ಕಡೂರು: ತಾಲೂಕಿನ ಮಲ್ಲೇಶ್ವರದ ಬೈಪಾಸ್ ಕೆಳಗಿನ ರಸ್ತೆಯಲ್ಲಿ ಟ್ಯಾಂಕರ್ ಲಾರಿ ಮತ್ತು ಕಾರಿನ ನಡುವೆ ನಡೆದ ಅಫಘಾತದಲ್ಲಿ ಓರ್ವರು ಮೃತಪಟ್ಟಿದ್ದು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
ಗಾಯಾಳು ಸೋಫಿಯಾ ನೀಡಿದ ದೂರಿನಂತೆ ಜು.23 ರ ಬೆಳಗ್ಗೆ ಸುಮಾರು 10 ಗಂಟೆಗೆ ಇವರು ತಮ್ಮ ಗಂಡ ಮತ್ತು ಮಗನೊಂದಿಗೆ ಸ್ವಿಪ್ಟ್ ಕಾರಿನಲ್ಲಿ ಮನೆಯಿಂದ ಜಾಮುಂಡೇಶ್ವರಿ ದೇವಸ್ದಾನಕ್ಕೆ ಹೋಗುತ್ತಿದ್ದಾಗ ಸುಮಾರು 12 ಗಂಟೆಗೆ ಕಡೂರು ಸಮೀಪದ ಬೈಪಾಸ್ ರಸ್ತೆಯಲ್ಲಿ ಎದುರಿನಿಂದ ಅತಿ ವೇಗವಾಗಿ ಬಂದ ಟ್ಯಾಂಕರ್ ಲಾರಿ ದ್ದ ಕಾರಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಈ ಅಪಘಾತ ಸಮಭವಿಸಿದೆ. ಕಾರು ಚಲಾಯಿಸುತ್ತಿದ್ದ ಪ್ರತಾಪರಾವ್ ಮೃತಪಟ್ಟಿದ್ದು, ಪಿರ್ಯಾದಿ ಅವರ ಮಗುವಿಗೆ ಪೆಟ್ಟಾಗಿದೆ. ಅರಸೀಕೆರೆಯ ಟ್ಯಾಂಕರ್ ಲಾರಿ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದು, ಘಟನೆ ಸಂಭಂದ ಲಾರಿ ಚಾಲಕನ ಬಂಧಿಸಲಾಗಿದೆ.
23ಕೆಕೆಡಿಯು2 ನುಜ್ಜುಗುಜ್ಜಾಗಿರುವ ಕಾರು.