ಬೈಕ್‌ ನಿಯಂತ್ರಣ ತಪ್ಪಿ ಯುವಕ ಸಾವು

KannadaprabhaNewsNetwork |  
Published : Oct 03, 2023, 06:03 PM IST
ಪೋಟೋ 2ಮಾಗಡಿ2: ಮೃತಯುವಕದರ್ಶನ್ ಭಾವಚಿತ್ರ. | Kannada Prabha

ಸಾರಾಂಶ

ಮಾಗಡಿ: ಸ್ನೇಹಿತನ ಮಗಳ ಹುಟ್ಟುಹಬ್ಬದಲ್ಲಿ ಪಾಲ್ಗೊಂಡು ಮನೆಗೆ ವಾಪಸ್‌ ಆಗುತ್ತಿದ್ದ ಯುವಕನ ಬೈಕ್‌ ರಸ್ತೆಯಲ್ಲಿ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ತಲೆಗೆ ತೀವ್ರಗಾಯವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಮಾಗಡಿ: ಸ್ನೇಹಿತನ ಮಗಳ ಹುಟ್ಟುಹಬ್ಬದಲ್ಲಿ ಪಾಲ್ಗೊಂಡು ಮನೆಗೆ ವಾಪಸ್‌ ಆಗುತ್ತಿದ್ದ ಯುವಕನ ಬೈಕ್‌ ರಸ್ತೆಯಲ್ಲಿ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ತಲೆಗೆ ತೀವ್ರಗಾಯವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ತಾಲೂಕಿನ ಜುಟ್ಟನಹಳ್ಳಿ ಬಲರಾಮಣ್ಣನವರ ಪುತ್ರ ದರ್ಶನ್(26), ಮೃತ ಯುವಕ. ಮಾಗಡಿ- ಹುಲಿಯೂರುದುರ್ಗ ಮುಖ್ಯರಸ್ತೆಯ ಜುಟ್ಟನಹಳ್ಳಿ ಗೇಟ್‌ ಬಳಿ ಯುವಕನ ಮನೆಯಿದ್ದು ಜುಟ್ಟನಹಳ್ಳಿ ಗ್ರಾಮದಲ್ಲಿ ಸ್ನೇಹಿತನ ಮಗಳ ಹುಟ್ಟಿದ ಹಬ್ಬದ ಪ್ರಯುಕ್ತ ಪೂಜೆ ಇಟ್ಟುಕೊಂಡಿದ್ದರು. ಭಾನುವಾರ ರಾತ್ರಿ 8.30ರ ಸಮಯದಲ್ಲಿ ದರ್ಶನ್‌ ಎಲೆಕ್ಟ್ರಿಕ್ ಬೈಕ್ ನಲ್ಲಿ ಮನೆಗೆ ಹಿಂತಿರುಗುವಾಗ ಜುಟ್ಟನಹಳ್ಳಿ ಮುಖ್ಯರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಮೃತನ ಆತ್ಮಕ್ಕೆ ಶಾಸಕ ಬಾಲಕೃಷ್ಣ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಮಾಜಿ ಶಾಸಕ ಎ.ಮಂಜುನಾಥ್, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಎನ್.ಅಶೋಕ್ ಇತರರ ಸಂತಾಪ ಸೂಚಿಸಿದ್ದಾರೆ.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ