ಕನ್ನಡಪ್ರಭ ವಾರ್ತೆ ಕಿಕ್ಕೇರಿ
ರಾಸುಗಳು ತಮ್ಮ ಕುಟುಂಬ ಸದಸ್ಯರಂತೆ ವಿಶೇಷ ಕಾಳಜಿವಹಿಸಿ ನೋಡಿಕೊಂಡರೆ ಇಡೀ ಕುಟುಂಬವನ್ನು ಸಾಕಲಿವೆ ಎಂದು ಮನ್ಮುಲ್ ನಿರ್ದೇಶಕ ಡಾಲುರವಿ ಹೇಳಿದರು.ಆನೆಗೊಳ ಗ್ರಾಮದಲ್ಲಿ ಏರ್ಪಡಿಸಿದ್ದ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಮನುಷ್ಯರಿಗೆ ಲವಲವಿಕೆ ಆರೋಗ್ಯಕರ ಬದುಕಿಗೆ ಬೇಕಿರುವಂತೆ ಪೌಷ್ಟಿಕಾಂಶ, ಸತ್ವಭರಿತ ಆಹಾರ ಮುಖ್ಯವಾಗಿದೆ ಎಂದರು.
ಮನ್ಮುಲ್‌ನಿಂದ ಗುಣಮಟ್ಟ, ರಿಯಾಯ್ತಿ ದರದಲ್ಲಿ ಪಶು ಆಹಾರ ಸಮೃದ್ಧಿ, ಮಿನರಲ್ ಮಿಕ್ಸರ್ ಪ್ರತಿ ಡೇರಿಯಲ್ಲಿ ದೊರೆಯಲಿದೆ. ಇದು ಪಶುಗಳ ಗರ್ಭ ಧರಿಸುವಿಕೆ, ರೋಗ ಮುಕ್ತ, ರೋಗ ನಿರೋಧಕ ಶಕ್ತಿಗೆ ಸಹಾಯವಾಗಲಿದೆ ಎಂದರು.ಮನ್ಮುಲ್‌ನಿಂದ ಹಾಲು ಉತ್ಪಾದಕ ಷೇರುದಾರರಿಗೆ, ಮಕ್ಕಳಿಗೆ ವಿಶೇಷ ಸವಲತ್ತು, ಸೌಲಭ್ಯವಿದೆ. ಕಾಲಕಾಲಕ್ಕೆ ತಕ್ಕಂತೆ ರಾಸುಗಳಿಗೆ ಚಿಕಿತ್ಸೆ, ತಪಾಸಣೆ ಮಾಡಿಸಿ. ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕು. ಕಲಬೆರಕೆ ಹಾಲು ವಿತರಿಸಿ ಸಂಘಕ್ಕೆ ಕೆಟ್ಟ ಹೆಸರು ತಂದರೆ ಕಾನೂನು ಕ್ರಮ ಅನೀವಾರ್ಯ ಎಂದು ಎಚ್ಚರಿಸಿದರು.
ಡೇರಿಗೆ ಹೆಚ್ಚು ಹಾಲು ವಿತರಿಸಿದ ಹಾಲು ಉತ್ಪಾದಕರಿಗೆ ಸನ್ಮಾನಿಸಲಾಯಿತು. ಮಾರ್ಗ ವಿಸ್ತರಣಾಧಿಕಾರಿ ಗುರುರಾಜ್ ಎ ಸುರಗಿಹಳ್ಳಿ, ಸಂಘದ ಅಧ್ಯಕ್ಷ ರಕ್ಷಿತ್, ಉಪಾಧ್ಯಕ್ಷೆ ರುಕ್ಮಿಣಿ ದೇವರಾಜು, ಆನೆಗೊಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಬಿ.ಎಂ.ಕಿರಣ್, ಗ್ರಾಪಂ ಸದಸ್ಯ ಶ್ರೀನಿವಾಸ್, ಮಂಜುನಾಥ್, ಡೇರಿ ನಿರ್ದೇಶಕರಾದ ಸಂತೋಷ್, ನಾಗಣ್ಣ, ಎ.ಎನ್. ನಾಗರಾಜು, ಎ.ಆರ್.ಪುಟ್ಟರಾಜು, ಕೆ.ಎನ್.ಜಗದೀಶ್, ಚನ್ನಕೇಶವ, ಮಂಜುನಾಥ್, ಕೆಂಗಮ್ಮ, ಸಿಇಒ ಶಿವಸ್ವಾಮಿ, ಮಂಜುನಾಥ್, ಡೇರಿ ನಿವೇಶನ ದಾನಿ ಪುಟ್ಟಸ್ವಾಮಿ, ರತ್ನಮ್ಮ, ನಂಜೇಶ್, ರಂಜಿತಾ ಸುರೇಶ್, ಸತೀಶ ಇದ್ದರು.ಸೆ.14 ರಂದು ವಾರ್ಷಿಕ ಮಹಾಸಭೆ: ಬಸವೇಗೌಡ
ಮಂಡ್ಯ:ನುಡಿ ಭಾರತಿ ಸೌಹಾರ್ದ ಸಹಕಾರಿ ಸಂಘದ 5ನೇ ವಾರ್ಷಿಕ ಮಹಾಸಭೆಯನ್ನು ಸೆ.14ರಂದು ಬೆಳಗ್ಗೆ ನುಡಿಭಾರತಿ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎ.ಎಲ್.ಬಸವೇಗೌಡ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದಲ್ಲಿ 160 ಮಂದಿ ಷೇರುದಾರ ಸದಸ್ಯರಿದ್ದು, 280 ಷೇರುಗಳಿಗೆ ಷೇರುದಾರರಾಗ ಇಚ್ಛೆವುಳ್ಳ ಆಸಕ್ತರು ಸದಸ್ಯರಾಗಬಹುದು ಎಂದರು.ಸಭೆಯನ್ನು ಮನ್ಮುಲ್ ಅಧ್ಯಕ್ಷ ಉಮ್ಮಡಹಳ್ಳಿ ಶಿವಕುಮಾರ್ ಉದ್ಘಾಟಿಸಿ ಸಂಘದ ಷೇರುದಾರ ಸದಸ್ಯರನ್ನು ಅಭಿನಂದಿಸಿ 160 ಸದಸ್ಯರಿಗೆ 300 ರೂಗಳಂತೆ ಷೇರು ಡಿವಿಡೆಂಟ್ ಅನ್ನು ಬಹುಮಾನವಾಗಿ ವಿತರಣೆ ಮಾಡಲಿದ್ದಾರೆ ಎಂದು ಹೇಳಿದರು.
ಜಿಲ್ಲಾ ಸೌಹಾರ್ದ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ಟಿ.ಬಿ.ಗುರುರಾಜಶೆಟ್ಟಿ, ಉಪಾಧ್ಯಕ್ಷ ಸಿದ್ದಲಿಂಗಯ್ಯ ಉಪಸ್ಥಿತರಿರಲಿದ್ದು, ಅತಿಥಿಗಳಾಗಿ ಕರಾಸೌಸಂಸ ಪ್ರಾಂತೀಯ ಅಧಿಕಾರಿ ಗುರುಪ್ರಸಾದ್, ಸಹಕಾರಿ ಅಭಿವೃದ್ಧಿ ಅಧಿಕಾರಿ ಬಲರಾಮು, ಚಂದ್ರಶೇಖರಯ್ಯ ಭಾಗವಹಿಸಲಿದ್ದಾರೆ. ಸಂಘದ ಅಧ್ಯಕ್ಷ ಎ.ಎಲ್.ಬಸವೇಗೌಡ ಅಧ್ಯಕ್ಷತೆ ವಹಿಸುವರು ಎಂದರು.ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಪಿ.ಸಿ.ಅರುಣ್‌ಕುಮಾರ್, ಸಿಇಒ ಡಿ.ಎಸ್.ರಂಜಿತ್‌ಕುಮಾರ್, ನಿರ್ದೇಶಕರಾದ ಎಂ.ಎಸ್.ರಘು, ಸುರೇಶ್, ಸದಸ್ಯರಾದ ಅರುಣ್, ಶಿವನಂಜಪ್ಪ ಇದ್ದರು.