ಪ್ರಾಮಾಣಿಕ ಶ್ರಮದಿಂದ ಸುಖ ಸಮೃದ್ಧಿ ಪ್ರಾಪ್ತಿ: ಡಾ.ಮಲ್ಲಿಕಾರ್ಜುನ ಶ್ರೀ

KannadaprabhaNewsNetwork |  
Published : Oct 18, 2024, 01:16 AM IST
ಐಗಳಿ ಸಮೀಪದ ಬಾಡಗಿ ಗ್ರಾಮದ ದಾನಮ್ಮಾ ದೇವಿ ಜಾತ್ರೆಯ ಕೊನೆಯ ದಿನ ಧರ್ಮ ಸಭೆ ಕಾರ್ಯಕ್ರಮವನ್ನು ಕಾಶಿಯ ಜಗದ್ಗುರು ಹಾಗೂ ಪೂಜ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ಐಗಳಿ: ಪ್ರಾಮಾಣಿಕ ಶ್ರಮದಿಂದ ಸುಖ ಸಮೃದ್ಧಿ ಪ್ರಾಪ್ತಿ ಆಗಲಿದೆ. ಕಷ್ಟಪಟ್ಟು ದುಡಿದಾಗ ಮಾತ್ರ ದೇವರು ನಿಮ್ಮ ಕೈಬಿಡುವುದಿಲ್ಲ ಎಂದು ಕಾಶಿ ಪೀಠದ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.

ಕನ್ನಡಪ್ರಭ ವಾರ್ತೆ ಐಗಳಿ

ಪ್ರಾಮಾಣಿಕ ಶ್ರಮದಿಂದ ಸುಖ ಸಮೃದ್ಧಿ ಪ್ರಾಪ್ತಿ ಆಗಲಿದೆ. ಕಷ್ಟಪಟ್ಟು ದುಡಿದಾಗ ಮಾತ್ರ ದೇವರು ನಿಮ್ಮ ಕೈಬಿಡುವುದಿಲ್ಲ ಎಂದು ಕಾಶಿ ಪೀಠದ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.

ಸಮೀಪದ ಬಾಡಗಿ ಗ್ರಾಮದಲ್ಲಿ ಗುಡ್ಡಾಪೂರ ದಾನಮ್ಮ ದೇವಿಯ ಜಾತ್ರೆಯ ಕೊನೆಯ ದಿನ ಧರ್ಮಸಭೆಯಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಶರೀರದ ಒಳಗಿನ ಮಲಿನವನ್ನು ಧರ್ಮಸಭೆ, ಶಿವಾನುಭವ, ಪ್ರವಚನ, ಕೀರ್ತನೆಗಳಲ್ಲಿ ಅನೇಕ ಪೂಜ್ಯರು ಹೇಳಿದ ವಾಣಿಯಿಂದ ಒಳ ಶರೀರದ ಮಾಲಿನ್ಯ ಮಾತ್ರ ಸ್ವಚ್ಛವಾಗಲಿದೆ. ನಿಮ್ಮ ಭಕ್ತಿಗೆ ಮೆಚ್ಚಿ ಮೇಘರಾಜ ಸಹ ಪಾಲ್ಗೊಂಡಿದ್ದಾನೆ. ನೀವೆಲ್ಲ ಸುದೈವಿಗಳು. ಅಥಣಿಯ ಮುರುಘೇಂದ್ರ ಶಿವಯೋಗಿಗಳ ಕೃಪಾ ನಿಮ್ಮ ಮೇಲಿದೆ ಎಂದರು.

ಕೊಣ್ಣೂರ ಕಲ್ಯಾಣ ಮಠದ ಡಾ.ವಿಶ್ವ ಪ್ರಭುದೇವ ಶಿವಾಚಾರ್ಯ ಹಾಗೂ ಅಗಡಿಯ ಅಕ್ಕಿಮಠದ ಗುರುಲಿಂಗ ಮಹಾಸ್ವಾಮಿಗಳು ಮಾತನಾಡಿದರು.

ಅಥಣಿಯ ಶೆಟ್ಟರ ಮಠದ ಮರುಳಸಿದ್ದ ಮಹಾಸ್ವಾಮಿಗಳು, ಮಾಂಜರಿ-ಕೊಕಟನೂರ ಗುರುಶಾಂತಲಿಂಗ ದೇಶಿ ಕೇಂದ್ರ ಶಿವಾಚಾರ್ಯರು, ಅರಟಾಳದ ಶಿವಪುತ್ರ ಶರಣರು, ಧುರೀಣರಾದ ಎಸ್.ಕೆ.ಬುಟಾಳೆ, ಬಸವರಾಜ ಸಿಂಧೂರ(ತುಬಚಿ), ಅಲ್ಲದೇ ಅನೇಕ ಮರಿ ದೇವರು ಶರಣರು ಗಣ್ಯರು ಇದ್ದರು. ಕಾಶಿ ಜಗದ್ಗುರು ಹಾಗೂ ಅಥಣಿಯ ಅನ್ನದಾತ ಸಮಾಜ ಸೇವಕ ರವಿ ಪೂಜಾರಿ ಅವರನ್ನು ಸಂಗಯ್ಯ ಸ್ವಾಮೀಜಿ ದಂಪತಿ ಶ್ರೀಮಠದ ಪರ ಸತ್ಕರಿಸಿದರು.

ಈ ವೇಳೆ ರಾಜುಗೌಡ ಬಿರಾದಾರ, ಶಿವಾನಂದ ನೇಮಗೌಡ, ಚಂದ್ರಕಾಂತ ಮಮದಾಪೂರ, ಸತ್ಯಪ್ಪ ಬಿರಾದಾರ, ರಮೇಶ ಹುನ್ನೂರ, ಚನ್ನಪ್ಪ ಕಾಗವಾಡ, ಮಲ್ಲಪ್ಪ ಡಂಗಿ, ಲಕ್ಷ್ಮಣ ನೇಮಗೌಡ, ಸಾಬು ತೇಲಿ, ರಾಮಚಂದ್ರ ಬಿಜ್ಜರಗಿ, ಸಂಗಯ್ಯ ಸ್ವಾಮೀಜಿ, ಸಿದ್ದು ಹಳ್ಳಿ ಸೇರಿದಂತೆ ಅನೇಕರು ಇದ್ದರು. ಶಿಕ್ಷಕ ಬಿ.ಕೆ.ಮುಧೋಳ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಶಂಕ್ರವ್ವ ತೇಲಿ ನಿರೂಪಿಸಿದರು. ಶಿಕ್ಷಕ ಸುರೇಶ ಸನದಿ ವಂದಿಸಿದರು.

ಬಾಕ್ಸ್‌.....

ಜನ, ಮನ ಸೆಳೆದ ಅಡ್ಡಪಲ್ಲಕ್ಕಿ ಉತ್ಸವ

ಕಾಶಿ ಪೀಠದ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಅಡ್ಡಪಲ್ಲಕ್ಕಿ ಉತ್ಸವದಲ್ಲಿ ಸಾವಿರಾರು ಕುಂಭ ಹೊತ್ತ ಮಹಿಳೆಯರು, ಆರತಿ ಯುವಕರಿಂದ ಜೈಕಾರ ವಿವಿಧ ವಾಧ್ಯಗಳ ಮೂಲಕ ಗ್ರಾಮ ಪ್ರದಕ್ಷಿಣೆ ಸಡಗರ ಸಂಭ್ರಮದಿಂದ ಜರುಗಿತು.

ಎಲ್ಲರ ಮನ ಸೆಳೆಯಿತು. ಪೂಜ್ಯ ಗುರುಶಾಂತಲಿಂಗ ಶಿವಾಚಾರ್ಯರಿಂದ ಜಂಗಮ ವಟುಗಳಿಗೆ ಅಯ್ಯಾಚಾರ ದಿಕ್ಷೆ, ಭಕ್ತರಿಗೆ ಲಿಂಗದಿಕ್ಷೆ ಕಾರ್ಯ ಜರುಗಿತು. ಕಳೆದ ಐದು ದಿನಗಳಿಂದ ಡಾ.ಮಹಾಂತ ಬಸವಲಿಂಗ ಸ್ವಾಮೀಜಿ (ಬೇಲೂರ) ಹಾಗೂ ಬಸರಗಿಯ ಬಸಯ್ಯ ಸ್ವಾಮೀಜಿಯಿಂದ ಗುಡ್ಡಾಪೂರ ದಾನಮ್ಮಾ ದೇವಿಯ ಜೀವನ ದರ್ಶನ ಪ್ರವಚನ ನಿತ್ಯ ಸಂಜೆಯಲ್ಲಿ ಜರುಗಿತು.ಬಾಡಗಿ ಗ್ರಾಮ ಚಿಕ್ಕದು, ನಿಮ್ಮ ಹೃದಯ ಮಾತ್ರ ಶ್ರೀಮಂತಿಕೆ ಇದೆ. ಚಿಕ್ಕ ಗ್ರಾಮಕ್ಕೆ ಕಾಶಿಯಿಂದ ಜಗದ್ಗುರು ಕರೆಸಿದ್ದು ದೊಡ್ಡತನ ನೀವೆಲ್ಲರೂ ಕಾಯಕದಿಂದ ಬದುಕಿದವರು, ಬಿದ್ದವರನ್ನು ಎಬ್ಬಿಸುವ ಕಾರ್ಯ ಮಾಡಿದ್ದೀರಿ. ನಿಮ್ಮ ಸ್ವಚ್ಛ ಮನಸು ನೋಡಿ ಕಾಶಿ ವಿಶ್ವನಾಥ ನಿಮ್ಮ ಗ್ರಾಮಕ್ಕೆ ಬಂದಂತಾಗಿದೆ. ಹಸಿದ ಹೊಟ್ಟೆಗೆ ಅನ್ನ ನೀಡುವ ಬಂಗಾರ ಮನುಷ್ಯ ಸಮಾಜ ಸೇವಕ ಅಥಣಿಯ ರವಿ ಪೂಜಾರಿ ಮಾಡುವ ಕಾರ್ಯ ಶ್ಲಾಘನೀಯ.

-ಡಾ.ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಕಾಶಿ ಪೀಠದ ಜಗದ್ಗುರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ