ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ಗ್ರಾಮೀಣ ಪ್ರದೇಶದಲ್ಲಿ ಲಯನ್ಸ್ ಕ್ಲಬ್‌ಗಳು ಸಾಧನೆ ಮಾಡುವುದು ಸುಲಭದ ಮಾತಲ್ಲ ಎಂದು ಪಿ.ಎಂ.ಜೆ.ಎಫ್ ಸಂಯೋಜಕ ರಾಮಾನಂದ ತಿಳಿಸಿದರು.ಅವರು ಪಟ್ಟಣದ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಬುಧವಾರ ಲಯನ್ಸ್ ಕ್ಲಬ್‌ನಲ್ಲಿ ಹಮ್ಮಿಕೊಂಡಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪ್ರತಿಜ್ಜಾವಿದಿ ಬೋಧಿಸಿ ಮಾತನಾಡಿದರು.
ರಾಷ್ಟ್ರದ ಬಗ್ಗೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ, ವಿಶ್ವ ಶಾಂತಿಗಾಗಿ ಲಯನ್ಸ್ ಬಂಧುಗಳು ಮಿಡಿಯುತ್ತಾರೆ. ಸಮಾಜದಲ್ಲಿ ನೀತಿ ಬೋಧನೆಗಳೊಂದಿಗೆ ಸಮಾಜಮುಖಿಯಾಗಿ ಜೀವನ ಕಟ್ಟಿಕೊಳ್ಳಬೇಕು. ಜನಸಾಮಾನ್ಯರ ಸಂಕಷ್ಟಕ್ಕೆ ಮಿಡಿಯುವ ಮನಸುಗಳು ಸದಾ ಹಸನಾಗಿರುತ್ತವೆ. ನಾಯಕತ್ವ ಗುಣ ಬೆಳಿಸಿ ಕೊಂಡು ಸದಸ್ಯರನ್ನು ಸೇರ್ಪಡೆ ಮಾಡಿಕೊಳ್ಳಬೇಕು ಎಂದರು.ಸೇವೆಯ ಬಗ್ಗೆ ಅರಿವು ಮೂಡಿಸಬೇಕು. ಸದಸ್ಯರು ಕ್ಲಬ್‌ನಿಂದ ಹಿಮ್ಮುಖವಾಗುವಂತೆ ನೋಡಿಕೊಳ್ಳಬೇಕು. ಕ್ಲಬ್‌ಗಳಿಗೆ ಸದಸ್ಯರು ಕ್ಷಿಣಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಶಾಂತಿ, ಸುವವ್ಯಸ್ಥೆ ಕಾಪಾಡುವಲ್ಲಿ ಸದಸ್ಯರು ಶ್ರಮ ವಹಿಸಬೇಕು. ಎಲ್.ಸಿ.ಎಫ್ ಫಂಡ್‌ನಿಂದ ಶಾಲಾ ಕಾಲೇಜ್, ಆಸ್ಪತ್ರೆ ನಿರ್ಮಾಣ, ನೆರೆ ಹಾಗೂ ಬರಗಾಲ ಪರಿಹಾರ ಕಾರ್ಯಕ್ಕೆ ಸಹಕಾರವಾಗುತ್ತದೆ ಎಂದರು.
ನೂತನ ಅಧ್ಯಕ್ಷ ಎನ್.ಎಸ್.ರುದ್ರೇಶ್ ಮಾತನಾಡಿ, ಸಾರ್ವಜನಿಕ ಚಟುವಟಿಕೆಗಳು ಸಮಾಜ ಮುಖಿಯಾಗಿ ನಡೆಯಬೇಕು. ಸೇವಾ ಕ್ಷೇತ್ರವನ್ನು ಮತ್ತಷ್ಟು ಹೆಚ್ಚಿಸಿ ಕೊಂಡು ಸಮಾಜಮುಖಿ ಕಾರ್ಯಗಳನ್ನು ನಡೆಸಲಾಗುವುದು. ಕ್ಲಬ್‌ಗಳು ನಾಯಕತ್ವ ಗುಣ ಬೆಳೆಸಿಕೊಳ್ಳಲು ಸಹಕಾರಿಯಾಗಿದೆ. ಲಯನ್ ಬಂಧುಗಳ ಸಹಯೋಗ ದೊಂದಿಗೆ ಸೇವಾ ಚಟುವಟಿಕೆಗಳನ್ನು ದ್ವಿಗುಣ ಮಾಡಲಾಗುವುದು ಎಂದರು.ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ನೀಡಿ ಗ್ರಾಮೀಣ ಭಾಗದ ಮಕ್ಕಳಿಗೆ ನೀಡಲಾಗುತ್ತಿದೆ. ಅರೋಗ್ಯ ಕ್ಷೇತ್ರದಲ್ಲೂ ವಿಶೇಣ ಛಾಪು ಮೂಡಿಸಲಾಗಿದೆ. ಶೈಕ್ಷಣಿಕ, ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುವುದು. ಕೈಮರ ವೃತ್ತದಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಕೆಲವೇ ದಿನಗಳಲ್ಲಿ 10 ಒಲಿಗೆ ಯಂತ್ರ ನೀಡಲಾಗುವುದು ಎಂದರು.
ಕಾರ್ಯದರ್ಶಿ ರಾಜೇಶ್, ಖಜಾಂಚಿ ಪ್ರವೀಣ್, ರುದ್ರೇಶನ್, ಸೀತಾರಾಂ, ರಂಗನಾಥ್, ಡಾ.ವಿಜಯ ಕುಮಾರ್ ಶೆಟ್ಟಿ, ಸತೀಶ್ ಗಣಾಚಾರಿ, ವಿಜಯ್ ಕುಮಾರ್. ಎಂ.ಪಾಲಾಕ್ಷಪ್ಪ, ದ್ಯಾಮಪ್ಪ, ಶಂಕರ್, ರೇಣುಕೇಶ್, ಚನ್ನಯ್ಯ ಸೇರಿದಂತೆ ಇನ್ನಿತರಿದ್ದರು.