ಆಧಾರ್ ಕೇಂದ್ರ ಸ್ಥಗಿತ: ಗ್ರಾಮಸ್ಥರ ಪರದಾಟ

KannadaprabhaNewsNetwork |  
Published : Sep 25, 2026, 02:15 AM IST
ಸಸಸಸಸ | Kannada Prabha

ಸಾರಾಂಶ

ಆಧಾರ್ ಕಾರ್ಡ್‌ಗಳು ಹತ್ತು ವರ್ಷಗಳಾದರೂ ಈಕೆವೈಸಿ ಮಾಡಿಸದ ಕಾರಣ ಪಡಿತರ ಈಕೆವೈಸಿ ಮಾಡಿಸಲು ಸಾಧ್ಯವಾಗುತ್ತಿಲ್ಲ

ತೆಕ್ಕಲಕೋಟೆ: ತೆಕ್ಕಲಕೋಟೆ ಹೋಬಳಿಯ ನಾಡ ಕಚೇರಿಯಲ್ಲಿದ್ದ ಆಧಾರ್ ನೋಂದಣಿ ಕೇಂದ್ರ ಕೆಲವು ತಿಂಗಳಿಂದ ಸ್ಥಗಿತಗೊಂಡಿದೆ. ಇದರಿಂದ ಆಧಾರ್ ಕಾರ್ಡ್ ತಿದ್ದುಪಡಿ ಮತ್ತು ಹೊಸ ಆಧಾರ್ ಕಾರ್ಡ್ ಮಾಡಿಸುವ ಸಾರ್ವಜನಿಕರು ಪರದಾಡುವಂತಾಗಿದೆ.

ತೆಕ್ಕಲಕೋಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಆಧಾರ್ ಸೇವೆ ಪಡೆಯುವುದು ಸಮಸ್ಯೆಯಾಗಿದೆ. 20-30 ಕಿಮೀ ದೂರದಿಂದ ವಯಸ್ಕರು, ಮಹಿಳೆಯರು, ಮಕ್ಕಳು ಪ್ರತಿ ದಿನ ತಾಲೂಕು ಕೇಂದ್ರಕ್ಕೆ ಹೋಗುವುದು ಕಷ್ಟ ಸಾಧ್ಯವಾಗಿದೆ. ತಹಸೀಲ್ದಾರ್ ಕಚೇರಿ, ಹಚ್ಚೋಳ್ಳಿ, ಕರೂರು ಆಧಾರ್ ಕೇಂದ್ರಗಳಲ್ಲಿ ಪ್ರತ್ಯೇಕ ಆಧಾರ್ ಅಪರೇಟರ್‌ಗಳನ್ನು ನೇಮಿಸಿದಂತೆ ತೆಕ್ಕಲಕೋಟೆ ಹೋಬಳಿ ಮಟ್ಟದಲ್ಲಿ ಆಧಾರ್ ಕೇಂದ್ರ ನಿರ್ಮಾಣ ಮಾಡಿ ಪ್ರತ್ಯೇಕ ಅಪರೇಟರ್ ನೇಮಿಸಿ ಅಂಗವಿಕಲರು, ವಯಸ್ಕರು ಮತ್ತು ಮಹಿಳೆಯರಿಗೆ ಅನುಕೂಲ ಮಾಡಿಕೊಡಬೇಕೆಂದು ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಇತ್ತೀಚಿಗೆ ರಾಜ್ಯ ಸರ್ಕಾರ ಪಡಿತರ ಚೀಟಿಯಲ್ಲಿನ ಎಲ್ಲ ಸದಸ್ಯರು ಈಕೆವೈಸಿ ಮಾಡಿಸುವುದು ಕಡ್ಡಾಯ ಮಾಡಿರುವುದರಿಂದ ಬರಗಾಲಕ್ಕೆ ತತ್ತರಿಸಿ ಬೇರೆ ಪ್ರದೇಶಗಳಿಗೆ ವಲಸೆ ಹೋಗಿರುವವರು ತಂಡೋಪತಂಡವಾಗಿ ಗ್ರಾಮಗಳಿಗೆ ಆಗಮಿಸುತ್ತಿದ್ದು, ಆಧಾರ್ ಕಾರ್ಡ್‌ಗಳು ಹತ್ತು ವರ್ಷಗಳಾದರೂ ಈಕೆವೈಸಿ ಮಾಡಿಸದ ಕಾರಣ ಪಡಿತರ ಈಕೆವೈಸಿ ಮಾಡಿಸಲು ಸಾಧ್ಯವಾಗುತ್ತಿಲ್ಲ. ಪಡಿತರ ವಿತರಕರು ಆಧಾರ್ ನವೀಕರಣ ಮಾಡಿದರೇ ಮಾತ್ರ ಈಕೆವೈಸಿ ಸಾಧ್ಯವಾಗುತ್ತದೆ ಎಂದಾಗ ಪಾಲಕರು ತಮ್ಮ ಮಕ್ಕಳನ್ನು ಕರೆದುಕೊಂಡು ಬೆಳಗಿನ ಜಾವ ಆಧಾರ್ ಸೆಂಟರ್‌ಗಳಿಗೆ ತಿರುಗಿದರೂ ಟೋಕನ್ ಸಿಗದೇ ಮನೆಗೆ ಹಿಂದಿರುಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಲೂಕಿನಲ್ಲಿ ತಹಸೀಲ್ದಾರ್ ಕಚೇರಿ, ಹಚ್ಚೋಳ್ಳಿ, ಕರೂರು ಸೇರಿದಂತೆ ಮೂರು ಹೋಬಳಿ ಕೇಂದ್ರಗಳಲ್ಲಿ ದಿನಕ್ಕೆ 20 ರಿಂದ 25ಜನರಿಗೆ ಮಾತ್ರ ಆಧಾರ್ ಸೇವೆ ಪಡೆಯಲು ಅವಕಾಶವಿರುತ್ತದೆ. ಕೆಲವೊಂದು ಕೇಂದ್ರಗಳ ಮುಂಭಾಗದಲ್ಲಿ ಸಾರ್ವಜನಿಕರು ರಾತ್ರಿಯಿಡೀ ಮಲಗಿಕೊಂಡು ಹಾಗೂ ಪ್ರತಿದಿನ ಬೆಳಗ್ಗೆ 4 ಗಂಟೆಯಿಂದಲೇ 50 ರಿಂದ 60 ಜನರು ಸಾಲಿನಲ್ಲಿ ಕಾಯುವಂತಾಗಿದೆ. ಸರ್ವರ್ ಸರಿಯಿದ್ದರೆ ಮಾತ್ರ ಟೋಕನ್ ಪೂರ್ತಿಯಾಗುತ್ತವೆ.

ಮುಂದಿನ ವಾರದಿಂದ ಮೂರು ದಿನ ಹಚ್ಚೋಳ್ಳಿ ಆಧಾರ್ ಅಪರೇಟರ್ ನ್ನು ತೆಕ್ಕಲಕೋಟೆಗೆ ಆಧಾರ್ ಸೇವೆ ನೀಡಲು ಆದೇಶ ಮಾಡಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಜರುಗಿಸಲಾಗುವುದು ಎಂದು ತಹಸೀಲ್ದಾರ್‌ ಗೌಸೀಯಾ ಬೇಗಂ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರಬ್ಬಿ ಸಮುದ್ರದಲ್ಲಿ ಸಾರ್ವಜನಿಕ ಗಣಪತಿಗಳ ಅದ್ಧೂರಿ ವಿಸರ್ಜನೆ
ಕೊಪ್ಪಳದಲ್ಲಿ ಬಿಜೆಪಿಯಿಂದ ರಾಜ್ಯ ಸರ್ಕಾರದ ಶವಯಾತ್ರೆ