ಗುರಿ ದೃಢವಾಗಿದ್ದರೇ ಮಾತ್ರ ಸಾಧನೆ ಸಾಧ್ಯ

KannadaprabhaNewsNetwork | Published : Aug 3, 2024 12:45 AM

ಸಾರಾಂಶ

ವಿದ್ಯಾರ್ಥಿಗಳಲ್ಲಿ ಗುರಿ ದೃಢವಾಗಿದ್ದರೇ ಮಾತ್ರ ಸಾಧನೆ ಸಾಧ್ಯವಾಗಲಿದೆ ಎಂದು ವಿಜಯಪುರ ವೇದಾ ಅಕಾಡೆಮಿಯ ಸಂಸ್ಥಾಪಕ ಶಿವಾನಂದ ಕೇಲೂರ ಹೇಳಿದರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ವಿದ್ಯಾರ್ಥಿಗಳಲ್ಲಿ ಗುರಿ ದೃಢವಾಗಿದ್ದರೆ ಮಾತ್ರ ಸಾಧನೆ ಸಾಧ್ಯವಾಗಲಿದೆ ಎಂದು ವಿಜಯಪುರ ವೇದಾ ಅಕಾಡೆಮಿಯ ಸಂಸ್ಥಾಪಕ ಶಿವಾನಂದ ಕೇಲೂರ ಹೇಳಿದರು.

ಪಟ್ಟಣದ ಬಿಎಲ್‌ಡಿಇ ಸಂಸ್ಥೆಯ ಎ.ಬಿ.ಸಾಲಕ್ಕಿ ಕಲಾ ಹಾಗೂ ವಾಣಿಜ್ಯ ಪಪೂ ಮಹಾವಿದ್ಯಾಲಯ ಹಾಗೂ ಮಾಧ್ಯಮಿಕ ವಿಭಾಗದಿಂದ 2024-25ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯೆಯ ಜೊತೆಗೆ ಛಲ ಹಾಗೂ ಆತ್ಮಸ್ಥೈರ್ಯವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಆತ್ಮಶಕ್ತಿ, ಮನೋಬಲದಿಂದ ಮುನ್ನುಗ್ಗಿದರೇ ಭವಿಷ್ಯದಲ್ಲಿ ಮಹತ್ತರ ಸಾಧನೆ ಸಾಧಿಸಬಹುದು ಎಂದರು.ಬನಹಟ್ಟಿ ನಿವೃತ್ತ ಪ್ರಾಂಶುಪಾಲ ಡಾ.ಎಸ್.ಬಿ.ಮಟ್ಟೊಳ್ಳಿ ಮಾತನಾಡಿ, ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ, ಜ್ಞಾನ, ಕಠಿಣ ಪರಿಶ್ರಮದಿಂದ ಯಾವುದೇ ಸಾಧನೆ ಮಾಡಬಹುದು. ಉತ್ತಮ ಆದರ್ಶಗಳನ್ನಿಟ್ಟುಕೊಂಡು ಜೀವನ ರೂಪಿಸಿಕೊಳ್ಳುವುದರ ಜತೆಗೆ ನಮ್ಮ ದೇಶ, ಪೋಷಕರು, ಗುರುಗಳು ಮತ್ತು ನಿಮಗೆ ವಿದ್ಯೆ ಕಲಿಸಿದ ಶಿಕ್ಷಣ ಸಂಸ್ಥೆಗೆ ಕೀರ್ತಿ ತರಬೇಕು ಎಂದು ತಿಳಿಸಿದರು.ಉಪನ್ಯಾಸಕ ಸುರೇಶ ಬಿರಾದಾರ ಮಾತನಾಡಿ, ಆಧುನಿಕ ತಂತ್ರಜ್ಞಾನವನ್ನು ಮಕ್ಕಳು ತಮ್ಮ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಬಳಸಿಕೊಂಡು, ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆ, ಕೌಶಲ್ಯ ಹಾಗೂ ಸೃಜನಶೀಲತೆ ಹೊರತರಬೇಕು ಎಂದು ಜಾನಪದ ಹಾಡುಗಳ ಮೂಲಕ ತಿಳಿಹೇಳಿದರು. ಬಿಎಲ್‌ಡಿಇ ಸಂಸ್ಥೆಯ ಪಪೂ ಕಾಲೇಜು ವಿಭಾಗ ಆಡಳಿತಾಧಿಕಾರಿ ಬಿ.ಆರ್.ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ದುರ್ಬಲತೆಯನ್ನು ಮೀರಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮುಂದುವರಿದಾಗ ಮಾತ್ರ ಯಾವುದೇ ಕ್ಷೇತ್ರದಲ್ಲಾದರೂ ಸಾಧನೆ ಮಾಡಲು ಸಾಧ್ಯ ಎಂದರು.ಪ್ರಾಚಾರ್ಯ ವಿ.ಜಿ.ಹೂನಳ್ಳಿ ಮಾತನಾಡಿದರು. ಕ್ರೀಡಾ ವಿಭಾಗದ ಶಿಕ್ಷಕ ಮಲ್ಲಿಕಾರ್ಜುನ ಕರಿಕಬ್ಬಿ ವಿದ್ಯಾರ್ಥಿಗಳಿಗೆ ಕ್ರೀಡಾ ಪ್ರತಿಜ್ಞೆ ಬೋಧಿಸಿದರು. ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹಾಗೂ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಇದೇ ಸಂದರ್ಭದಲ್ಲಿ ಗಣ್ಯ ವ್ಯಾಪಾರಸ್ಥರು ಶಿಕ್ಷಣ ಪ್ರೇಮಿಗಳಾದ ಕಾಶಿನಾಥ ಸಾಲಕ್ಕಿ, ಡಾ.ಅಮರ ಸಾಲಕ್ಕಿ, ಸುರೇಶ ಮಣ್ಣೂರ, ಶರಣಪ್ಪ ಸಾಲಕ್ಕಿ, ಕಾಲೇಜು ಹಾಗೂ ಮಾಧ್ಯಮಿಕ ವಿಭಾಗದ ಸಿಬ್ಬಂದಿ ಪಿ.ಆರ್.ಬಿರಾದಾರ, ಬಿ.ಬಿ.ಬಿರಾದಾರ, ಐ.ಬಿ. ಬಿದರಿ, ಆರ್.ಆರ್.ಕೋರಿ, ಎ.ಎಸ್.ನಾವಿ, ಕೆ.ವಿ.ಸಾಲಿಮಠ, ಕೆ.ಜಿ.ಮೆಟಗಾರ, ವಿ.ಆರ್.ಪಾಟೀಲ, ಎಂ.ಬಿ.ತಹಸೀಲ್ದಾರ್‌, ಬಿ.ಎಂ.ಬುಜರಿ, ಡಿ.ಬಿ.ಜನಗೊಂಡ, ಕುಮಟಗಿ, ಕಿಣಗಿ ಹಾಗೂ ಅನೀಲ ಮಣೂರ ಸೇರಿದಂತೆ ಕಾಲೇಜು ಹಾಗೂ ಮಾಧ್ಯಮಿಕ ವಿಭಾಗದ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ, ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಖ್ಯ ಗುರು ವಿ.ಎಂ.ಪಾಟೀಲ ಸ್ವಾಗತಿಸಿದರು. ಉಪನ್ಯಾಸಕಿ ವಿ.ಆರ್. ಹಿರೇಮಠ ನಿರೂಪಿಸಿದರು. ನವೀನಕುಮಾರ ವಂದಿಸಿದರು.

ವಿದ್ಯಾರ್ಥಿಗಳು ಸಾಧನೆಗೆ ಕಠಿಣ ಪರಿಶ್ರಮ, ಸಮಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಸಂಸ್ಥೆಯ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರರಷ್ಟು ಅಂಕ ಪಡೆದವರಿಗೆ ₹1 ಲಕ್ಷ ಬಹುಮಾನ ನೀಡಲಾಗುವುದು.

- ಶಿವಾನಂದ ಕೇಲೂರ,

ವಿಜಯಪುರ ವೇದಾ ಅಕಾಡೆಮಿಯ ಸಂಸ್ಥಾಪಕರು.

Share this article