ಪತ್ರಿಕೆಗಳ ಹೊಗಳಿಕೆ ತೆಗಳಿಕೆಯನ್ನು ಸಮಾನವಾಗಿ ಸ್ವೀಕರಿಸಿ

KannadaprabhaNewsNetwork |  
Published : Aug 06, 2026, 01:45 AM IST
5ಎಚ್ಎಸ್ಎನ್13 :  | Kannada Prabha

ಸಾರಾಂಶ

ರಾಜಕಾರಣಿಗಳ ತಪ್ಪುಗಳನ್ನು ತಿದ್ದುವ ಹಾಗೂ ಎಚ್ಚರಿಸುವ ಪತ್ರಿಕಾ ರಂಗದಲ್ಲಿ ಹೊಗಳಿ ಅಥವಾ ತೆಗಳಿ ಬರೆದಾಗ ಎರಡನ್ನೂ ಸಮಾನ ಮನಸ್ಥಿತಿಯಲ್ಲಿ ಸ್ವೀಕರಿಸಬೇಕು ಎಂದು ಶಾಸಕ ಎಚ್. ಡಿ. ರೇವಣ್ಣ ಹೇಳಿದರು. ಕಾರಣಾಂತರದಿಂದ ಕೈತಪ್ಪಿದೆ. ಮುಂದಿನ ದಿನಗಳಲ್ಲಿ ಸ್ಥಾಪನೆ ಮಾಡೇ ಮಾಡುತ್ತೇನೆ ಎಂದು ಜಿಲ್ಲೆಯ ಅಭಿವೃದ್ಧಿಗಾಗಿ ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿ, ರಾಜ್ಯದಲ್ಲೇ ಹೆಚ್ಚು ಅಭಿವೃದ್ಧಿ ಹೊಂದಿದ ಜಿಲ್ಲೆ ಎಂಬ ಖ್ಯಾತಿ ನಮ್ಮ ಜಿಲ್ಲೆ ಪಡೆಯಬೇಕು ಎಂಬ ಆಸೆ ಇದೆ ಎಂದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ರಾಜಕಾರಣಿಗಳ ತಪ್ಪುಗಳನ್ನು ತಿದ್ದುವ ಹಾಗೂ ಎಚ್ಚರಿಸುವ ಪತ್ರಿಕಾ ರಂಗದಲ್ಲಿ ಹೊಗಳಿ ಅಥವಾ ತೆಗಳಿ ಬರೆದಾಗ ಎರಡನ್ನೂ ಸಮಾನ ಮನಸ್ಥಿತಿಯಲ್ಲಿ ಸ್ವೀಕರಿಸಬೇಕು ಎಂದು ಶಾಸಕ ಎಚ್. ಡಿ. ರೇವಣ್ಣ ಹೇಳಿದರು.

ತಾಲೂಕಿನ ಕಟ್ಟೆಬೆಳಗುಲಿಯಲ್ಲಿರುವ ಶ್ರೀರಾಮದೇವರಕಟ್ಟೆಯಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಐಐಟಿ ಸ್ಥಾಪನೆಗೆ ಒಂದು ಸಾವಿರ ಎಕರೆ ಭೂಮಿಯಲ್ಲಿ ಸ್ವಾಧೀನಕ್ಕೆ ಪಡೆದು ಕ್ರಮಕೈಗೊಳ್ಳಲಾಗಿತ್ತು. ಕಾರಣಾಂತರದಿಂದ ಕೈತಪ್ಪಿದೆ. ಮುಂದಿನ ದಿನಗಳಲ್ಲಿ ಸ್ಥಾಪನೆ ಮಾಡೇ ಮಾಡುತ್ತೇನೆ ಎಂದು ಜಿಲ್ಲೆಯ ಅಭಿವೃದ್ಧಿಗಾಗಿ ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿ, ರಾಜ್ಯದಲ್ಲೇ ಹೆಚ್ಚು ಅಭಿವೃದ್ಧಿ ಹೊಂದಿದ ಜಿಲ್ಲೆ ಎಂಬ ಖ್ಯಾತಿ ನಮ್ಮ ಜಿಲ್ಲೆ ಪಡೆಯಬೇಕು ಎಂಬ ಆಸೆ ಇದೆ. ಈ ನಿಟ್ಟಿನಲ್ಲಿ ಶ್ರಮಿಸುತ್ತೇನೆ ಎಂದರು. ಸಂಘದ ರಾಜ್ಯಾಧ್ಯಕ್ಷ ಟಿ.ವಿ.ಶಿವಾನಂದ ತಗಡೂರು ಮಾತನಾಡಿ, ಕ್ರಿಯಾಶೀಲ ಪತ್ರಕರ್ತನಾಗಿ ಇನ್ನಷ್ಟು ವರದಿಗಳನ್ನು ಸಿದ್ಧಪಡಿಸುವ ಮೂಲಕ ವೃತ್ತಿಯ ಘನತೆಯನ್ನು ಹೆಚ್ಚಿಸುವ ಜತೆಗೆ ಗೌರವ ತಂದುಕೊಡುವ ಕೆಲಸ ಮಾಡೋಣವೆಂದು ಕರೆಕೊಟ್ಟರು.

ರಾಜ್ಯ ಸಂಘದ ಉಪಾಧ್ಯಕ್ಷ ಮದನ್‌ಗೌಡ ಮಾತನಾಡಿ, ಇತ್ತೀಚೆಗೆ ಯೂಟ್ಯೂಬ್, ಸೋಷಿಯಲ್ ಮೀಡಿಯಾ, ಆರ್‌ಟಿಐ ಪತ್ರಕರ್ತರು ಹಾಗೂ ಸೆಟಲ್‌ಮೆಂಟ್ ಪತ್ರಕರ್ತರುಗಳು ಪ್ರಾಮಾಣಿಕ ಪತ್ರಕರ್ತರಿಗೆ ಕೆಟ್ಟ ಹೆಸರು ತರುತ್ತಿದ್ದಾರೆ. ಆದ್ದರಿಂದ ಅಧಿಕಾರಿಗಳು ಈ ರೀತಿಯ ಪತ್ರಕರ್ತರ ಪತ್ರಿಕೆಗಳ ವರದಿಗಳಿಗೆ ಸ್ಪಂದಿಸದೇ, ಪತ್ರಿಕೆಗಳಲ್ಲಿ ಪ್ರಾಮಾಣಿಕವಾದ ರಾಜ್ಯ ಹಾಗೂ ಜಿಲ್ಲೆಯ ಪತ್ರಿಕೆಗಳು ಇದ್ದು, ಯಾವ ರೀತಿಯ ಪತ್ರಿಕೆ ಎಂದು ಸತ್ಯಾಸತ್ಯತೆ ತಿಳಿದು, ಮುನ್ನಡೆಯಬೇಕಿದೆ ಎಂದು ಉಪಸ್ಥಿತರಿದ್ದ ಅಧಿಕಾರಿಗಳಿಗೆ ಸಲಹೆ ನೀಡಿದರು.

ಶಾಸಕ ಎ. ಮಂಜು, ಜಿಲ್ಲಾ ಚುನಾವಣಾ ನೋಂದಣಿ ಅಧಿಕಾರಿ ಮಂಜುನಾಥ್ ವಿ., ಜಿಲ್ಲಾ ಉಪಾಧ್ಯಕ್ಷರಾದ ನಂಜುಂಡೇಗೌಡ, ರಾಷ್ಟ್ರೀಯ ಮಂಡಳಿ ಸದಸ್ಯ ರವಿ ನಾಕಲಗೂಡು, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಪ್ರಮೋದ್‌, ಜಿಲ್ಲಾಧ್ಯಕ್ಷ ಕೆಂಚೇಗೌಡ, ಜಿಲ್ಲಾ ಕಾರ್ಯದರ್ಶಿ ಬೊಮ್ಮೇಗೌಡ ಬಿ.ಆರ್., ಕಾರ್ಯಕಾರಿ ಸಮಿತಿ ಸದಸ್ಯ ಸುರೇಶ್ ಕುಮಾರ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ವೆಂಕಟೇಶ್ ಇತರರು ಮಾತನಾಡಿದರು.

ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ಜಿ., ಪ್ರಧಾನ ಕಾರ್ಯದರ್ಶಿ ಕೆ.ಜಿ.ಸುರೇಶ್, ಕಾರ್ಯದರ್ಶಿ ಹರೀಶ್ ಕೆ.ಎಂ. ತಹಸೀಲ್ದಾರ್ ವೈ.ಎಂ.ರೇಣುಕುಮಾರ್, ಇ ಒ ಮುನಿರಾಜು, ಬಿಇಒ ಸೋಮಲಿಂಗೇಗೌಡ, ಕೃಷಿ ಅಧಿಕಾರಿ ಸಪ್ನ, ತಾ. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪೃಥ್ವಿರಾಜ್, ಶಿರೆಸ್ತೆದಾರ್ ವೆಂಕಟೇಶ್ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುಬ್ಬಾರೆಡ್ಡಿಗೆ ಸಿಗದ ಸಚಿವ ಸ್ಥಾನ: ಗುಡಿಬಂಡೆ ಬಂದ್ ಯಶಸ್ವಿ
ಪ್ರಮುಖ 4 ರೈಲ್ವೆ ಬೇಡಿಕೆ ಈಡೇರಿಸಲು ಕೇಂದ್ರಕ್ಕೆ ಸಂಸದೆ ಮನವಿ