ಹದಿಹರೆಯದ ಯುವಕರು ಎಚ್ಚರಿಕೆ ವಹಿಸದೆ ಅವಘಡಗಳು ಸಂಭವಿಸುತ್ತಿವೆ: ಕೆ.ಎಂ.ಉದಯ್

KannadaprabhaNewsNetwork |  
Published : Jun 10, 2025, 12:19 PM IST
9ಕೆಎಂಎನ್ ಡಿ18 | Kannada Prabha

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಬಿಸಿ ರಕ್ತದ ಯುವಕರು ಅರಿವಿನ ಕೊರತೆಯಿಂದಾಗಿ ಪ್ರಾಣವನ್ನು ಲೆಕ್ಕಿಸದೆ ನೀರಿನಲ್ಲಿ ಈಜಲು ಹೋಗಿ, ಬೈಕ್‌ಗಳಲ್ಲಿ ಹೆಲ್ಮೆಟ್ ಬಳಸದೆ ಅತಿವೇಗ ಮತ್ತು ಅಜಾಗಾರುಕತೆಯಿಂದ ವಾಹನ ಚಾಲನೆ ಮಾಡಿ ಅಪಘಾತಕ್ಕೆ ತುತ್ತಾಗಿ ಜೀವ ಕಳೆದು ಕೊಳ್ಳುತ್ತಿರುವುದು ದುರ್ದೈವದ ಸಂಗತಿ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಹದಿಹರೆಯದ ಯುವಕರು ಎಚ್ಚರಿಕೆ ವಹಿಸದೆ ಆಗುತ್ತಿರುವ ಅಪಘಾತಗಳು, ಅವಘಡಗಳು ಹಾಗೂ ಸಾವು ನೋವಿನ ಬಗ್ಗೆ ಪೋಷಕರು ನಿಗಾ ವಹಿಸಬೇಕು ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.

ಕಳೆದ ಎರಡು ದಿನಗಳ ಹಿಂದೆ ಕ್ಯಾತಘಟ್ಟ ಸಮೀಪ ಹೆಬ್ಬಾಳ ಕಾಲುವೆಯಲ್ಲಿ ಈಜಲು ಹೋಗಿ ಸಾವನ್ನಪ್ಪಿದ್ದ ಸಮೀಪದ ಅಲಭುಜನಹಳ್ಳಿಯ ಚೇತನ್ ಮತ್ತು ದರ್ಶನ್ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಆರ್ಥಿಕ ಸಹಾಯ ನೀಡಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಬಿಸಿ ರಕ್ತದ ಯುವಕರು ಅರಿವಿನ ಕೊರತೆಯಿಂದಾಗಿ ಪ್ರಾಣವನ್ನು ಲೆಕ್ಕಿಸದೆ ನೀರಿನಲ್ಲಿ ಈಜಲು ಹೋಗಿ, ಬೈಕ್‌ಗಳಲ್ಲಿ ಹೆಲ್ಮೆಟ್ ಬಳಸದೆ ಅತಿವೇಗ ಮತ್ತು ಅಜಾಗಾರುಕತೆಯಿಂದ ವಾಹನ ಚಾಲನೆ ಮಾಡಿ ಅಪಘಾತಕ್ಕೆ ತುತ್ತಾಗಿ ಜೀವ ಕಳೆದು ಕೊಳ್ಳುತ್ತಿರುವುದು ದುರ್ದೈವದ ಸಂಗತಿ. ಪೋಷಕರು ಹಾಗೂ ಯುವಕರು ಹೆಚ್ಚು ಜಾಗ್ರತೆ ವಹಿಸಬೇಕು. ಯಾವುದೇ ಹುಚ್ಚು ಸಾಹಸಕ್ಕೆ ಆಕರ್ಷಿಸದೆ ಎಚ್ಚರಿಕೆ ಜೀವನ ಸಾಗಿಸಬೇಕು ಎಂದು ಕರೆ ನೀಡಿದರು.

ಮೃತ ಯುವಕರು ಪ್ರತಿಭಾವಂತ ವಿಧ್ಯಾರ್ಥಿಗಳಾಗಿದ್ದು, ಇತ್ತೀಚೆಗೆ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪ್ರತಿಭಾ ಪುರಸ್ಕಾರ ಪಡೆದ ಯುವಕನ ದುರ್ಮರಣ ನೆನೆದು ಕಂಬನಿ ಮಿಡಿದರು.

ಈ ವೇಳೆ ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ರಾಜೀವ್, ಮದ್ದೂರು ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ತೈಲೂರು ಚಲುವರಾಜು, ಯುವ ಘಟಕದ ಅಧ್ಯಕ್ಷ ಪ್ರಜಾಪ್ರಿಯ ವೆಂಕಟೇಶ್, ಕೆಪಿಸಿಸಿ ಸದಸ್ಯ ಚಿದಂಬರಮೂರ್ತಿ, ಮುಖಂಡರಾದ ಮುಡೀನಹಳ್ಳಿ ತಿಮ್ಮಯ್ಯ, ಪ್ರಸನ್ನಗೌಡ, ಶಿವರಾಜು, ಚಿಕ್ಕರಸಿನಕೆರೆ ಜಾಣಪ್ಪ, ಸಿದ್ದಯ್ಯ, ಆಟೋ ಮಹದೇವ್, ಓಂ ಪ್ರಕಾಶ್, ಶಿವಕುಮಾರ್,ಗುಡಿಗೆರೆ ಪ್ರಸಾದ್, ಕೆ.ಕೆ.ಹಳ್ಳಿ ಮರಿಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ