯಕ್ಷೆ ವಿಜಯಪ್ರಕಾಶ್ ಮಾತನಾಡಿ ಸಂಸ್ಥಾಪಕ ಅಧ್ಯಕ್ಷೆ ಸುಶೀಲಮ್ಮ ರುದ್ರಯ್ಯ ಸಮಾರಂಭದ ಉದ್ಘಾಟನೆ ನೆರವೇರಿಸಿರುವುದು ಸಂತೋಷ ತಂದಿದೆ. ಸಮಾಜದ ಅಧ್ಯಕ್ಷಸ್ಥಾನದ ತಮ್ಮ ಅವಧಿಯ ಕಾರ್ಯಕ್ರಮಗಳು ಗಂಗಾಪೂಜೆಯಿಂದ ಪ್ರಾರಂಭವಾಗಿದೆ. 75ನೇ ಸ್ವಾತಂತ್ರ್ಯೋತ್ಸವ ಸಮಾರಂಭ, ಸೈನಿಕರ ನಿಧಿಗೆ ನಿಧಿ ಅರ್ಪಣೆ, ತಾಯಿ ಮನೆಗೆ ನಿಧಿ ಅರ್ಪಣೆ, ಅಂಧರ ಶಾಲೆಗೆ ನಿಧಿ ಅರ್ಪಣೆ ಸಂಘಕ್ಕೆ ದೊರೆತ ಸಾಂಘಿಕ ಪ್ರಶಸ್ತಿ ಸ್ವೀಕಾರ, ಶೌಚಾಲಯ ನಿರ್ಮಾಣ ಇತ್ಯಾದಿ ಹಲವು ಹತ್ತು ಕಾರ್ಯಕ್ರಮಗಳನ್ನು ಸಂಘದ ಸದಸ್ಯೆಯರ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರ ಸಹಕಾರದಿಂದ ನಿರ್ವಹಿಸಲಾಗಿದೆ. ಇದಕ್ಕೆ ಸಹಕರಿಸಿದ ಸಮಾಜದ ಎಲ್ಲ ಸದಸ್ಯೆಯರಿಗೆ ಕೃತಜ್ಞತೆ ಸ್ಲಲಿಸಿದರು.

ಸಮಾಜದ ಸಂಸ್ಥಾಪಕ ಅಧ್ಯಕ್ಷೆ ಸುಶೀಲಮ್ಮ ರುದ್ರಯ್ಯ, ಸದಸ್ಯರಾದ ಲತಾ ಗೋಪಾಲಕೃಷ್ಣ, ಹನುಮಂತಮ್ಮ, ಹಿಮಂತಿನಿ ತಮ್ಮ ಅನಿಸಿಕೆಗಳನ್ನು ತಿಳಿಸಿದರು. ಪ್ರತಿಭಾ ಪುರಸ್ಕಾರ, ವಿವಿಧ ಆಟೋಟಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಶಾರದ ಅಶೋಕ್ ಕುಮಾರ್, ರೋಹಿಣಿ ನರಸಿಂಹಮೂರ್ತಿ ಅವರನ್ನು ಸನ್ಮಾನಿಸಲಾಯಿತು.

ರೇಣು ನವೀನ್, ಕಾರ್ಯದರ್ಶಿ ಸಹನ ರಾಘವೇಂದ್ರ , ರಶ್ಮಿ ರಮೇಶ್ , ಮಾಲಾ ಶಿವಕುಮಾರ್ ಸಮಾಜದ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.11ಕೆಟಿಆರ್.ಕೆ.4ಃ

ತರೀಕೆರೆ ಮಮತ ಮಹಿಳಾ ಸಮಾಜದಿಂದ ಏರ್ಪಡಿಸಿದ್ದ ವಾರ್ಷಿಕೋತ್ಸವ ಉದ್ಘಾಟನೆಯನ್ನು ಸಮಾಜದ ಸಂಸ್ಥಾಪಕ ಅಧ್ಯಕ್ಷೆ ಸುಶೀಲಮ್ಮ ರುದ್ರಯ್ಯ ನೆರವೇರಿಸಿದರು. ಮಮತ ಮಹಿಳಾ ಸಮಾಜದ ಅಧ್ಯಕ್ಷೆ ವಿಜಯಪ್ರಕಾಶ್, ಚಲನಚಿತ್ರ ನಿರ್ದೇಶಕಿ, ಕಂಠದಾನ ಕಲಾವಿದೆ ಚಂಪಾಶೆಟ್ಟಿ ಮತ್ತಿತರರು ಇದ್ದಾರೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ