ಸಾಧನೆ ಮಾತನಾಗಬೇಕೆ ಹೊರತು, ಮಾತು ಸಾಧನೆಯಾಗಬಾರದು: ಡಾ. ಆರತಿ ಕೃಷ್ಣ

KannadaprabhaNewsNetwork |  
Published : Oct 24, 2025, 01:00 AM IST
ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯೆ ಡಾ. ಆರತಿ ಕೃಷ್ಣ ಅವರು ಮಾತನಾಡಿದರು. | Kannada Prabha

ಸಾರಾಂಶ

ಮೂಡಿಗೆರೆ, ಸಾಧನೆ ಮಾತನಾಗಬೇಕೆ ಹೊರತು, ಮಾತು ಸಾಧನೆಯಾಗಬಾರದು. ಈ ನಿಟ್ಟಿನಿಲ್ಲಿ ಜನಪ್ರತಿನಿಧಿಗಳು ಕಾರ್ಯ ನಿರ್ವಹಿಸಿದರೆ ಜನರ ಸಮಸ್ಯೆಗಳು ನಿವಾರಣೆಯಾಗಲು ಸಾಧ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯೆ ಡಾ. ಆರತಿ ಕೃಷ್ಣ ಹೇಳಿದರು.

- ಮಾಜಿ ಸಂಸದ ಡಿ.ಎಂ.ಪುಟ್ಟೇಗೌಡ ಮನೆಯಲ್ಲಿ ಅಭಿಮಾನಿ ಬಳಗದಿಂದ ನಡೆದ ಅಭಿನಂದನಾ ಸಮಾರಂಭ

ಕನ್ನಡಪ್ರಭ ವಾರ್ತೆ, ಮೂಡಿಗೆರೆ

ಸಾಧನೆ ಮಾತನಾಗಬೇಕೆ ಹೊರತು, ಮಾತು ಸಾಧನೆಯಾಗಬಾರದು. ಈ ನಿಟ್ಟಿನಿಲ್ಲಿ ಜನಪ್ರತಿನಿಧಿಗಳು ಕಾರ್ಯ ನಿರ್ವಹಿಸಿದರೆ ಜನರ ಸಮಸ್ಯೆಗಳು ನಿವಾರಣೆಯಾಗಲು ಸಾಧ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯೆ ಡಾ. ಆರತಿ ಕೃಷ್ಣ ಹೇಳಿದರು.

ಗುರುವಾರ ತಾಲೂಕಿನ ಮಾಕೋನಹಳ್ಳಿ ಗ್ರಾಮದಲ್ಲಿ ಮಾಜಿ ಸಂಸದ ಡಿ.ಎಂ.ಪುಟ್ಟೇಗೌಡ ಮನೆಯಲ್ಲಿ ಡಿ.ಎಂ.ಪುಟ್ಟೇಗೌಡರ ಅಭಿಮಾನಿ ಬಳಗದಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಪಕ್ಷದಲ್ಲಿ ನನಗೆ ಹೊರ ದೇಶದ ಕಾರ್ಯಕ್ರಮ ಆಯೋಜನೆ ಮಾಡುವ ಜವಾಬ್ದಾರಿ ನೀಡಿದ್ದರಿಂದ ಈ ಭಾಗದಲ್ಲಿ ಹೆಚ್ಚಾಗಿ ಗುರುತಿಸಿ ಕೊಳ್ಳಲು ಸಾಧ್ಯವಾಗಿರಲಿಲ್ಲ. ನನ್ನ ತಂದೆ ಕಂಡ ಕನಸು ಈಡೇರಿಸಲು ಇದೀಗ ಒಂದು ಅವಕಾಶ ಸಿಕ್ಕಿದೆ. ಅದನ್ನು ಸಮರ್ಪಕವಾಗಿ ಬಳಸಿಕೊಂಡು ಮುಂದಿನ ದಿನದಲ್ಲಿ ಎಲ್ಲಾ ಸಂಘಟನೆ ಹಾಗೂ ಪಕ್ಷದ ಮುಖಂಡರೊಂದಿಗೆ ನಿರಂತರ ಸಂಪರ್ಕ ಮಾಡುವ ಮೂಲಕ ಜಿಲ್ಲೆಯಲ್ಲಿರುವ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಶ್ರಮಿಸುವುದಾಗಿ ತಿಳಿಸಿದರು. ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ, ಆರತಿ ಕೃಷ್ಣ ಅವರ ತಂದೆ ಬೇಗಾನೆ ರಾಮಯ್ಯ ಅವರು ಮಂತ್ರಿಯಾಗಿದ್ದಾಗ ಜಿಲ್ಲೆಯಾಸದ್ಯಂತ ಹಳ್ಳಿ ಹಳ್ಳಿಗಳಲ್ಲಿ ಕುಡಿಯುವ ನೀರು ಒದಗಿಸಿದ್ದರು. ಇದರಿಂದ ಅವರು ಬೋರ್‌ವೆಲ್ ರಾಮಯ್ಯ ಎಂದೆ ಹೆಸರಾಗಿದ್ದರು. ಅವರ ಪುತ್ರಿ ಆರತಿ ಕೃಷ್ಣ ಅವರಿಗೆ ಎಂಎಲ್‌ಸಿ ಸ್ಥಾನ ಸಿಕ್ಕಿರುವುದು ಶ್ಲಾಘನೀಯ. ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರೊಂದಿಗೆ ನೇರ ಒಡನಾಟ ಹೊಂದಿದ್ದರಿಂದ ಜಿಲ್ಲೆಯಲ್ಲಿ ರೈತರ, ಕಾರ್ಮಿಕರ ಸಮಸ್ಯೆ ಬಗೆಹರಿಸಲು ಸಹಕಾರಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಮಾಜಿ ಎಂಎಲ್‌ಸಿ ಗಾಯಿತ್ರಿ ಶಾಂತೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ, ಮುಖಂಡರಾದ ಓ.ಎಸ್.ಗೋಪಾಲಗೌಡ, ಎಚ್.ಎಚ್.ದೇವರಾಜ್, ಬಿ.ಎಸ್.ಜಯರಾಂಗೌಡ, ಎಂ.ಪಿ.ಮನು, ಎಂ.ಎಲ್.ಮೂರ್ತಿ, ನಿರ್ಮಲಾ ಮಂಚೇಗೌಡ, ಸವಿತಾ ರಮೇಶ್, ಡಾ. ಡಿ.ಎಲ್‌.ವಿಜಯಕುಮಾರ್, ಎಚ್.ಆರ್.ಅಶೋಕ್, ಎ.ಜೆ.ಸುಬ್ರಾಯಗೌಡ, ಸಿ.ಕೆ.ಇಬ್ರಾಹಿಂ, ಅಯೂಬ್ ಹಾಜಿ, ಮನು ಮರೆಬೈಲ್, ಸುರೇಶ್ ಆಲ್ದೂರು ಉಪಸ್ಥಿತರಿದ್ದರು.

23 ಮೂಡಿಗೆರೆ 1ಎಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯೆ ಡಾ. ಆರತಿ ಕೃಷ್ಣ ಮಾತನಾಡಿದರು.

---------------------------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ವಕೀಲರಿಗೆ ಮಾಹಿತಿ ನೀಡದಿದ್ರೆ ಕ್ರಮ : ಹೈ!
ಉತ್ತರ ಕರ್ನಾಟಕಕ್ಕೆ ₹15,000 ಕೋಟಿ : ಅಜಯ್‌