ಕನ್ನಡಪ್ರಭ ವಾರ್ತೆ ಚಿಟಗುಪ್ಪ
ಬೀದರ್ ವಿಶ್ವ ವಿದ್ಯಾಲಯದ ಇಂಗ್ಲೀಷ್ ಸ್ನಾತಕ ಬಿಎಸ್ಸಿ, ಬಿಸಿಎ, ಬಿಎ, ಬಿಎಸ್‌ಡಬ್ಲೂ, ಬಿಕಾಂ ಹಾಗೂ ಬಿಬಿಎಮ್ ಕೋರ್ಸ್ಗಳ ಪ್ರಥಮ ಮತ್ತು ದ್ವಿತಿಯ ಸೆಮೆಸ್ಟರ್ ಒಳಗೊಂಡ ಪಠ್ಯಪುಸ್ತಕಗಳನ್ನು ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು.ಬಳಿಕ ಮಾತನಾಡಿದ ಗುಲಬರ್ಗಾ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ದಯಾನಂದ ಅಗಸರ್, ತಂತ್ರ್ರಾಜ್ಞಾನದ ಸಾಮಾಜಿಕ ಜಾಲತಾಣಗಳು ಎಷ್ಟೇ ಪ್ರಭಾವ ಬೀರಿದರೂ ನಿಜವಾದ ಜ್ಞಾನ ಪುಸ್ತಕಗಳ ಅಧ್ಯಯನದಿಂದ ಸಾಧ್ಯ. ಆದರಿಂದ ವಿದ್ಯಾರ್ಥಿಗಳು ಪಠ್ಯಪುಸ್ತಕಗಳನ್ನು ಓದಬೇಕು ಎಂದು ತಿಳಿಸಿದರು.
ಹುಮನಾಬಾದ್ ಶಾಸಕ ಡಾ.ಸಿದ್ದಲಿಂಗಪ್ಪಾ ಪಾಟೀಲ ಮಾತನಾಡಿದರು. ಇನ್ನು, ರಾಜ್ಯ ಸರ್ಕಾರವು ಪದವಿ ಶಿಕ್ಷಣದಲ್ಲಿ 2024-25ನೇ ಸಾಲಿನಿಂದ ನೂತನವಾಗಿ ಜಾರಿಗೆ ತಂದಿರುವ ‘ರಾಜ್ಯ ಶಿಕ್ಷಣ ನೀತಿ ಅಡಿಯಲ್ಲಿ ಬೀದರ್ ವಿಶ್ವ ವಿದ್ಯಾಲಯದ ಇಂಗ್ಲೀಷ್ ವಿಭಾಗದ ಅಧ್ಯಯನ ಮಂಡಳಿ ಅಧ್ಯಕ್ಷರಾದ ಡಾ.ಮೃಗರಾಜೇಂದ್ರ ಪಾಟೀಲ, ಸದಸ್ಯರಾದ ಡಾ.ವೀರಶೆಟ್ಟಿ ಮೈಲೂರಕರ್, ಡಾ.ಬಸವ ರಾಜ ಮೈಲಾರೆ ಹಾಗೂ ಡಾ.ಸಯಿದಾ ಬಾನು ಅವರಿಂದ ಪಠ್ಯವನ್ನು ಸಿದ್ಧಪಡಿಸಲಾಗಿದೆ.ಸದರಿ ಪಠ್ಯದ ಅನುಗುಣವಾಗಿ ಸಂಪಾದಿಸಿದ ‘ಲಿಟ್‌ರರಿ ಕಾಂಪೊನೆಂಟ್’- ಬಿಎಸ್ಸಿ, ಬಿಸಿಎ,‘ಲಿಟ್‌ರರಿ ಬ್ಲಾಸಮ್’- ಬಿಎ, ಬಿಎಸ್‌ಡಬ್ಲೂ, ಹಾಗೂ ‘ಲಿಟ್‌ರರಿ ಕಂಪ್ಯಾನಿಯನ್’- ಬಿಕಾಂ ಬಿಬಿಎಮ್ ಪುಸ್ತಕಗಳು ಪದವಿ ಶಿಕ್ಷಣಕ್ಕೆ ಅನುಗುಣವಾಗಿ ಇಂಗ್ಲಿಷ್ ಭಾಷಾ ಜ್ಞಾನದ ವ್ಯಾಕರಣ ಜೊತೆಗೆ ಗದ್ಯ-ಸಣ್ಣಕಥೆಗಳು, ಕಾವ್ಯ ಹಾಗೂ ಸಂವಹಣ ಕೌಶಲ್ಯದ ವಿಷಯಗಳನ್ನು ಸಮಗ್ರವಾಗಿ ಕ್ರೂಢೀಕರಿಸಿ ವಿದ್ಯಾರ್ಥಿಗಳು ಓದುವಂತೆ ರೂಪಿಸಲಾಗಿದೆ.
ಸಂವಹನ ಕೌಶಲ್ಯದ ಮಹತ್ವದ ಜೊತೆಗೆ ನಾಗರಿಕ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ವಿಷಯವಾಗಿರುವ ಸಂದರ್ಶನ ಕೌಶಲ್ಯ, ಗುಂಪು ಚರ್ಚೆ, ಕಾರ್ಯಾಗಾರ ಮತ್ತು ವಿಚಾರ ಸಂಕಿರಣ ಹಾಗೂ ಉಚ್ಛಾರಣೆ ವಿಧಾನ ಸೇರಿದಂತೆ ಇಂಗ್ಲೀಷ್ ಭಾಷಾ ಕೌಶಲ್ಯವನ್ನು ಪ್ರಕಟಿಸಲಾಗಿದೆ. ಕಲಬುರಗಿಯ ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನದಿಂದ ಬೆಂಗಳೂರಿನಲ್ಲಿ ವಿನ್ಯಾಸಗೊಂಡು ಆಕರ್ಷಕ ಹಾಗೂ ವರ್ಣರಂಜಿತ ಮುಖಪುಟದೊಂದಿಗೆ ಸಿದ್ಧಗೊಂಡಿರುವ ಪುಸ್ತಕಗಳು ಈಗಾಗಲೇ ವಿದ್ಯಾರ್ಥಿಗಳ ಮನಗೆದ್ದಿವೆ.ಮುನ್ನುಡಿ ಬರೆದಿರುವ ಬೀದರ್ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ.ಬಿ.ಎಸ್.ಬಿರಾದರ್ ಅವರು, ಯುಜಿಸಿಯ ಥೋರಟ್ ವರದಿಯಂತೆ ‘ವಿದ್ಯಾರ್ಥಿ ಕೇಂದ್ರಿಕೃತವಾಗಿ’ ಹಾಗೂ ಕೋಠಾರಿ ಆಯೋಗದ ವರದಿಯಂತೆ ‘ವೃತ್ತಿ ಕೌಶಲ್ಯ’ ವಿಷಯಗಳನ್ನು ಒಳಗೊಂಡಿರುವ ಇಂಗ್ಲಿಷ್ ಸ್ನಾತಕ ಬಿಎಸ್ಸಿ, ಬಿಸಿಎ, ಬಿಎ, ಬಿಎಸ್‌ಡಬ್ಲೂ, ಬಿಕಾಂ ಹಾಗೂ ಬಿಬಿಎಮ್ ಕೋರ್ಸ್ಗಳ ಪ್ರಥಮ ಮತ್ತು ದ್ವಿತಿಯ ಸೆಮಿಸ್ಟರ್ ಒಳಗೊಂಡ ಪಠ್ಯಪುಸ್ತಕಗಳನ್ನು ‘ರಾಜ್ಯ ಶಿಕ್ಷಣ ನೀತಿ-2024’ರಂತೆ ವಿದ್ಯಾರ್ಥಿಗಳ ಸರ್ವಾಂಗಿಣ ಅಭಿವೃದ್ಧಿಯ ದೃಷ್ಟಿಯಿಂದ ಹೊರತರಲಾಗಿದೆ. ಅತ್ಯಂತ ಪರಶ್ರಮದಿಂದ ಪುಸ್ತಕಗಳನ್ನು ಸಿದ್ಧಪಡಿಸಿರುವ ಇಂಗ್ಲೀಷ್ ವಿಭಾಗದ ಅಧ್ಯಯನ ಮಂಡಳಿ ಅಧ್ಯಕ್ಷರಾದ ಡಾ.ಮೃಗರಾಜೇಂದ್ರ ಪಾಟೀಲ, ಸದಸ್ಯರಾದ ಡಾ.ವೀರಶೆಟ್ಟಿ ಮೈಲೂರಕರ್, ಡಾ ಬಸವರಾಜ ಮೈಲಾರೆ ಹಾಗೂ ಡಾ ಸಯಿದಾ ಬಾನು ಅವರ ಕಾರ್ಯ ಶ್ಲಾಘನೀಯ ಎಂದಿದ್ದಾರೆ.
ಚಿಟಗುಪ್ಪಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಯಕುಮಾರ ಸಿಂಧೆ, ಲೇಖಕರಾದ ಡಾ.ವೀರಶೆಟ್ಟಿ ಮೈಲೂರಕರ್, ಡಾ ಸಯಿದಾ ಬಾನು, ಪಿಎಸ್.ಐ ಬಾಷಾಮಿಯ್ಯ, ಪ್ರಾಧ್ಯಾಪಕರಾದ ಡಾ.ಕೆ.ಶಿವಕುಮಾರ, ಡಾ.ಚಿತ್ರಶೇಖರ ಚಿರಳ್ಳಿ ಪಾಲ್ಗೊಂಡಿದರು.