ಎನ್‌ಪಿಎಸ್ ರದ್ದುಗೊಳಿಸಿ, ಒಪಿಎಸ್ ಜಾರಿಗೆ ಯತ್ನ: ಸಿ.ಎಸ್. ಷಡಾಕ್ಷರಿ

KannadaprabhaNewsNetwork |  
Published : Feb 02, 2025, 01:03 AM IST
ಪೊಟೋ೧ಎಸ್.ಆರ್.ಎಸ್೨ (ಸತತವಾಗಿ ೨ ನೇ ಬಾರಿ ರಾಜ್ಯಾಧ್ಯಕ್ಷರಾಗಿ ಆಯ್ಕೆಗೊಂಡ ಸಿ.ಎಸ್.ಷಡಕ್ಷರಿ ಅವರಿಗೆ ಯಕ್ಷಗಾನದ ಕೀರಿಟ ಹಾಕಿ, ಸನ್ಮಾನಿಸಿ, ಗೌರವಿಸಲಾಯಿತು.) | Kannada Prabha

ಸಾರಾಂಶ

ಸರ್ಕಾರಿ ನೌಕರರದ್ದು ಅದ್ಭುತ ಸಂಘಟನೆಯಾಗಿದ್ದು, ೨೦೨೫ರಲ್ಲಿ ಎನ್‌ಪಿಎಸ್ ರದ್ದುಗೊಳಿಸಿ, ಒಪಿಎಸ್ ಜಾರಿ ಮಾಡುವ ಜತೆಗೆ ೨೦೨೬ರಲ್ಲಿ ಕೇಂದ್ರ ವೇತನ ಆಯೋಗ ಜಾರಿಗೊಳಿಸಲು ಪ್ರಯತ್ನಿಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಭರವಸೆ ನೀಡಿದರು.

ಶಿರಸಿ: ಸರ್ಕಾರಿ ನೌಕರರದ್ದು ಅದ್ಭುತ ಸಂಘಟನೆಯಾಗಿದ್ದು, ೨೦೨೫ರಲ್ಲಿ ಎನ್‌ಪಿಎಸ್ ರದ್ದುಗೊಳಿಸಿ, ಒಪಿಎಸ್ ಜಾರಿ ಮಾಡುವ ಜತೆಗೆ ೨೦೨೬ರಲ್ಲಿ ಕೇಂದ್ರ ವೇತನ ಆಯೋಗ ಜಾರಿಗೊಳಿಸಲು ಪ್ರಯತ್ನಿಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಭರವಸೆ ನೀಡಿದರು.

ಅವರು ಶನಿವಾರ ಇಲ್ಲಿ ಜಿಲ್ಲಾ ಪದಾಧಿಕಾರಿಗಳು ಹಾಗೂ ನಿರ್ದೇಶಕರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.

ವಿವಿಧ ಇಲಾಖೆಗಳಲ್ಲಿ ಖಾಲಿ ಹುದ್ದೆಗಳ ಸಮಸ್ಯೆಗಳಿವೆ. ಆದರೂ ಸರ್ಕಾರಿ ಕಾರ್ಯಕ್ರಮಗಳು ಸರಿಯಾಗಿ ಅನುಷ್ಠಾನಕ್ಕೆ ಸರ್ಕಾರಿ ನೌಕರರು ಶ್ರಮಿಸುತ್ತಿದ್ದು, ದೇಶದ ೨೨ ರಾಜ್ಯದಲ್ಲಿ ಕೇಂದ್ರ ಸರ್ಕಾರದ ವೇತನವಿದೆ. ೨೦೨೬ರಲ್ಲಿ ಕರ್ನಾಟಕದಲ್ಲಿಯೂ ಕೇಂದ್ರ ವೇತನ ಆಯೋಗ ಜಾರಿಗೆ ಹೋರಾಟ ಮಾಡಲಾಗುತ್ತದೆ. ದೇಶದಲ್ಲಿ ಕರ್ನಾಟಕವು ತೆರಿಗೆ ವಸೂಲಿ ಮತ್ತು ಅಭಿವೃದ್ಧಿಯಲ್ಲಿ ೨ನೇ ಸ್ಥಾನದಲ್ಲಿದೆ. ಸರ್ಕಾರದ ಜತೆ ಸಂಘರ್ಷ ಮಾಡಿಕೊಳ್ಳಬಾರದು ಎಂದ ಅವರು, ಸರ್ಕಾರದ ಕೆಲಸವನ್ನು ಮಾಡಿ ದೇವರನ್ನು ಕಾಣಬೇಕು. ಪವಿತ್ರವಾದ ಸರ್ಕಾರಿ ನೌಕರಿ ವೃತ್ತಿಯ ಚ್ಯುತಿ ಬಾರದಂತೆ ಕೆಲಸ ನಿರ್ವಹಿಸಬೇಕಾಗಿದೆ ಎಂದರು.

ಸ್ಥಳೀಯ ಶಾಸಕ ಭೀಮಣ್ಣ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ, ಸಂಘಟನೆಗೆ ಶುಭ ಹಾರೈಸಿದರು.

ಕಾರವಾರ ಶಾಖೆ ಅಧ್ಯಕ್ಷ ಸಂಜೀವಕುಮಾರ ನಾಯ್ಕ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಸಹಾಯಕ ಆಯುಕ್ತೆ ಕೆ.ವಿ. ಕಾವ್ಯಾರಾಣಿ, ಡಿಡಿಪಿಐ ಬಸವರಾಜ ಪಿ., ತಹಸೀಲ್ದಾರ್‌ ಶ್ರೀಧರ ಮುಂದಲಮನಿ, ತಾಪಂ ಇಒ ಸತೀಶ ಹೆಗಡೆ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ, ಜಿಲ್ಲಾ ಶಾಖೆಯ ನಿರ್ದೇಶಕಿ ಹಾಗೂ ವಾಣಿಜ್ಯ ತೆರಿಗೆ ಅಧಿಕಾರಿ ಭುವನೇಶ್ವರಿ ಪಾಟೀಲ, ತಾಲೂಕು ಆರೋಗ್ಯಾಧಿಕಾರಿ ಡಾ. ವಿನಾಯಕ ಭಟ್ಟ, ನಿವೃತ್ತ ಸರ್ಕಾರಿ ನೌಕರರ ಸಂಘ ಅಧ್ಯಕ್ಷ ಬಿ.ಡಿ. ನಾಯಕ, ಶ್ರೀಕೃಷ್ಣ ಕಾಮಕರ, ಸಿದ್ದಾಪುರ ತಾಲೂಕಾಧ್ಯಕ್ಷ ರಾಜೇಶ ನಾಯ್ಕ, ಯಲ್ಲಾಪುರ ತಾಲೂಕಾಧ್ಯಕ್ಷ ಸಂಜೀವಕುಮಾರ ಹೊಸ್ಕೇರಿ, ಹಳಿಯಾಳ ತಾಲೂಕಾಧ್ಯಕ್ಷ ಸತೀಶ ನಾಯ್ಕ, ದಾಂಡೇಲಿ ತಾಲೂಕಾಧ್ಯಕ್ಷ ಸುರೇಶ ನಾಯಕ, ಕಾರವಾರದ ಜಿಲ್ಲಾ ಕಾರ್ಯದರ್ಶಿ ರಮೇಶ ನಾಯಕ, ಗೌರವಾಧ್ಯಕ್ಷ ಎಸ್.ಪಿ. ನಾಯ್ಕ ಜಿಲ್ಲಾ ಖಜಾಂಚಿ ರವಿ ಕೆ., ಜಿಲ್ಲಾ ಕಾರ್ಯದರ್ಶಿ ಡಿ.ಪಿ. ಹೆಗಡೆ, ರಾಜ್ಯ ಪರಿಷತ್ ಸದಸ್ಯ ಕಿರಣಕುಮಾರ ನಾಯ್ಕ ಇದ್ದರು.

ಕಿರಣಕುಮಾರ ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಉದಯ ಭಟ್ಟ ಶಿಕ್ಷಕ ಸಂಗಡಿಗರು ನಾಡಗೀತೆ ಹಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ