ಉತ್ತರ ವಿವಿ ಪರೀಕ್ಷಾ ಶುಲ್ಕ ಹೆಚ್ಚಳಕ್ಕೆ ಎಬಿವಿಪಿ ವಿರೋಧ

KannadaprabhaNewsNetwork |  
Published : Nov 06, 2025, 01:30 AM IST
5ಕೆಬಿಪಿಟಿ.1.ಬಂಗಾಋಪೇಟೆಯಲ್ಲಿ ಎಬಿವಿಪಿ ಕಾರ್ಯಕರ್ತರಿಂದ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ಮಾಡಿದರು. | Kannada Prabha

ಸಾರಾಂಶ

ಸರ್ಕಾರ ವಿಶ್ವವಿದ್ಯಾಲಯಯದ ಮೂಲಕ ಹಣ ವಸೂಲಿ ಮಾಡುತ್ತಿರುವುದು ಶೋಭೆ ತರುವುದಿಲ್ಲ. ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕಳೆದ ಜನವರಿಯಲ್ಲಿ ನಿಗದಿಪಡಿಸಿದ ಪರೀಕ್ಷಾ ಶುಲ್ಕದ ಅಧಿಸೂಚನೆಯನ್ನು ಗಮನಿಸಿದರೆ, ಅಂಕಪಟ್ಟಿ ಶುಲ್ಕ ಈ ವರ್ಷದ ಪರೀಕ್ಷಾ ಶುಲ್ಕದ ಅಧಿಸೂಚನೆಗೆ ಹೋಲಿಸಿದರೆ 150ರಿಂದ 215ಕ್ಕೆ ಹೆಚ್ಚಳವಾಗಿದೆ. ಅಂದರೆ ಶೇ.50ರಷ್ಟು ಹೆಚ್ಚಳವಾಗಿದೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಏಕಾಏಕಿ ಪರೀಕ್ಷಾ ಶುಲ್ಕ ದುಪ್ಪಟ್ಟು ಮಾಡುವ ಮೂಲಕ ವಿದ್ಯಾರ್ಥಿಗಳಿಂದಲೂ ಲೂಟಿ ಮಾಡಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಸದಸ್ಯರು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.ಪಟ್ಟಣದ ತಾಲೂಕು ಆಡಳಿತ ಕಛೇರಿಯ ಮುಂಭಾಗದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ತಾಲೂಕು ಸಂಚಾಲಕ ಮಯೂರ್, ಶುಲ್ಕ ಹೆಚ್ಚಳವನ್ನು ಕೈಬಿಡುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಶೇ.50ರಷ್ಟು ಶುಲ್ಕ ಹೆಚ್ಚಳ

ಬೆಂಗಳೂರು ವಿಶ್ವವಿದ್ಯಾಲಯದ ಶುಲ್ಕ ಹೆಚ್ಚಳ ಮಾಡುವುದರ ಮೂಲಕ ಬಡ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ. ಇದರ ಹಿಂದೆ ಅಪಾರ ಪ್ರಮಾಣದ ಹಣ‌ ಲೂಟಿ ಮಾಡುವ ಹುನ್ನಾರ ಅಡಗಿದೆ. ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕಳೆದ ಜನವರಿಯಲ್ಲಿ ನಿಗದಿಪಡಿಸಿದ ಪರೀಕ್ಷಾ ಶುಲ್ಕದ ಅಧಿಸೂಚನೆಯನ್ನು ಗಮನಿಸಿದರೆ, ಅಂಕಪಟ್ಟಿ ಶುಲ್ಕ ಈ ವರ್ಷದ ಪರೀಕ್ಷಾ ಶುಲ್ಕದ ಅಧಿಸೂಚನೆಗೆ ಹೋಲಿಸಿದರೆ 150ರಿಂದ 215ಕ್ಕೆ ಹೆಚ್ಚಳವಾಗಿದೆ. ಅಂದರೆ ಶೇ.50ರಷ್ಟು ಹೆಚ್ಚಳವಾಗಿದೆ ಎಂದರು.

ಹೆಚ್ಚಳ ಮಾಡಿರುವ ಪರೀಕ್ಷಾ ಶುಲ್ಕದಲ್ಲಿ ಪ್ರೊಸೆಸಿಂಗ್ ಶುಲ್ಕ 25ರಿಂದ 50 ರೂಪಾಯಿ, ಅಂದರೆ ಶೇ.100 ಏರಿಕೆ, ಅದಲ್ಲದೆ ಕಲಾ ವಿಭಾದ ವಿದ್ಯಾರ್ಥಿಗಳಿಗೆ ಕಳೆದ ವರ್ಷ ಇದ್ದಂತಹ 808 ರು.ಗಳ ಶುಲ್ಕವು ಪ್ರಸಕ್ತ ವರ್ಷ 1042 ರು.ಗಳಿಗೆ ಹೆಚ್ಚಿಸಲಾಗಿದೆ. ಅಂದರೆ ಶೇ.28.96 ಏರಿಕೆ, ಇನ್ನೂ ಕೆಲವು ಕಲಾ ವಿಷಯದ ವಿಶೇಷ ಕೋರ್ಸುಗಳಿಗೆ ಇದ್ದಂತಹ 918 ರು.ಗಳ ಶುಲ್ಕವು ಈ ಬಾರಿ 1334 ರುಪಾಯಿ, ಅಂದರೆ ಶೇ.16.29ರಷ್ಟು ಹೆಚ್ಚಳವಾಗಿದೆ ಎಂದು ಅವರು ಹೇಳಿದರು.

ಬಿ.ಕಾಂ ಪರೀಕ್ಷಾ ಶುಲ್ಕ

ಬಿ.ಕಾಂ. ವಿದ್ಯಾರ್ಥಿಗಳಿಗೆ ಇದ್ದಂತಹ 896 ರು.ಗಳ ಶುಲ್ಕವು 1334 ರು.ಗಳಿಗೆ ಹೆಚ್ಚಳವಾಗಿದೆ. ಕಳೆದ ವರ್ಷ ವಿಜ್ಞಾನ ವಿದ್ಯಾರ್ಥಿಗಳಿಗೆ 1138 ರೂ. ಇದ್ದಂತಹ ಶುಲ್ಕವು ಈ ಬಾರಿ 1334 ರೂ.ಗೆ ಹೆಚ್ಚಳವಾಗಿದೆ, ಅದಲ್ಲದೆ ಬಿಸಿಎ ವಿದ್ಯಾರ್ಥಿಗಳಿಗೆ 3580 ರು. ಇದ್ದಂತಹ ಶುಲ್ಕವು ಈ ವರ್ಷ 4775 ರು.ಗಳಿಗೆ ಹೆಚ್ಚಳವಾಗಿದೆ. ಹೀಗೆ ಸರ್ಕಾರ ವಿಶ್ವವಿದ್ಯಾಲಯಯದ ಮೂಲಕ ಹಣ ವಸೂಲಿ ಮಾಡುತ್ತಿರುವುದು ಶೋಭೆ ತರುವುದುಲ್ಲ ಎಂದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ನಗರ ಸಂಚಾಲಕ ಬದ್ರಿನಾಥ್, ಜಂಟಿ ಕಾರ್ಯದರ್ಶಿ ಆದರ್ಶ್ ,ಶಶಿಕುಮಾರ್, ಮುಖಂಡರಾದ ತರುಣ್ , ಸಾಯಿ ನಿಖಿಲ್, ಗಗನ್, ಕಿಶನ್, ಗಣೇಶ್, ಪವನ್, ಶಶಿಕುಮಾರ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೃಷಿಯಲ್ಲಿ ಹೊರ ದೇಶಗಳೊಂದಿಗೆ ಪೈಪೋಟಿ ನಡೆಸಿ
ಕ್ರೀಡಾ ಸಾಧಕಿ ಶಗುನ್‌ಗೆ ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ಸನ್ಮಾನ