ಶಾಸಕರ ಸಂಬಂಧಿಕರಿಂದ ಪುರಸಭೆ ಆಸ್ತಿ ಕಬಳಿಕೆ: ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಎಸ್.ನಿರಂಜನಕುಮಾರ್‌

KannadaprabhaNewsNetwork |  
Published : Dec 03, 2024, 12:30 AM IST
ಬಂಡೀಪುರ-ಸುಲ್ತಾನ್‌ ಬತ್ತೇರಿ ಹೆದ್ದಾರಿಯ ರಾತ್ರಿ ಸಂಚಾರ ನಿಷೇಧ ತೆರವು | Kannada Prabha

ಸಾರಾಂಶ

ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ರ ಸೋದರ ಅತ್ತೆ ಎಚ್.ಎಸ್.ಪ್ರೇಮ ಅವರು ₹5 ಕೋಟಿ ಬೆಲೆ ಬಾಳುವ ಪುರಸಭೆ ಆಸ್ತಿ ಕಬಳಿಸಿದ್ದಾರೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಎಸ್.ನಿರಂಜನ್‌ ಕುಮಾರ್‌ ಆರೋಪಿಸಿದ್ದಾರೆ. ಗುಂಡ್ಲುಪೇಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ರ ಸೋದರ ಅತ್ತೆ ಎಚ್.ಎಸ್.ಪ್ರೇಮ ಅವರು ₹5 ಕೋಟಿ ಬೆಲೆ ಬಾಳುವ ಪುರಸಭೆ ಆಸ್ತಿ ಕಬಳಿಸಿದ್ದಾರೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಎಸ್.ನಿರಂಜನ್‌ ಕುಮಾರ್‌ ಆರೋಪಿಸಿದ್ದಾರೆ.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ೪ ಸಾವಿರ ಚದುರಡಿ ಪುರಸಭೆ ಜಾಗದಲ್ಲಿ ಕಾಂಪ್ಲೆಕ್ಸ್‌ ಮಾಡಲು ಹೊರಟಿದ್ದಾರೆ ಈ ಬಗ್ಗೆ ಜಿಲ್ಲಾಧಿಕಾರಿ, ಲೋಕಾಯುಕ್ತರು, ಪೌರಾಡಳಿತ ನಿರ್ದೇಶಕರಿಗೂ ಬಿಜೆಪಿ ಕಾರ್ಯಕರ್ತರೊಬ್ಬರು ದೂರು ನೀಡಿದ್ದಾರೆ ಎಂದರು. ಪುರಸಭೆ ಖಾತಾ ಪುಸ್ತಕದಲ್ಲಿ ಬಿಟ್ಟ ಖಾಲಿ ಜಾಗ ಸೇರಿಸಲಾಗಿದೆ ಎಂದು ಮಾಹಿತಿ ಹಕ್ಕಿನಡಿ ಪುರಸಭೆ ಹೇಳಿದೆ. ಮೂಲ ದಾಖಲಾತಿ ಕೇಳಿದರೆ ಕೊಟ್ಟಿಲ್ಲ. ಕಟ್ಟಡ ಕಟ್ಟಿದವರು ದಾಖಲಾತಿ ಕೊಟ್ಟಿಲ್ಲ ಅಂದ್ರೆ ಅದು ಅವರ ಜಾಗವಲ್ಲ ಎಂಬುದು ತಾನೇ ಎಂದರು.ಪುರಸಭೆಗೆ ದೂರು ಕೊಟ್ಟ ಬಳಿಕ ಪುರಸಭೆ ಮುಖ್ಯಾಧಿಕಾರಿ ಕಟ್ಟಡ ನಿರ್ಮಿಸುತ್ತಿರುವ ಎಚ್.ಎಸ್.ಪ್ರೇಮರಿಗೆ ನೋಟಿಸ್‌ ಕೊಟ್ಟಿದ್ದಾರೆ. ದಾಖಲಾತಿ ಕೊಡಿ, ಅಲ್ಲಿಯ ತನಕ ಕೆಲಸ ನಿಲ್ಲಿಸಿ ಎಂದು ಸೂಚನೆ ನೀಡಿದ್ದರೂ ಕೆಲಸ ಮಾತ್ರ ನಿಂತಿಲ್ಲ ಎಂದು ದೂರಿದರು. ಜನರು ಇವರಿಗೆ (ಶಾಸಕ) ಅಧಿಕಾರ ಕೊಟ್ಟಿರೋದು ದರ್ಪ, ದೌರ್ಜನ್ಯ ಮಾಡಲು ಹೊರಟಿದ್ದಾರೆ. ಪುರಸಭೆ ಜಾಗ ಕಬಳಿಸುತ್ತಿದ್ದರೂ ಅಧಿಕಾರಿಗಳು ಮೌನ ವಹಿಸಿರುವುದನ್ನು ಗಮನಿಸಿದರೆ ಇವರು ದೊಡ್ಡವರಲ್ವ ಎಂದು ಹೆಸರೇಳದೆ ಶಾಸಕ ಗಣೇಶ್‌ ಪ್ರಸಾದ್‌ರನ್ನು ಚುಚ್ಚಿದರು. ಇದೇನು ಹೊಸದಲ್ಲ: ಪಟ್ಟಣದಲ್ಲಿ ಸಂಗಮ ಟ್ರಸ್ಟ್‌ ಹೆಸರಲ್ಲಿ ಪುರಸಭೆ ನಿವೇಶನ ಕಬಳಿಸಿ, ಟ್ರಸ್ಟ್‌ ಮಾಡಿಕೊಂಡು ಬಾಡಿಗೆ ಪಡೆಯುತ್ತಿರುವ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಅವರ ಕುಟುಂಬಕ್ಕೆ ಪುರಸಭೆ ಆಸ್ತಿ ಕಬಳಿಕೆ ಹೊಸದೇನಲ್ಲ ಎಂದರು.ಕೈಗೊಂಬೆ ಆಗಬೇಡಿ: ಪುರಸಭೆ ಮುಖ್ಯಾಧಿಕಾರಿಗಳೇ ಕೆಲಸ ನಿಲ್ಲಿಸಿ, ದಾಖಲಾತಿ ಕೊಡಿ ಎಂದರೂ ಕೊಟ್ಟಿಲ್ಲ ಎಂದ ಮೇಲೆ ನಿಮ್ಮ ಕೆಲಸ ನೀವು ಮಾಡಿ ಅಧಿಕಾರ ಇರುವವರ ಕೈಗೊಂಬೆ ಆಗಬೇಡಿ. ಕೆಲಸ ನಿಲ್ಲಿಸಿ ನಿಮ್ಮ ಕೆಲಸ ಮಾಡಿ ಎಂದರು. ಪುರಸಭೆ ಮಾಜಿ ಅಧ್ಯಕ್ಷ ಎಲ್.ಸುರೇಶ್‌ ಮಾತನಾಡಿ, ಪುರಸಭೆ ಜಾಗದಲ್ಲಿ ವಾಣಿಜ್ಯ ಕಟ್ಟಡ ನಿರ್ಮಿಸುತ್ತಿರುವ ಬಗ್ಗೆ ದೂರು ನೀಡಿದ್ದರೂ ಕಟ್ಟಡ ಮಾತ್ರ ಮೇಲೇಳುತ್ತಿದೆ ಕೂಡಲೇ ಕೆಲಸ ಸ್ಥಗಿತಗೊಳಿಸಿ ಎಂದು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಂಡಲ ಬಿಜೆಪಿ ಅಧ್ಯಕ್ಷ ಸಿ.ಮಹದೇವಪ್ರಸಾದ್‌, ಪುರಸಭೆ ಮಾಜಿ ಅಧ್ಯಕ್ಷ ಪಿ.ಗಿರೀಶ್‌, ಚಾಮುಲ್‌ ಮಾಜಿ ನಿರ್ದೇಶಕ ಕನ್ನೇಗಾಲಸ್ವಾಮಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎಚ್.ಎಸ್.ಸೋಮಶೇಖರ್‌, ಮಂಡಲ ಬಿಜೆಪಿ ಮಾಜಿ ಅಧ್ಯಕ್ಷ ಡಿ.ಪಿ.ಜಗದೀಶ್‌, ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಎಸ್.ಶಿವಪ್ರಕಾಶ್‌, ಪಿಎಲ್‌ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ, ದಲಿತ ಮುಖಂಡ ಬಸವರಾಜು, ಪುರಸಭೆ ಸದಸ್ಯ ನಾಗೇಶ್‌ ಇದ್ದರು. ಬಂಡೀಪುರ-ಸುಲ್ತಾನ್‌ ಬತ್ತೇರಿ ಹೆದ್ದಾರಿಯ

ರಾತ್ರಿ ಸಂಚಾರ: ಹೇಳಿಕೆಗೆ ಖಂಡನೆಸುಪ್ರೀಂ ಕೋರ್ಟ್‌ ಆದೇಶ ಇದ್ದರೂ ಬಂಡೀಪುರ-ಸುಲ್ತಾನ್‌ ಬತ್ತೇರಿ ಹೆದ್ದಾರಿಯ ರಾತ್ರಿ ಸಂಚಾರ ನಿಷೇಧ ತೆರವುಗೊಳಿಸಲು ನೂತನ ಸಂಸದೆ ಪ್ರಿಯಾಂಕ ವಾದ್ರಾ ಹೇಳಿಕೆ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ರಾತ್ರಿ ಸಂಚಾರ ಪರಿಶೀಲನೆ ನಡೆಸುತ್ತೇನೆ ಎಂದಿರುವುದನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಎಸ್.ನಿರಂಜನ್‌ ಕುಮಾರ್‌ ಖಂಡಿಸಿದರು. ಕಾಂಗ್ರೆಸ್ಸಿಗರು ಸಂವಿಧಾನದ ಬಗ್ಗೆ ಮಾತನಾಡುತ್ತಾರೆ.ಇಲ್ಲಿ ಸುಪ್ರೀಂ ಕೋರ್ಟ್‌ ತೀರ್ಪಿದ್ದರೂ ರಾತ್ರಿ ಸಂಚಾರ ನಿಷೇಧದ ಚರ್ಚೆಯೇ ಅಪ್ರಸ್ತುತ.ರಾತ್ರಿ ಸಂಚಾರ ತೆರವಿಗೆ ನಾವಂತು ವಿರೋಧಿಸುತ್ತೇನೆ ಎಂದರು. ಸಂಸದೆ ಪ್ರಿಯಾಂಕ ವಾದ್ರ ಸಂವಿಧಾನ ಪುಸ್ತಕ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೆ ಅವರಿಗೆ ಸಂವಿಧಾನ ಹಾಗೂ ಕಾನೂನುಗಳ ಬಗ್ಗೆ ಅರಿವಿಲ್ಲ. ಹಾಗಾಗಿ ಪ್ರಿಯಾಂಕ ವಾದ್ರಾಗೆ ರಾಜ್ಯ ಸರ್ಕಾರ ಕಾನೂನು ತಿಳಿ ಪಡಿಸಲಿ ಎಂದು ಸಲಹೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಕನಿಷ್ಠ ಆದಾಯ ಮಿತಿ 3 ಲಕ್ಷ ರು.ಗೆ ಏರಿಕೆ: ಮುನಿಯಪ್ಪ
ಏ.1ರಿಂದ ರಾಜ್ಯದ ರಾಷ್ಟ್ರೀಯ ಹೆದ್ದಾರಿ ಟೋಲ್‌ ಶುಲ್ಕ ಹೆಚ್ಚಳ