ಕನ್ನಡಪ್ರಭ ವಾರ್ತೆ ಯಡ್ರಾಮಿ
ತಾಲೂಕಿನ ಪೊಲೀಸ್ ಠಾಣೆಯ ಪಿಎಸ್‍ಐ ಸುಖಾನಂದ ಸಿಂಘೆ ಅವರಿದ್ದ ಕಾರಿಗೆ ಎದುರಿನಿಂದ ಬಂದ ಕಾರೊಂದು ರಸ್ತೆ ತಿರುವಿನಲ್ಲಿ ಮಧ್ಯೆ ಡಿಕ್ಕಿ ಹೊಡೆದಿದ್ದರಿಂದ ಸಂಭವಿಸಿರುವ ಅಪಘಾತದಲ್ಲಿ ಯಡ್ರಾಮಿ ಪಪಿಎಸ್‌ಐ ಸುಖಾನಂದ ಸಿಂಘೆ ಕೂದಲೆಳೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪಿಎಸ್‌ಐ ಅವರು ಕುಳತಿದ್ದ ಕಾರಿಗೆ ಎದುರಿನಿಂದ ಬಂದ ಕಾರು ವೇಗದಲ್ಲಿದ್ದು ಢಿಕ್ಕಿ ಹೊಡೆದಿದೆ. ಅದೃಷ್ಟ ವಶಾತ್ ಯಾವುದೇ ಪ್ರಾಣ ಹಾನಿ ಆಗಿಲ್ಲ, ಇಬ್ಬರು ಕಾರು ಚಾಲಕರು ಹಾಗೂ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶನಿವಾರದಂದು ರಾತ್ರಿ ಈ ರಸ್ತೆ ದುರಂತ ಘಟನೆ ಸಂಭವಿಸಿದೆ. ಯಡ್ರಾಮಿ ಪಿಎಸ್‌ಐ ಸುಖಾನಂದ ಸಿಂಗೆ ಅವರು ಕಡೆಯಿಂದ ಅರಳಗುಂಡಗಿ ಮಾರ್ಗವಾಗಿ ಜೇವರ್ಗಿ ಕಡೆಗೆ ತನಿಖಾ ತಂಡದ ತೆಗೆದುಕೊಂಡು ಹೋಗುವಾಗ, ಹೆಚ್ಚಿನ ಸಿಬ್ಬಂದಿ ಇರುವ ಕಾರಣದಿಂದ ಠಾಣೆಯ ವಾಹನದಲ್ಲಿ ಕ್ರೈಂ ಪಿಎಸ್‍ಐ ಹಾಗೂ ಸಿಬ್ಬಂದಿ ಮತ್ತು ಖಾಸಗಿ ವಾಹನದಲ್ಲಿ ತಾವು ಹಾಗೂ ಪೊಲೀಸ್ ಕುಳಿತುಕೊಂಡು ಹೋಗುತ್ತಿದ್ದರು.
ಇದೇ ಸಂದರ್ಭದಲ್ಲಿ ಮಾರ್ಗದಲ್ಲಿ, ಕೊಣಸಿರಸಗಿ ಮತ್ತು ಅರಳಗುಂಡಿ ಗ್ರಾಮದ ಮಧ್ಯದಲ್ಲಿ ರಸ್ತೆ ಮೂಲೆಯ ತಿರುವಿನಲ್ಲಿ ಅರಳಗುಂಡಗಿ ಗ್ರಾಮದ ಕಡೆಯಿಂದ ವೇಗವಾಗಿ ಬಂದ ಕಾರೊಂದು ಪಿಎಸ್‍ಐ ಕುಳಿತ ಕಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಎರಡೂ ಕಾರುಗಳಲ್ಲಿ ಅಳಡಿಸಲಾಗಿದ್ದ ಪುಗ್ಗಗಳು ತೆರೆದುಕೊಂಡ ಕಾರಣ ಪಿಎಸ್‍ಐ ಮತ್ತು ಡಿಕ್ಕಿ ಹೊಡೆದಂತಹ ವ್ಯಕ್ತಿಯೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಠಾಣೆಯ ಸಿಬ್ಬಂದಿ ಹೇಳಿದ್ದಾರೆ. ಪಿಎಸ್‍ಐ ಅವರಿಗೆ ಎದೆಯ ಭಾಗಕ್ಕೆ ತಲೆಗೆ ರಕ್ತಸ್ರಾವ ಮತ್ತು ಕೈ ಕಾಲುಗಳಿಗೆ ಗಾಯಗಳು ಆಗಿರುವ ಕಾರಣ ಯಡ್ರಾಮಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡು. ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಖಾಸಗಿ ಯುನೈಟೆಡ್ ಆಸ್ಪತ್ರೆಯಲ್ಲಿ ಪಿಎಸ್‍ಐ ಸುಖಾನಂದ ಅವರು ದಾಖಲಾಗಿದ್ದಾರೆ.
ಡಿಕ್ಕಿ ಹೊಡೆದ ಕಾರ ಚಾಲಕ ಯಡ್ರಾಮಿ ತಾಲೂಕು ಸುಬಂಡ ಗ್ರಾಮದ ಮರಳಸಿದ್ದಪ್ಪ ಅಯ್ಯಪ್ಪ ಆಗಿದ್ದು ಅವರಿಗೂ ಕೂಡ ಎದೆಯ ಭಾಗಕ್ಕೆ ಮತ್ತು ತಲೆಗೆ ಹಾಗೂ ಕೈ ಕಾಲುಗಳಿಗೆ ಗಾಯಗಳಾಗಿ ಕಲಬುರಗಿಯ ಕುರಾಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಈ ಕುರಿತು ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.