ನಂದವಾಡಗಿ ಏತ ನೀರಾವರಿ ಕಾಮಗಾರಿಯ ತ್ವರಿತಗೊಳಿಸಿ: ಬಸವಂತರಾಯ ಕುರಿ

KannadaprabhaNewsNetwork |  
Published : Aug 05, 2025, 11:45 PM IST
05ಕೆಪಿಎಲ್ಎನ್ಜಿ01 : ಬಸವಂತರಾಯ ಕುರಿ | Kannada Prabha

ಸಾರಾಂಶ

ಕೃಷ್ಣಾ ಮೇಲ್ದಂಡೆ ಯೋಜನ ವ್ಯಾಪ್ತಿಯ ನಂದವಾಡಗಿ ಏತ ನೀರಾವರಿ ಕಾಮಗಾರಿ ತ್ವರಿತಗೊಳಿಸಲು ಕೂಡಲೇ ತಾಂತ್ರಿಕ ಸಲಹೆ ನೀಡಿ ಕಾಮಗಾರಿ ಪೂರ್ಣಗೊಳಿಸಬೇಕು ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ನಂದವಾಡಗಿ ಏತ ನೀರಾವರಿ ಹೋರಾಟ ಪ್ರಚಾರ ಸಮಿತಿ ಅಧ್ಯಕ್ಷ ಬಸವಂತರಾಯ ಕುರಿ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಲಿಂಗಸುಗೂರು

ಕೃಷ್ಣಾ ಮೇಲ್ದಂಡೆ ಯೋಜನ ವ್ಯಾಪ್ತಿಯ ನಂದವಾಡಗಿ ಏತ ನೀರಾವರಿ ಕಾಮಗಾರಿ ತ್ವರಿತಗೊಳಿಸಲು ಕೂಡಲೇ ತಾಂತ್ರಿಕ ಸಲಹೆ ನೀಡಿ ಕಾಮಗಾರಿ ಪೂರ್ಣಗೊಳಿಸಬೇಕು ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ನಂದವಾಡಗಿ ಏತ ನೀರಾವರಿ ಹೋರಾಟ ಪ್ರಚಾರ ಸಮಿತಿ ಅಧ್ಯಕ್ಷ ಬಸವಂತರಾಯ ಕುರಿ ಆಗ್ರಹಿಸಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಅವರು, ₹2100 ಕೋಟಿ ಅನುದಾನದಲ್ಲಿ ಕಾಮಗಾರಿ ಟೆಂಡರ್ ಕರೆದು 2021ರ ಒಳಗೆ ಮುಗಿಸಬೇಕೆಂದು 2017 ಜೂನ್‌ 14ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಾಲನೆ ನೀಡಿದ ನಂದವಾಡಗಿ ಏತ ನೀರಾವರಿ ಯೋಜನೆಯಿಂದ 36 ಸಾವಿರ ಹೇಕ್ಟೇರ್ ಭೂ ಪ್ರದೇಶ ನೀರಾವರಿಗೆ ಒಳಪಡಲಿದೆ. ಈಗಾಗಲೆ ಮೆನ್ ರೈಸಿಂಗ್ನ 3 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದೆ. ಪ್ರಮುಖವಾಗಿ ಕಾಮಗಾರಿ ಗುತ್ತಿಗೆ ಪಡೆದ ಕಂಪನಿಗಳಿಗೆ ₹1490 ಕೋಟಿ ಪಾವತಿ ಮಾಡಲಾಗಿದೆ. ಆದರೂ ಕಾಮಗಾರಿ ಶೇ.50ರಷ್ಟು ಪೂರ್ಣಗೊಂಡಿಲ್ಲ. ಇದರ ಮಧ್ಯೆ ರಾಜ್ಯದಲ್ಲಿ ಹನಿ ನೀರಾವರಿ ಯೋಜನೆಗಳು ವಿಫಲಗೊಂಡಿದ್ದರಿಂದ ಹನಿ ಬದಲು ಪೈಪ್‌ನಿಂದ ಹರಿ ನೀರಾವರಿ ಮಾಡಲು ತಾಂತ್ರಿಕ ಸಲಹೆ ಕೇಳಿದ್ದು, ಸರ್ಕಾರ ಸೂಕ್ತ ಸಲಹೆ ನೀಡದೇ ನಿಷ್ಕಾಳಜಿ ಮಾಡುತ್ತಿದೆ ಎಂದು ಆರೋಪಿಸಿದರು.

ಈಗಾಗಲೇ ನಂದವಾಡಗಿ ಏತ ನೀರಾವರಿ ಹೋರಾಟ ಸಮಿತಿ ಹೇಕ್ಟೇರ್‌ಗೆ ಒಂದು ತೂಬು ಮೂಲಕ ನೀರು ಕೊಟ್ಟು ಕೃಷಿ ಹೊಂಡ ನಿರ್ಮಿಸಿ ಸೋಲಾರ ಪಂಪ್‌ಸೆಟ್‌ಗಳನ್ನು ನೀಡಬೇಕು. ಇದೆಲ್ಲ ಈಗ ಮೀಸಲಿಟ್ಟಿರುವ ಅನುದಾನದಲ್ಲಿ ಮುಗಿಯುತ್ತದೆ. ಬಹಳ ಪ್ರಮುಖ ವಾಗಿ ನಂದವಾಡಗಿ ಏತ ನೀರಾವರಿ ಯೋಜನೆಗೆ ನೀರು ಹಂಚಿಕೆ, ಅನುದಾನ, ವಿವಾದಂತಹ ಯಾವುದೇ ಸಮಸ್ಯೆಗಳಿಲ್ಲ. ಆದರೂ ಸರ್ಕಾರ ಯೋಜನೆ ಕಾಮಗಾರಿ ತ್ವರಿತಗೊಳಿಸದೇ ಇರುವುದು ಈ ಭಾಗದ ರೈತರಿಗೆ ದೌರ್ಭಾಗ್ಯವಾಗಿದೆ. ಕೂಡಲೇ ಮುಖ್ಯಮಂತ್ರಿಗಳು ನಂದವಾಡಗಿ ಏತ ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಳಸಿಬೇಕು ಇಲ್ಲದೇ ಹೋದರೆ ಯೋಜನೆ ವ್ಯಾಪ್ತಿಯ ರೈತರೊಂದಿಗೆ ಬೃಹತ್ ಹೋರಾಟ ರೂಪಸಿಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಸಿದ್ದರಾಮಪ್ಪ ಸಾಹುಕಾರ, ಪ್ರದಾನ ಕಾರ್ಯದರ್ಶಿ ಶರಣಗೌಡ ಬಸಾಪುರ, ರಮೇಶ ಶಾಸ್ತ್ರಿ, ಮಹಿಬೂಬಸಾಬ, ಗುರನಾಥರೆಡ್ಡಿ ಸೇರಿದಂತೆ ಇದ್ದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ