ರಿಪ್ಪನ್‌ಪೇಟೆಯಲ್ಲಿ ತುರ್ತು ವಾಹನವಿಲ್ಲದೆ ಅಪಘಾತ, ಇತರ ರೋಗಿಗಳ ಪರದಾಟ

KannadaprabhaNewsNetwork | Published : Feb 18, 2025 12:31 AM

ಸಾರಾಂಶ

ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಸೋಮವಾರ ಮಧ್ಯಾಹ್ನ ಸುಮಾರು 2ಕ್ಕೆ ಸಮಯದಲ್ಲಿ ಜಮೀನಿನಲ್ಲಿ ಕೆಲಸ ಮಾಡುವ ಕೂಲಿಯಾಳಿಗೆ ಹಾವು ಕಡಿತ, ತೀರ್ಥಹಳ್ಳಿ ರಸ್ತೆಯಲ್ಲಿ ರಸ್ತೆ ಆಪಘಾತದಲ್ಲಿ ತೀವ್ರ ಗಾಯಗೊಂಡ ಗಾಯಳು ಮತ್ತು ಪರೀಕ್ಷೆ ಕುಳಿತ ವೇಳೆ ತೀವ್ರ ಅಸ್ವಸ್ತಗೊಂಡ ವಿದ್ಯಾರ್ಥಿನಿ, ಮೊದಲಾದ ರೋಗಿಗಳು ಸಕಾಲದಲ್ಲಿ 108 ವಾಹನವಿಲ್ಲದೆ ಪರದಾಡಿದರು.

ಹಾವು ಕಡಿತ, ಅಪಘಾತ, ನಿಶ್ಯಕ್ತಿ ರೋಗಿಗಳ ಚಿಕಿತ್ಸೆಗಾಗಿ ಕರೆದೊಯ್ಯಲು ಆ್ಯಂಬುಲೆನ್ಸ್‌ ಕೊರತೆ । ಕ್ರಮ ಕೈಗೊಳ್ಳಲು ಸಾರ್ವಜನಿಕರ ಒತ್ತಾಯ

ಕನ್ನಡಪ್ರಭ ವಾರ್ತೆ ರಿಪ್ಪನ್‍ಪೇಟೆ

ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಸೋಮವಾರ ಮಧ್ಯಾಹ್ನ ಸುಮಾರು 2ಕ್ಕೆ ಸಮಯದಲ್ಲಿ ಜಮೀನಿನಲ್ಲಿ ಕೆಲಸ ಮಾಡುವ ಕೂಲಿಯಾಳಿಗೆ ಹಾವು ಕಡಿತ, ತೀರ್ಥಹಳ್ಳಿ ರಸ್ತೆಯಲ್ಲಿ ರಸ್ತೆ ಆಪಘಾತದಲ್ಲಿ ತೀವ್ರ ಗಾಯಗೊಂಡ ಗಾಯಳು ಮತ್ತು ಪರೀಕ್ಷೆ ಕುಳಿತ ವೇಳೆ ತೀವ್ರ ಅಸ್ವಸ್ತಗೊಂಡ ವಿದ್ಯಾರ್ಥಿನಿ, ಮೊದಲಾದ ರೋಗಿಗಳು ಸಕಾಲದಲ್ಲಿ 108 ವಾಹನವಿಲ್ಲದೆ ಪರದಾಡಿದರು. ಇಂತಹ ಸ್ಥಿತಿ ನಿರ್ಮಾಣವಾಗಿ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಯಿತು.

ಪ್ರಥಮ ಚಿಕಿತ್ಸೆ ನೀಡಿದ ವೈದ್ಯಾಧಿಕಾರಿಗಳು ತಕ್ಷಣ ಹೆಚ್ಚಿನ ಚಿಕಿತ್ಸೆಗೆಂದು ಶಿವಮೊಗ್ಗ ಶಿಪಾರಸು ಮಾಡಿದರೆ ಇಲ್ಲಿ ತುರ್ತು ಸೇವೆ ನೀಡುವ 108ರ ವಾಹನವಿಲ್ಲದೆ ಹಾವು ಕಡಿತದ ರೋಗಿ ಮತ್ತು ರಸ್ತೆ ಆಪಘಾತದಲ್ಲಿ ಗಾಯಗೊಂಡ ಗಾಯಾಳು ಪರದಾಡುವಂತಾಗಿದೆ. ಅಲ್ಲದೆ ಪರೀಕ್ಷೆಯ ವೇಳೆ ತೀವ್ರ ಅಸ್ವಸ್ತಗೊಂಡ ವಿದ್ಯಾರ್ಥಿನಿ ಚಿಕಿತ್ಸೆಗಾಗಿ ಹರಸಾಹಸ ಪಡುವಂತಾಗಿದೆ ಎಂದು ಕೆರೆಹಳ್ಳಿ ಮುರುಳಿಧರ ಮತ್ತು ರವೀಂದ್ರ ಬಸವರಾಜ ಬೆನವಳ್ಳಿ, ಭೀಮರಾಜ್ ಕರಡಿಗಾ, ಶ್ರೀಧರ ತೀವ್ರ ಕಳವಳ ವ್ಯಕ್ತಪಡಿಸಿ ಆಕ್ರೋಶ ವ್ಯಕ್ತಪಡಿಸಿದರು.

ಅಡಕೆ ತೋಟದಲ್ಲಿ ಮಣ್ಣು ಕೆಲಸ ಮಾಡುತ್ತಿದ್ದ ಬಯಲು ಸೀಮೆಯ ಕೂಲಿಯಾಳು ನೀರು ಕುಡಿಯಲು ತೋಟದಲ್ಲಿನ ಹೊಂಡದ ಬಳಿ ಹೋಗುತ್ತಿದ್ದಾಗ ಹಾವು ಅಕಸ್ಮಿಕವಾಗಿ ಕಡಿದಿದ್ದು ಇದರಿಂದ ತಕ್ಷಣ ಇಲ್ಲಿನ ಅಸ್ಪತ್ರೆಗೆ ಚಿಕಿತ್ಸೆಗಾಗಿ 108 ತುರ್ತು ಸೇವೆಗೆ ಪೋನ್ ಮಾಡಿ ನಾಲ್ಕು ಐದು ಗಂಟೆ ಕಳೆದರೂ ವಾಹನ ಬಾರದಿರುವುದು ತೀವ್ರ ಆಸಮದಾನಕ್ಕೆ ಕಾರಣವಾಯಿತು.

ಇನ್ನೂ ರಸ್ತೆ ಆಪಘಾತದಲ್ಲಿ ತಲೆಗೆ ಬಲವಾದ ಪೆಟ್ಟು ಬಿದ್ದು ರಕ್ತಸ್ರಾವವಾಗುತ್ತಿದ್ದು ಆ ವ್ಯಕ್ತಿಯನ್ನು ಅಸ್ಪತ್ರೆಗೆ ಕರೆತರಲು ಸಹ ತುರ್ತುವಾಹನಕ್ಕೆ ಕರೆ ಮಾಡಿದರೂ ಕೂಡ ವಾಹನ ಬರದಿರುವುದು ಸಹ ಗಾಯಾಳು ಕಡೆಯವರ ಆಕ್ರೋಶಕ್ಕೆ ಎಡೆ ಮಾಡಿತು.

ಸ್ಟಾಪ್ ನರ್ಸ್‌ ಇಲ್ಲದೆ ಪರದಾಟ:

ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಿರಿಯ ಆರೋಗ್ಯಕಾರ್ಯಕರ್ತೆ ಇಲ್ಲದೆ ಬೇರೆ ಬೇರೆ ಕಡೆ ಗ್ರಾಮಗಳಲ್ಲಿನ ಎಎನ್‌ಎಂಗಳನ್ನು ನಿಯೋಜನೆ ಮಾಡಿಕೊಳ್ಳುತ್ತಿದ್ದು ಇದರಿಂದಾಗಿ ಬಂದಂತಹ ಎಎನ್‌ಎಂಗಳು ಚಿಕಿತ್ಸೆಗೆ ಬರುವ ರೋಗಿಗಳಿಗೆ ಮಾತ್ರೆ ಔಷಧಿ ಚುಚ್ಚುಮದ್ದು ನೀಡಲು ತಡಕಾಡುವಂತಾಗಿದ್ದಾರೆ.

ಸಾರ್ವಜನಿಕರ ಪೋನ್ ಕರೆ ಸ್ವೀಕರಿಸದ ಡಿಎಚ್‌ಒ ಮತ್ತು ಸಿಇಒ:

ಸಾಕಷ್ಟು ಸಮಯ ಕಳೆದ ನಂತರ ರೋಗಿಗಳ ಅಕ್ರೋಶದಿಂದಾಗಿ ಸ್ಥಳದಲ್ಲಿದ ಕೆಲವರು ದೂರವಾಣಿ ಮೂಲಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳನ್ನು ಮತ್ತು ಜಿಲ್ಲಾ ಪಂಚಾಯಿತ್ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿಗಳನ್ನು ಸಂಪರ್ಕಿಸಲು ಮುಂದಾದರೆ ಕರೆಯನ್ನು ಸ್ವೀಕರಿಸದೆ ನಿರ್ಲಕ್ಷ್ಯ ವಹಿಸಿದ್ದಾರೆಂದು ಸಾರ್ವಜನಿಕರು ಆರೋಪಿಸಿದ್ದಾರೆ. ಸರ್ಕಾರ ಕೊಟ್ಟಿರುವ ಫೋನ್ ಸಮಸ್ಯೆಯ ಪರಿಹಾರಕ್ಕೊ ಆಥವಾ ಕುಟುಂಬ ವ್ಯವಹಾರಕ್ಕೊ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.

Share this article