ಕೆಲಸದಲ್ಲಿ ಶ್ರೇಷ್ಠತೆ ಸಂಪಾದಿಸಿ; ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ

KannadaprabhaNewsNetwork |  
Published : Nov 06, 2026, 02:30 AM IST
5 ರೋಣ 1.ವಿ.ಎಂ.ನಾಡಗೌಡ ಕಾನೂನು ಮಹಾವಿದ್ಯಾಲಯದ ಉದ್ಘಾಟನೆ  ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ರಾಜ್ಯ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಉದ್ಘಾಟಿಸಿದರು. | Kannada Prabha

ಸಾರಾಂಶ

ತೊಡಿಗಿರುವ ಕೆಲಸದಲ್ಲಿ ಶ್ರೇಷ್ಠತೆ ಸಂಪಾದಿಸಬೇಕು. ಅಂದಾಗ ಮಾತ್ರ ಅಂತಹ ವ್ಯಕ್ತಿಯ ವ್ಯಕ್ತಿತ್ವ ಮೌಲ್ಯಯುತವಾಗುವ ಜೊತೆಗೆ, ಬದುಕನ್ನು ಸುಂದರವಾಗಿಸಿಕೊಳ್ಳಲು ಸಾಧ್ಯ.

ಕನ್ನಡಪ್ರಭ ವಾರ್ತೆ ರೋಣ

ತೊಡಿಗಿರುವ ಕೆಲಸದಲ್ಲಿ ಶ್ರೇಷ್ಠತೆ ಸಂಪಾದಿಸಬೇಕು. ಅಂದಾಗ ಮಾತ್ರ ಅಂತಹ ವ್ಯಕ್ತಿಯ ವ್ಯಕ್ತಿತ್ವ ಮೌಲ್ಯಯುತವಾಗುವ ಜೊತೆಗೆ, ಬದುಕನ್ನು ಸುಂದರವಾಗಿಸಿಕೊಳ್ಳಲು ಸಾಧ್ಯ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಹೇಳಿದರು.

ಗುರುವಾರ ಪಟ್ಟಣದ ರಾಜೀವಗಾಂಧಿ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಜರುಗಿದ ವಿ.ಎಂ. ನಾಡಗೌಡ ಕಾನೂನು ಮಹಾವಿದ್ಯಾಲಯದ ಉದ್ಘಾಟನೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ಶಿಕ್ಷಣ ಎಂದರೆ ಕೇವಲ ಅಂಕ ತೆಗೆದುಕೊಳ್ಳುವುದರಲ್ಲಿ ಮಾನವೀಯ ಮೌಲ್ಯವಿರುವ ವ್ಯಕ್ತಿತ್ವ, ಗಣತೆಯುಳ್ಳ ಬದುಕು ತಮ್ಮದಾಗಿಸಿಕೊಳ್ಳುವುದೇ ನಿಜವಾದ ಶಿಕ್ಷಣವಾಗಬೇಕು. ಸಮಾಜಕ್ಕೆ ಒಳಿತಾಗುವಂತೆ ಕಲಿಯಬೇಕು. ಜೀವನದ ಗುರಿ ಆಕರ್ಷಿಸುವಂತಿರಬೇಕು. ಗುರಿ ಸಾಧನೆಗೆ ನಿರಂತರ ಪರಿಶ್ರಮಿಗಳಾಗಬೇಕು. ವಿಚಾರಾಸಕ್ತಿ ನಿರ್ಣಾಯಕ ಹಂತದ್ದಾಗಿರಬೇಕು. ಇತರರಿಗೆ ಒಳಿತಾಗುವಂತೆ ಬದುಕಬೇಕು. ಬದುಕಿನ ಸಾರ್ಥಕತೆಗೆ ಕಲಿಗೆ ಅಗತ್ಯವಾಗಿದೆ ಎಂದರು.

ಹಾವೇರಿ, ಕೊಪ್ಪಳ, ಗದಗ, ಬಳ್ಳಾರಿ ಜಿಲ್ಲೆಗಳಲ್ಲಿ ಕಳೆದ 10 ದಿನಗಳಿಂದ 40ಕ್ಕೂ ಹೆಚ್ಚು ಲೋಕಾಯುಕ್ತ ಸಿಬ್ಬಂದಿ ಮೂಲಕ ಪ್ರತಿಯೊಂದು ಇಲಾಖೆ ಕಾರ್ಯ ವೈಖರಿ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಸರ್ಕಾರಿ ಅಧಿಕಾರಿಗಳು ಸಾರ್ವಜನಿಕ ಸೇವಕರಾಗುವ ಬದಲು ಸಾರ್ವಜನಿಕ ಮಾಲಿಕರಂತೆ ವರ್ತಿಸುತ್ತಿದ್ದು ಕಂಡು ಬಂದಿದ್ದು, ಜನತೆಗೆ ಒಂದು ಕೆಲಸಕ್ಕೆ ಕಛೇರಿಗಳಿಗೆ ಸಾಕಷ್ಟು ಬಾರಿ ಅಲೆಯುತ್ತಿದ್ದಾರೆ. ಇದನ್ನು ಸರಿಪಡಿಸುವಲ್ಲಿ ಸರ್ಕಾರಿ ಇಲಾಖೆಗಳಿಗೆ ಸರ್ಜರಿ ಮಾಡಬೇಕಿದೆ. ಈ ದಿಶೆಯಲ್ಲಿ ಲೋಕಾಯುಕ್ತ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದರು.

ಕರ್ನಾಟಕ ರಾಜ್ಯ ವಿಶ್ರಾಂತ ಮುಖ್ಯ ಕಾರ್ಯದರ್ಶಿ ಬಿ.ಎಸ್. ಪಾಟೀಲ ಮಾತನಾಡಿ, ಭವಿಷ್ಯದಲ್ಲಿ ಯಶಸ್ಸು ಕಂಡುಕೊಳ್ಳಲು ಗುರಿ ಸಾಧನೆಗೆ ಕಠಿಣ ಶ್ರಮ ಮುಖ್ಯವಾಗಿದೆ. ಏನೇ ಸಾಧನೆಗೂ ಶಿಕ್ಷಣ ಬುನಾದಿಯಾಗಲಿದೆ ಎಂದರು.

ವಿಧಾನಸಭಾಧ್ಯಕ್ಷ ಜಿ.ಎಸ್. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಸಂಸದ ಆರ್.ಎಸ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭದಲ್ಲಿ ಕೆಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಐ.ಎಸ್. ಪಾಟೀಲ, ಉದ್ಯಮಿ ಸಂಜಯ ನಾಡಗೌಡ, ಡಾ.ಕೆ.ಬಿ. ಧನ್ನೂರ, ಸಿಂಡಿಕೇಟ್ ಸದಸ್ಯೆ ಪದ್ಮಾವತಿ ಮಾನೆ ಸೇರಿದಂತೆ ಮುಂತಾದವರಿದ್ದರು. ಉಪನ್ಯಾಸಕ ಅಕ್ಷಯ ಪಾಟೀಲ ನಿರೂಪಿಸಿ, ಸ್ವಾಗತಿಸಿದರು. ಪ್ರಾಚಾರ್ಯ ಡಿ.ಬಿ. ನರಗುಂದ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುಬ್ರಹ್ಮಣ್ಯ: ನೀರಿಗೆ ಹಾರಿ ಆತ್ಮಹತ್ಯೆ ಗೆ ಯತ್ನಿಸಿದ ಮಹಿಳೆ
ಬ್ರಹ್ಮಾವರ: ಬಾಳೆಕುದ್ರು ಮಠದ ಶ್ರೀಗಳು ನಾಪತ್ತೆ !