ಎಂಕಾನ್‌ ಡೀನ್‌ ಡಾ.ನೊರೊನ್ಹಾಗೆ ಎಎಎನ್‌ ಫೆಲೋಶಿಪ್

KannadaprabhaNewsNetwork |  
Published : Jul 04, 2026, 02:30 AM IST
ಎಂಕಾನ್‌ ಡೀನ್‌ ಡಾ.ನೊರೊನ್ಹಾ | Kannada Prabha

ಸಾರಾಂಶ

ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ (ಮಾಹೆ) ವಿವಿಯ ಅಂಗಸಂಸ್ಥೆ ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್‌ (ಎಂಕಾನ್‌) ಇದರ ಡೀನ್ ಡಾ. ಜುಡಿತ್ ಏಂಜಲಿಟಾ ನೊರೊನ್ಹಾ ಅವರು ಅಮೆರಿಕನ್ ಅಕಾಡೆಮಿ ಆಫ್ ನರ್ಸಿಂಗ್‌ನ (ಎಎಎನ್‌) 2026ನೇ ಸಾಲಿನ ಪ್ರತಿಷ್ಠಿತ ಫೆಲೋ ಆಗಿ ಆಯ್ಕೆಯಾಗಿದ್ದಾರೆ.

ಮಣಿಪಾಲ: ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ (ಮಾಹೆ) ವಿವಿಯ ಅಂಗಸಂಸ್ಥೆ ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್‌ (ಎಂಕಾನ್‌) ಇದರ ಡೀನ್ ಡಾ. ಜುಡಿತ್ ಏಂಜಲಿಟಾ ನೊರೊನ್ಹಾ ಅವರು ಅಮೆರಿಕನ್ ಅಕಾಡೆಮಿ ಆಫ್ ನರ್ಸಿಂಗ್‌ನ (ಎಎಎನ್‌) 2026ನೇ ಸಾಲಿನ ಪ್ರತಿಷ್ಠಿತ ಫೆಲೋ ಆಗಿ ಆಯ್ಕೆಯಾಗಿದ್ದಾರೆ.

ನರ್ಸಿಂಗ್ ವೃತ್ತಿಯ ಅತ್ಯುನ್ನತ ಗೌರವವೆಂದೇ ಹೆಸರಾದ ಈ ಎಎಎನ್‌ ಫೆಲೋಶಿಪ್, ಜಾಗತಿಕ ಆರೋಗ್ಯ ರಕ್ಷಣಾ ವಲಯದಲ್ಲಿ ಶಾಶ್ವತ ಛಾಪು ಮೂಡಿಸಿದ ಗಣ್ಯರಿಗೆ ನೀಡುವ ಪ್ರತಿಷ್ಠಿತ ಮನ್ನಣೆಯಾಗಿದೆ. ಶಿಕ್ಷಣ, ಸಂಶೋಧನೆ ಹಾಗೂ ನಾಯಕತ್ವದ ಮೂಲಕ ಆರೋಗ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಜಾಗತಿಕ ನರ್ಸಿಂಗ್ ಸಾಧಕರನ್ನು ಗುರುತಿಸಿ ‘ಅಮೆರಿಕನ್ ಅಕಾಡೆಮಿ ಆಫ್ ನರ್ಸಿಂಗ್’ ಜೂನ್ 25ರಂದು ತನ್ನ 2026ನೇ ಸಾಲಿನ ಫೆಲೋಗಳನ್ನು ಪ್ರಕಟಿಸಿದೆ. ಈ ಅಮೆರಿಕದ 39 ರಾಜ್ಯಗಳ, ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾ ಹಾಗೂ 17 ದೇಶಗಳ ಪ್ರಖ್ಯಾತ ನರ್ಸಿಂಗ್ ನಾಯಕರು ಸ್ಥಾನ ಪಡೆದಿದ್ದಾರೆ. ಅವರಲ್ಲಿ ಡಾ. ನೊರೊನ್ಹಾ ಅವರ ಈ ಆಯ್ಕೆಯು, ಜಾಗತಿಕ ನರ್ಸಿಂಗ್ ಸಾಧಕರ ಶ್ರೇಷ್ಠ ಕೂಟದಲ್ಲಿ ಅವರಿಗೆ ಸ್ಥಾನವನ್ನು ತಂದುಕೊಟ್ಟಿದೆ. ಡಾ. ನೊರೊನ್ಹಾ ಅವರ ಈ ಮಹತ್ವದ ಸಾಧನೆಯನ್ನು ಅಭಿನಂದಿಸಿರುವ ಮಾಹೆಯ ಕುಲಪತಿ ಡಾ. ಶರತ್ ಕೆ. ರಾವ್ ಅವರು, ಡಾ. ಜುಡಿತ್ ಏಂಜಲಿಟಾ ನೊರೊನ್ಹಾ ಅವರು ಎಎಎನ್‌ ಫೆಲೋಶಿಪ್''''''''''''''''ಗೆ ಆಯ್ಕೆಯಾಗಿರುವುದು ಮಾಹೆ ಮತ್ತು ಒಟ್ಟಾರೆ ಭಾರತೀಯ ನರ್ಸಿಂಗ್ ಸಮುದಾಯಕ್ಕೆ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಅಮೆರಿಕದ ವಾಷಿಂಗ್ಟನ್ ಡಿ.ಸಿ.ಯಲ್ಲಿ ಅ. 8 ರಿಂದ 10ರವರೆಗೆ ನಡೆಯುವ ಎಎಎನ್‌ ಹೆಲ್ತ್ ಪಾಲಿಸಿ ಕಾನ್ಫರೆನ್ಸ್ ಕೊನೆಯ ದಿನದಂದು ಈ ಫೆಲೋಗಳ ಪದಗ್ರಹಣ ನಡೆಯಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್‌ಐಆರ್: ಇಲಾಖೆ ಸಿಬ್ಬಂದಿಗೆ ಹೆಚ್ಚುವರಿ ಜವಾಬ್ದಾರಿ
ಬೆಳೆ ವಿಮೆ ಅವಧಿ ವಿಸ್ತರಣೆಗೆ ಕೇಂದ್ರ ಸರ್ಕಾರಕ್ಕೆ ಕೋಟ ಪತ್ರ