ಬಾಗಲಕೋಟೆ: ಅಂಬಿಗ ಸಮಾಜದ ಮಕ್ಕಳು ಮುಂದುವರಿದ ಸಮಾಜದ ಮಕ್ಕಳಿಗೆ ಶೈಕ್ಷಣಿಕವಾಗಿ ಸಾಕಷ್ಟು ಪ್ರತಿಸ್ಪರ್ಧೆ ನೀಡುತ್ತಿರುವುದು ಖುಷಿ ನೀಡಿದೆ ಎಂದು ಅಂಬಿಗ ಸಮಾಜದ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾಧ್ಯಕ್ಷ ಉದಯ ಅಂಬಿಗೇರ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಅಂಬಿಗ ಸಮಾಜದ ಮಕ್ಕಳು ಮುಂದುವರಿದ ಸಮಾಜದ ಮಕ್ಕಳಿಗೆ ಶೈಕ್ಷಣಿಕವಾಗಿ ಸಾಕಷ್ಟು ಪ್ರತಿಸ್ಪರ್ಧೆ ನೀಡುತ್ತಿರುವುದು ಖುಷಿ ನೀಡಿದೆ ಎಂದು ಅಂಬಿಗ ಸಮಾಜದ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾಧ್ಯಕ್ಷ ಉದಯ ಅಂಬಿಗೇರ ಹೇಳಿದರು.
ನವನಗರದ ಕಲಾಭವನದಲ್ಲಿ ಅಂಬಿಗ ಸಮಾಜದ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಿಕ್ಷಣ ಕ್ರಾಂತಿ ಆದರೆ ಸಮಾಜದಲ್ಲಿ ಕ್ರಾಂತಿಯಾಗಲಿದೆ. ಸಮಾಜ ಪ್ರಾರಂಭಿಸಿರುವ ವಿದ್ಯಾಸಿರಿ ಯೋಜನೆಯ ಲಾಭವನ್ನು ಸಮಾಜದ ಕಟ್ಟಕಡೆಯ ಬಡ ವಿದ್ಯಾರ್ಥಿಗಳು ಪಡೆಯಬೇಕು ಎಂದರು.
ಸಮಾಜದಲ್ಲಿ ಇಂದು ಮಕ್ಕಳು ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ 300ಕ್ಕೂ ಅಧಿಕ ಮಕ್ಕಳು ಸಾಧನೆ ಮಾಡಿದ್ದು ಶ್ಲಾಘನೀವಾದದ್ದು, ಮಕ್ಕಳು ತಮ್ಮ ಪ್ರತಿಭೆ ಹೊರಹಾಕಿದ್ದು ಅವರಿಗೆ ಪಾಲಕರು ಸಹಕಾರ ನೀಡಬೇಕು. ಅವರಿಗೆ ಸಮಾಜ ಕೂಡ ಬೆಂಬಲವಾಗಿ ನಿಲ್ಲುತ್ತದೆ ಎಂದು ಹೇಳಿದರು.
ಸಮಾಜದ ಮಾಜಿ ರಾಜ್ಯಾಧ್ಯಕ್ಷ ಎಂ.ಮೌಲಾಲಿ ಮಾತನಾಡಿ, ಸಮಾಜದ ಬಹುದಿನಗಳ ಬೇಡಿಕೆಯಾಗಿರುವ ಎಸ್.ಟಿ ಸೇರ್ಪಡೆಯ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ನೆಡದಿದ್ದು, ಸಧ್ಯದಲ್ಲಿ ಅದು ಅನುಮೋದನೆಗೊಳ್ಳಲಿದೆ ಎಂದು ಹೇಳಿದರು.
ವಿದ್ಯಾಸಿರಿ ಯೋಜನೆಯ ಹರಿಕಾರ ನಾಗೇಂದ್ರ ಹೊನ್ನಳ್ಳಿ ಮಾತನಾಡಿ, ವಿದ್ಯಾರ್ಥಿಗಳು ಸಮಾಜದ ಉತ್ತಮ ನಾಗರಿಕರಾಗಿ ಪ್ರತಿಯೊಬ್ಬರಿಗೆ ಒಂದೊಂದು ಪ್ರತಿಭೆಯಿದೆ. ಪಾಲಕರು ಮಕ್ಕಳ ಪ್ರತಿಭೆ ಗುರುತಿಸಿ ಮಕ್ಕಳಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿವಿದೆ. ಅಲ್ಲಿ ಸಾಧನೆ ಮಾಡಲು ಅವಕಾಶ ಮಾಡಿಕೊಡಿ. ಸಮಾಜ ಬಾಂಧವರು ಎಲ್ಲರೂ ಒಗ್ಗಟ್ಟಾಗಬೇಕು. ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು. ಗಂಗಾ ವಿದ್ಯಾಸಿರಿ ಯೋಜನೆಯಲ್ಲಿ ಸುಮಾರು ₹70 ಲಕ್ಷ ಹಣ ಸಂಗ್ರಹಿಸಿದ್ದಾರೆ. ಈ ಹಣದಲ್ಲಿ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ನೀಡಲಾಗುವುದು. ಈ ಯೋಜನೆ ಲಾಭ ಪಡೆದ ಮಕ್ಕಳು ಮುಂದೆ ಸಮಾಜದ ಬಡ ಮಕ್ಕಳಿಗೆ ಸಹಾಯ ಸಹಕಾರ ಮಾಡಬೇಕು ಎಂದು ಹೇಳಿದರು.
ಅಂಬಿಗ ಸಮಾಜದ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಮಾಜದ ಜಿಲ್ಲಾಧ್ಯಕ್ಷ ಮಹೇಶ ಕೋಳಿ, ನಾಗಪ್ಪ ಅಂಬಿ, ಎಂ.ಬಿ. ಅಂಬಿಗೇರ, ಚಿನ್ನು ಅಂಬಿ, ಶ್ರೀಕಾಂತ ಕಟ್ಟಿಮನಿ, ಎಚ್.ಸಿ. ಅಂಬಿಗೇರ, ಪುಂಡಲೀಕ ಕರೇಣಿ, ಸಿ.ಆರ್. ಕೋಲ್ಕಾರ ,ಶಿವಾನಂದ ಗೋಕಾವಿ, ರಾಮಣ್ಣ ರಾಮವಾಡಗಿ, ಸದಾಸಿವ ಕಟ್ಟಿಮನಿ, ಬಸವರಾಜ ಜಮಲಾಪೂರ, ಎಸ್.ಕೆ. ಮೇಲ್ಕಾರ, ಮಹಾಂತೇಶ ಅಂಬಿಗೇರ, ಚಂದ್ರು ಅಂಬಿಗೇರ, ಶಿವುಕುಮಾರ ಅಂಬಿಗೇರ, ಸಂತೋಷ ನಂಜಪ್ಪ, ಪ್ರದೀಪ ಮಂಟೂರು, ದಿಲೀಪ ಎಸ್ ಎನ್. ವಾಲಿಕಾರ, ಚಂದ್ರು ಸದಪ್ಪಗೋಳ, ಚಂದ್ರು ಕಟ್ಟಿಮನಿ, ಕುರಂದವಾಡ ಸೇರಿ ಇನ್ನಿತರರು ಇದ್ದರು.
ಪಾಲಕರು ಮಕ್ಕಳ ಕೈಯಲ್ಲಿ ಮೊಬೈಲ ಕೊಡಬೇಡಿ, ಮಕ್ಕಳ ಬಗ್ಗೆ ನಿಗಾವಹಿಸಿ ಮಕ್ಕಳು ವಿದ್ಯಾವಂತರಾದರೆ ಸಮಾಜ ಬಲಿಷ್ಠಗೊಳ್ಳಲಿದೆ. ಸಮಾಜ ಸಂಘಟನೆಗೆ ಬಗ್ಗೆ ಹೆಚ್ಚು ಗಮನ ಕೊಡಿ. ಅಂದಾಗ ಮಾತ್ರ ರಾಜಕೀಯ ಲಾಭ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದ ಅವರು, ನೌಕರರ ಸಂಘದ ಬೆಳ್ಳಿ ಮಹೋತ್ಸವ ಕಾರ್ಯಕ್ರಮವನ್ನು ಮಧ್ಯ ಕರ್ನಾಟಕದ ಯಾವುದಾದರೂ ಒಂದು ಜಿಲ್ಲೆಯಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಸಮಾಜ ಬಾಂಧವರ ಸಮ್ಮುಖದಲ್ಲಿ ಆಯೋಜಿಸಲಾಗುವುದು.
- ಎಂ. ಶ್ರೀನಿವಾಸ ರಾಜ್ಯಾಧ್ಯಕ್ಷರು ಅಂಬಿಗ ಸಮಾಜದ ನೌಕರರ ಸಂಘ
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.