ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಅಪಘಾತದಲ್ಲಿ ಮರಣ ಹೊಂದಿದ ಕುಟುಂಬಕ್ಕೆ ತಾಲೂಕಿನ ಜಗದಾಳ ಗ್ರಾಮದ ಪಿಕೆಪಿಎಸ್ ಸೊಸೈಟಿಯಲ್ಲಿ ₹೨ ಲಕ್ಷಗಳ ಸಹಾಯ ಚೆಕ್ ವಿತರಿಸಿ ಮಾತನಾಡಿದ ಅವರು, ಸಹಕಾರಿ ಸಂಘಗಳಲ್ಲಿ ಶೇರುದಾರರರಾಗಿರುವ ಸದಸ್ಯರು ಅಪಘಾತದ ಸಾವು ಮತ್ತು ಶಾಶ್ವತ ಒಟ್ಟು ಅಂಗವೈಕಲ್ಯಕ್ಕೆ ₹೨ ಲಕ್ಷ ಹಾಗೂ ಶಾಶ್ವತ ಭಾಗಶಃ ಅಂಗವೈಕಲ್ಯಕ್ಕೆ ₹೧ ಲಕ್ಷಗಳ ಪರಿಹಾರವಿದೆ ಎಂದರು.
ಒಂದು ಅಥವಾ ಬೇರೆ ಬ್ಯಾಂಕ್‌ಗಳಲ್ಲಿ ಬಹು ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೆ, ನಂತರ ನೀವು ಒಂದು ಬ್ಯಾಂಕ್ ಖಾತೆಯ ಮೂಲಕ ಮಾತ್ರ ಯೋಜನೆಗೆ ಸೇರಲು ಅರ್ಹರಾಗಿದ್ದು, ವರ್ಷಕ್ಕೆ ₹೧೨ ಕಂತು ಇದಾಗಿದ್ದು, ನಿರ್ಲಕ್ಷ್ಯ ವಹಿಸದೆ ಈ ಯೋಜನೆಯನ್ನು ಎಲ್ಲರೂ ಪ್ರಯೋಜನ ಪಡೆಯಬೇಕೆಂದರು.ಈ ವೇಳೆ ಸೊಸೈಟಿ ಅಧ್ಯಕ್ಷ ಸುಭಾಸ ಉಳ್ಳಾಗಡ್ಡಿ, ಬಿ.ಆರ್.ದಡ್ಡಿಮನಿ, ಬಿ.ಎಂ.ಹೊಸೂರ, ಬಿ.ಎಂ. ನೀಲಕಂಠ, ಎಸ್.ಎಂ.ಬಿರಾದಾರ ಪಾಟೀಲ, ಜಿ.ಜಿ.ಉಳ್ಳಾಗಡ್ಡಿ, ಆಯ್.ಡಿ.ಮರೆಗುದ್ದಿ, ಕಾಶವ್ವ ಬಂಗಿ, ವೆಂಕವ್ವ ಚಿಂಚಲಿ, ಪರಶುರಾಮ ಬಸವ್ವಗೋಳ, ಭೀಮಪ್ಪ ವಾಲಿಕಾರ, ಶಿವಾಜಿ ಸೊರಗಾಂವಿ ಸೇರಿದಂತೆ ಅನೇಕರಿದ್ದರು.