ದುರ್ಗುಣ ತ್ಯಜಿಸಿ, ಸದ್ಗುಣ ಅಳವಡಿಸಿಕೊಳ್ಳಿ

KannadaprabhaNewsNetwork | Published : Jun 18, 2024 12:46 AM

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಾದ್ಯಂತ ಸೋಮವಾರ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬವನ್ನು ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುವ ಮೂಲಕ ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಈ ವೇಳೆ ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ:ಪಟ್ಟಣ ಸೇರಿದಂತೆ ತಾಲೂಕಾದ್ಯಂತ ಸೋಮವಾರ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬವನ್ನು ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುವ ಮೂಲಕ ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಈ ವೇಳೆ ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.ಪಟ್ಟಣದ ಇದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಧರ್ಮಗುರು ಹಾಫೀಜ ಮಹ್ಮದ ಅಲಿ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಸಾಮೂಹಿಕ ಪ್ರಾರ್ಥನೆ ನಂತರ ನಿವೃತ್ತ ಪ್ರಾಚಾರ್ಯ ಎಂ.ಡಿ.ಬಳಗಾನೂರ ಮಾತನಾಡಿ, ಬಕ್ರೀದ್ ಹಬ್ಬ ತ್ಯಾಗ, ಬಲಿದಾನದ ಪ್ರತೀಕವಾಗಿದ್ದು, ಎಲ್ಲರೂ ದುರ್ಗಣಗಳನ್ನು ತ್ಯಜಿಸಿ ಸದ್ಗುಣ ಅಳವಡಿಸಿಕೊಳ್ಳಬೇಕು. ಬಲಿದಾನದ ಮೂಲಕ ಆತ್ಮಶುದ್ದಿ ಮಾಡಿಕೊಳ್ಳಲು ಪ್ರಯತ್ನಿಸಬೇಕು. ಇದೇ ಕಾಲದಲ್ಲಿ ಉಳ್ಳವರು ಹಜ್ ಯಾತ್ರೆಗೆ ಹೋಗುತ್ತಾರೆ. ವಿಶ್ವದ ಮೂಲೆ ಮೂಲೆಗಳಿಂದ ಮಕ್ಕಾ ಪಟ್ಟಣಕ್ಕೆ ಆಗಮಿಸಿ ಸೃಷ್ಟಿಕರ್ತನ ಘನತೆಯನ್ನು ಸಾರುತ್ತಾ ಮನುಷ್ಯರೆಲ್ಲರೂ ಸಮಾನರು ಎಂಬ ಸಂದೇಶವನ್ನು ಸಾರುತ್ತಾರೆ.ಹಜ್ ಮತ್ತು ಬಲಿದಾನ ಪ್ರವಾದಿ ಇಬ್ರಾಹಿಂರು ತೋರಿದ ದೇವ ಭಕ್ತಿಯ ಸ್ಮರಣೆಯಾಗಿದೆ. ನಾವು ಹಬ್ಬದ ದಿನದಂದು ಸದಾಚಾರ ಹಾಗೂ ಸಹೋದತೆಯ ಸಂಕಲ್ಪ ಮಾಡಬೇಕೆಂದು ಸಲಹೆ ನೀಡಿದರು.ಸಾಮೂಹಿಕ ಪ್ರಾರ್ಥನೆಯಲ್ಲಿ ಜಾಮಿಯಾ ಮಸೀದಿಯ ಚೇರಮನ್‌ ಶಬ್ಬೀರ ಅಹ್ಮದ ನದಾಫ, ಮುಖಂಡರಾದ ಕಮಲಸಾಬ ಕೊರಬು, ಅಲ್ತಾಫ ಹುಸೇನ ಮುದ್ದೇಬಿಹಾಳ, ನಜೀರ ಗಣಿ, ಅಬ್ದಲರಜಾಕ ಚೌಧರಿ, ಅಲ್ಲಾಭಕ್ಷ ಕೊರಬು, ಮಹ್ಮದ ರಫಿಕ ಹೊಕ್ರಾಣಿ, ಹಾಜಿಲಾಲ ಬಾಗವಾನ, ಮೀರಾಸಾಬ ಕೊರಬು, ಅಬ್ದಲರಜಾಕ ಬಾಗವಾನ, ದಸ್ತಗೀರ ವಜ್ಜಲ, ಜಮೀಲ ಇಬ್ರಾಹಿಂಪುರ, ರಮಜಾನ ಹೆಬ್ಬಾಳ, ಮತಾಬ ಬಮ್ಮನಹಳ್ಳಿ, ನಿಸಾರ್ ಚೌಧರಿ, ಶಫೀಕ್ ಹೊಕ್ರಾಣಿ ,

ಮದಿನಾ ಮಸೀದಿ ಚೇರಮನ್‌ ಮೆಹಬೂಬಸಾಬ ಗಣಿ , ಮಹ್ಮದ ಸಮೀರ್‌ ಕೊರಬು, ಸೋಯಲ್‌ ಕೊರಬು ಸೇರಿದಂತೆ ಇತರರು ಭಾಗವಹಿಸಿದ್ದರು.

Share this article