ಮುಂಡಗೋಡ: ೧೦೮ ತರ್ತು ಚಿಕಿತ್ಸಾ ವಾಹನದಲ್ಲಿಯೇ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ ಘಟನೆ ಶುಕ್ರವಾರ ನಡೆದಿದೆ. ತಾಲೂಕಿನ ಉಗ್ಗಿನಕೇರಿ ಗ್ರಾಮದ ಸವಿತಾ ಶರಣಪ್ಪ ಉಪ್ಪಾರ ಎಂಬ ಮಹಿಳೆಯೇ ಆ್ಯಂಬುಲೆನ್ಸ್‌ನಲ್ಲಿ ಮಗುವಿಗೆ ಜನ್ಮ ನೀಡಿದವರು. ಇವರಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ಸ್ಥಳೀಯ ಆಶಾ ಕಾರ್ಯಕರ್ತೆಯೊಬ್ಬರು ೧೦೮ಗೆ ಕರೆ ಮಾಡಿದ್ದಾರೆ. ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಧಾವಿಸಿದ ೧೦೮ ತುರ್ತು ವೈದ್ಯಕೀಯ ತಂತ್ರಜ್ಞ ಧನರಾಜ್ ಮತ್ತು ಸಿಬ್ಬಂದಿ ಪ್ರಕಾಶ್ ಅವರು ಗರ್ಭಿಣಿಯನ್ನು ಆಸ್ಪತ್ರೆಗೆ ಕರೆತರುವ ವೇಳೆಯಲ್ಲಿ ನೋವು ಹೆಚ್ಚಾಗಿ ಮಾರ್ಗಮಧ್ಯ ಆ್ಯಂಬುಲೆನ್ಸ್‌ನಲ್ಲಿಯೇ ಸುರಕ್ಷಿತವಾಗಿ ಹೆರಿಗೆ ಮಾಡಿಸಿದರು. ಬಳಿಕ ತಾಯಿ ಮಗುವನ್ನು ಮುಂಡಗೋಡ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ.ರಸ್ತೆ ದುರಸ್ತಿಗೊಳಿಸಿದ ಗ್ರಾಮಸ್ಥರು
ಗೋಕರ್ಣ: ಮಣ್ಣು ಹಾಕಿ ರಸ್ತೆಯ ಹೊಂಡ ಮುಚ್ಚಿ ಗಣೇಶನ ಮೂರ್ತಿ ವಿರ್ಸಜನೆಗೆ ಒಯ್ದ ಘಟನೆ ಇಲ್ಲಿ ಓಂ ಬೀಚ್ ರಸ್ತೆಯಲ್ಲಿ ನಡೆದಿದೆ.ಅಶೋಕೆ ಗ್ರಾಮದವರು ಪ್ರತಿಷ್ಠಾಪಿಸಿದ ಸಾರ್ವಜನಿಕ ಗಣೇಶ ಮೂರ್ತಿ ವಿರ್ಸನೆ ತೆರಳಲು ರಸ್ತೆಯ ಬೃಹತ್ ಹೊಂಡಗಳಿಂದ ವಾಹನ ಹೋಗಲು ತೊಂದರೆಯಾಗಿತ್ತು. ಇದರಿಂದ ಗ್ರಾಮಸ್ಥರೇ ಹೊಂಡ ಮುಚ್ಚಿದ ನಂತರ ಮೆರವಣಿಗೆ ನಡೆಯಿತು.ವಿಶ್ವವಿಖ್ಯಾತ ಓಂ ಬೀಚ್‌ಗೆ ತೆರಳುವ ಮುಖ್ಯ ಮಾರ್ಗದ ಅಶೋಕೆ ಕ್ರಾಸ್ ಬಳಿ ಅರ್ಧ ಕಿಮೀಗೂ ಹೆಚ್ಚು ರಸ್ತೆ ಸಂಪೂರ್ಣ ಹಾಳಾಗಿ ಹಲವು ದಿನಗಳೆ ಕಳೆದಿದೆ. ಆದರೆ ಸ್ಥಳೀಯ ಆಡಳಿತವಾಗಲಿ, ಸಂಬಂಧಿಸಿದ ಇಲಾಖೆ ಸರಿಪಡಿಸದೆ ಬಿಟ್ಟಿದ್ದು, ನಿರ್ಲಕ್ಷ್ಯಕ್ಕೆ ಬೇಸತ್ತು ಜನರೇ ದುರಸ್ತಿ ಕಾರ್ಯ ಕೈಗೊಂಡಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಹ ಅಸಮಾಧಾನ ಹಂಚಿಕೊಂಡಿದ್ದಾರೆ. ಇನ್ನಾದರೂ ಜಡತ್ವ ಹೊಂದಿದ ಆಡಳಿತ ಎಚ್ಚೆತ್ತು ಸರಿಪಡಿಸುವ ಕಾರ್ಯ ಮುಂದಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.ಈ ಭಾಗದ ಹಲವೆಡೆ ಬೀದಿದೀಪಗಳು ಹಾಳಾಗಿದ್ದು, ಗಣೇಶನ ವಿರ್ಸಜನೆ ವೇಳೆ ಮುಖ್ಯ ಕಡಲತೀರದ ಕತ್ತಲೆಯ ಕೂಪವಾಗಿತ್ತು.