ಆಕಸ್ಮಿಕ ಬೆಂಕಿ: ಬಾಳೆ, ತೆಂಗು, ಅಡಿಕೆ ಫಸಲು ನಾಶ, ಅಪಾರ ನಷ್ಟ

KannadaprabhaNewsNetwork |  
Published : Jan 28, 2025, 12:45 AM IST
27ಕೆಎಂಎನ್ ಡಿ21,22 | Kannada Prabha

ಸಾರಾಂಶ

ಅಕಸ್ಮಿಕ ಬೆಂಕಿಯಿಂದ ಸುಮಾರು ಫಲಬಿಡುವ 60 ತೆಂಗಿನ ಮರ, ಗೊನೆಬಿಡುತ್ತಿದ್ದ 400 ಬಾಳೆಗಿಡ, 150 ಅಡಿಕೆ ಮರಗಳು ನಾಶವಾಗಿವೆ. ಅಲ್ಪಸ್ವಲ್ಪ ಪ್ರಮಾಣದ ಕಬ್ಬಿನ ಗದ್ದೆಗೆ ಬೆಂಕಿ ಬಿದ್ದಿದೆ. ಬೆಂಕಿ ನಂದಿಸಲು ಅಕ್ಕಪಕ್ಕದ ಜಮೀನಿನವರು ಜೊತೆಗೂಡಿ ಹರಸಾಹಸ ಮಾಡಿ ನಂದಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಕಿರು ಅರಣ್ಯ ಸಮೀಪದ ತೋಟಕ್ಕೆ ಬೆಂಕಿ ತಗುಲಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿರುವ ಘಟನೆ ಹೋಬಳಿಯ ಗೋವಿಂದನಹಳ್ಳಿಯಲ್ಲಿ ನಡೆದಿದೆ.

ಕಿಕ್ಕೇರಿ ಗ್ರಾಮದ ರೈತ ಮಂಜೇಗೌಡರಿಗೆ ಸೇರಿದ ತೋಟದ ಜಮೀನಿನಲ್ಲಿ ಆಕಸ್ಮಿಕ ಬೆಂಕಿ ಬಿದ್ದು ಸರ್ವೇ ನಂ153ರಲ್ಲಿನ 2.5 ಎಕರೆ ಜಮೀನಿನಲ್ಲಿ ಬೆಳೆದಿದ್ದ ತೆಂಗು, ಅಡಿಕೆ, ಕಬ್ಬು, ಬಾಳೆಗಿಡಗಳು ನಾಶವಾಗಿವೆ.

ಅಕಸ್ಮಿಕ ಬೆಂಕಿಯಿಂದ ಸುಮಾರು ಫಲಬಿಡುವ 60 ತೆಂಗಿನ ಮರ, ಗೊನೆಬಿಡುತ್ತಿದ್ದ 400 ಬಾಳೆಗಿಡ, 150 ಅಡಿಕೆ ಮರಗಳು ನಾಶವಾಗಿವೆ. ಅಲ್ಪಸ್ವಲ್ಪ ಪ್ರಮಾಣದ ಕಬ್ಬಿನ ಗದ್ದೆಗೆ ಬೆಂಕಿ ಬಿದ್ದಿದೆ. ಬೆಂಕಿ ನಂದಿಸಲು ಅಕ್ಕಪಕ್ಕದ ಜಮೀನಿನವರು ಜೊತೆಗೂಡಿ ಹರಸಾಹಸ ಮಾಡಿ ನಂದಿಸಿದ್ದಾರೆ.

ಘಟನೆಯಲ್ಲಿ ಸುಮಾರು 2 ಲಕ್ಷ ರು.ಗಳಷ್ಟು ಷ್ಟವಾಗಿದೆ ಎನ್ನಲಾಗಿದೆ. ಪ್ರಾಕೃತಿಕ ವಿಕೋಪದಡಿಯಲ್ಲಿ ಬೆಂಕಿಯಿಂದ ನಷ್ಟವಾಗಿರುವ ರೈತರಿಗೆ ತುರ್ತು ಪರಿಹಾರ ನೀಡಲು ರೈತಾಪಿ ಜನತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.

ಮನೆ ಬೀಗ ಮುರಿದು ಹಣ, ಚಿನ್ನಾಭರಣ ಕಳವು

ಮಂಡ್ಯ: ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ದುಷ್ಕರ್ಮಿಗಳು ಮನೆಯ ಬಾಗಿಲಿನ ಬೀಗ ಮುರಿದು ಕಬ್ಬಿಣದ ಅಲ್ಮೇರಾದಲ್ಲಿದ್ದ ೩೨ ಗ್ರಾಂ ಚಿನ್ನಾಭರಣ, ೮ ಸಾವಿರ ರು. ನಗದು ಹಣವನ್ನು ಕದ್ದೊಯ್ದಿರುವ ಘಟನೆ ತಾಲೂಕಿನ ಮುತ್ತೇಗೆರೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಪದ್ಮ ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಕಿವಿ ಒಲೆ, ಚಿನ್ನದ ಚೈನ್, ಚಿನ್ನದ ಲಕ್ಷ್ಮಿ ಒಲೆ, ೩೫೦ ಗ್ರಾಂ ಬೆಳ್ಳಿ ದೀಪಾಲೆ ಕಂಬ, ದೀಪ, ೮ ಸಾವಿರ ರು. ನಗದು ಸೇರಿದಂತೆ ಒಟ್ಟು ೧.೪೦ ಲಕ್ಷ ರು. ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದಾರೆ ಎಂದು ದೂರಿದ್ದಾರೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಬಸರಾಳು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮನ್‌ಮುಲ್‌ ಚುನಾವಣೆ : ಅಂತಿಮ ಕಣದಲ್ಲಿ 26 ಅಭ್ಯರ್ಥಿಗಳು

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಆಡಳಿತ ಮಂಡಳಿಗೆ ಫೆ.2ರಂದು ನಡೆಯಲಿರುವ ಚುನಾವಣೆಗೆ ಅಂತಿಮವಾಗಿ 26 ಮಂದಿ ಕಣದಲ್ಲಿ ಉಳಿದುಕೊಂಡಿದ್ದು, ಉಮೇದುವಾರಿಕೆ ಸಲ್ಲಿಸಿದ್ದವರ ಪೈಕಿ 8 ಮಂದಿ ನಾಮಪತ್ರ ಹಿಂಪಡೆದಿದ್ದಾರೆ.

ನಾಮಪತ್ರ ವಾಪಸ್‌ ಪಡೆಯುವ ದಿನವಾದ ಸೋಮವಾರ ಮಂಡ್ಯ ತಾಲೂಕಿನಿಂದ ಬಿ.ಚಂದ್ರ, ಜಿ.ಎಸ್‌.ಪುಷ್ಪಾವತಿ, ಪಾಂಡವಪುರ ತಾಲೂಕಿನಿಂದ ಜಿ.ಇ.ರವಿಕುಮಾರ್‌, ಮಳವಳ್ಳಿಯಿಂದ ಜಿ.ಎಂ.ವಿಷಕಂಠೇಗೌಡ, ಕೆ.ಆರ್‌.ಪೇಟೆಯಿಂದ ಎ.ಎಸ್‌.ಕಲ್ಪನ, ಮದ್ದೂರು ತಾಲೂಕಿನಿಂದ ಸಿ.ಚಲುವರಾಜು, ಎಸ್‌.ಟಿ.ಪ್ರಕಾಶ್‌ಗೌಡ ಉಮೇದುವಾರಿಕೆ ಹಿಂಪಡೆದಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ತಿಳಿಸಿದ್ದಾರೆ.

ಕಣದಲ್ಲಿರುವ ಅಂತಿಮ ಅಭ್ಯರ್ಥಿಗಳು:

ಮಂಡ್ಯ ತಾಲೂಕಿನಿಂದ ಬಿ.ಆರ್‌.ರಾಮಚಂದ್ರ, ಎಂ.ಎಸ್‌.ರಘುನಂದನ್‌, ಯು.ಸಿ.ಶಿವಕುಮಾರ್‌, ಕೆ.ರಾಜು, ವಿಜಯಕುಮಾರ್‌.

ಮದ್ದೂರು ತಾಲೂಕಿನಿಂದ ಎಸ್‌.ಪಿ.ಸ್ವಾಮಿ, ಎಂ.ರೂಪಾ, ಕದಲೂರು ರಾಮಕೃಷ್ಣ, ಬಿ.ಅನಿಲ್‌ಕುಮಾರ್‌, ಎಸ್‌.ಮಹೇಶ, ಎಂ.ಕೆ.ಹರೀಶ್‌ಬಾಬು.

ಮಳವಳ್ಳಿ ತಾಲೂಕಿನಿಂದ ಡಿ.ಕೃಷ್ಣೇಗೌಡ, ವಿ.ಎಂ.ವಿಶ್ವನಾಥ್.

ಪಾಂಡವಪುರ ತಾಲೂಕಿನಿಂದ ಕೆ.ರಾಮಚಂದ್ರ, ಸಿ.ಶಿವಕುಮಾರ್‌.

ಶ್ರೀರಂಗಪಟ್ಟಣ ತಾಲೂಕಿನಿಂದ ಎಂ.ಕಿಶೋರ್‌ (ಕಿರಣ್‌), ಎಚ್‌.ಎಂ.ಪುಟ್ಟಸ್ವಾಮಿಗೌಡ, ಬಿ.ಬೋರೇಗೌಡ.

ಕೆ.ಆರ್‌.ಪೇಟೆ ತಾಲೂಕಿನಿಂದ ಎಚ್‌.ಟಿ.ಮಂಜು, ಎನ್‌.ಎಸ್‌.ಮಹೇಶ, ಕೆ.ರವಿ, ಎಂ.ಬಿ.ಹರೀಶ್‌,

ನಾಗಮಂಗಲ ತಾಲೂಕಿನಿಂದ ಎನ್‌.ಅಪ್ಪಾಜಿಗೌಡ, ಲಕ್ಷ್ಮೀನಾರಾಯಣ, ದೇವೇಗೌಡ, ನೆಲ್ಲೀಗೆರೆ ಬಾಲು ಅಂತಿಮವಾಗಿ ಕಣದಲ್ಲಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟ್ರಂಪ್‌ಗೆ ಸಿದ್ದು ಆರ್ಥಿಕ ಸಚಿವರಾಗಲಿ: ಎಚ್ಡಿಕೆ!
‘ನರೇಗಾ’ ಬದಲಾವಣೆ ವಿರುದ್ಧ ಹೋರಾಟ : ಪೈಲಟ್‌