ಮಹಾತ್ಮರ ಆಶಯಗಳಿಗೆ ಚ್ಯುತಿ ಬರದಂತೆ ನಡೆದುಕೊಳ್ಳಿ: ಅಮರೇಶ ಜಿ.ಕೆ.

KannadaprabhaNewsNetwork |  
Published : Aug 16, 2025, 12:01 AM IST
ಕೊಟ್ಟೂರಿನಲ್ಲಿ ಶುಕ್ರವಾರ ತಾಲೂಕು ಆಡಳಿತದಿಂದ ನಡೆದ 79 ನೇ ಸ್ವಾತಂತ್ರ್ಯ ದಿನೋತ್ಸವದಲ್ಲಿ ಶಾಸಕ ಕೆ ನೇಮರಾಜ  ನಾಯ್ಕ  ತಹಶೀಲ್ದಾರ ಅಮರೇಶ ಜಿ ಕೆ ರಾಷ್ಟ್ರ ಧ್ವಜಕ್ಕೆ ಗೌರವ ಸಲ್ಲಿಸಿದರು  | Kannada Prabha

ಸಾರಾಂಶ

ಶುಕ್ರವಾರ ಕೊಟ್ಟೂರು ಪಟ್ಟಣದಲ್ಲಿ ಗೊರ್ಲಿ ಶರಣಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಕೊಟ್ಟೂರು ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ 79ನೇ ಸ್ವಾತಂತ್ರ್ಯ ದಿನೋತ್ಸವದ ನಿಮಿತ್ತ ತಹಸೀಲ್ದಾರ್‌ ಅಮರೇಶ ಜಿ.ಕೆ. ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.

ಕೊಟ್ಟೂರು: ರಾಷ್ಟ್ರದ ಸ್ವಾತಂತ್ರ್ಯಕ್ಕೆ ಮಹಾತ್ಮ ಗಾಂಧಿ ಮತ್ತು ಇತರ ಹಿರಿಯರು ಸಲ್ಲಿಸಿದ ಸೇವೆ, ತ್ಯಾಗ, ಬಲಿದಾನಗಳಿಗೆ ಯಾವುದೇ ಚ್ಯುತಿ ಬರದಂತೆ ಸರ್ವರೂ ನಡೆದುಕೊಳ್ಳುವುದೇ ಅವರಿಗೆ ಸಲ್ಲಿಸುವ ದೊಡ್ಡ ಕೃತಜ್ಞತೆಯಾಗಿದೆ ಎಂದು ತಹಸೀಲ್ದಾರ್‌ ಅಮರೇಶ ಜಿ.ಕೆ. ಹೇಳಿದರು.

ಶುಕ್ರವಾರ ಪಟ್ಟಣದಲ್ಲಿ ಗೊರ್ಲಿ ಶರಣಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಕೊಟ್ಟೂರು ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ 79ನೇ ಸ್ವಾತಂತ್ರ್ಯ ದಿನೋತ್ಸವದ ನಿಮಿತ್ತ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ರಾಷ್ಟ್ರಕ್ಕಾಗಿ ಪ್ರತಿಯೊಬ್ಬರೂ ತಮ್ಮ ತಮ್ಮ ಮಟ್ಟದಲ್ಲಿ ಸೇವಾ ಮನೋಭಾವನೆ ಮೂಲಕ ಅರ್ಪಣೆ ಮಾಡಿಕೊಳ್ಳಬೇಕು. ಹಿರಿಯರ ತ್ಯಾಗ, ಬಲಿದಾನಗಳನ್ನು ಸದಾ ಸ್ಮರಿಸಿಕೊಂಡು ರಾಷ್ಟ್ರದ ಸಾರ್ವಭೌಮತೆಗೆ ಗೌರವ ಕೊಡುವ ಪ್ರಕ್ರಿಯೆ ನಿರಂತರವಾಗಿ ನಡೆಸುವತ್ತ ಮುಂದಾಗೋಣ ಎಂದರು.

ಶಾಸಕ ಕೆ. ನೇಮರಾಜ ನಾಯ್ಕ್ ವಿವಿಧ ತಂಡಗಳಿಂದ ಗೌರವ ಸ್ವೀಕರಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತ ಸದೃಢ ರಾಷ್ಟ್ರವಾಗಿ ವಿಶ್ವದಲ್ಲಿ ಕಂಗೊಳಿಸುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಇತ್ತೀಚೆಗೆ ಆಪರೇಶನ್‌ ಸಿಂದೂರ ಯಶಸ್ವಿಯಾಯಿತು. ಶತ್ರುರಾಷ್ಟ್ರಕ್ಕೆ ಮರ್ಮಾಘಾತವಾಗಿದೆ ಎಂದು ಹೇಳಿದರು.

2027ರ ವೇಳೆಗೆ ಕೊಟ್ಟೂರು ತಾಲೂಕನ್ನು ಸಮಗ್ರವಾಗ ಅಭಿವೃದ್ಧಿ ಪಡಿಸುವ ಮೂಲಕ ಹೊಸ ಬಗೆಯ ಭಾಷ್ಯ ಬರೆದು ಆಗ ನಡೆಯುವ ಸ್ವಾತಂತ್ರ್ಯ ದಿನೋತ್ಸವದ ದಿನದ ಅಭಿನಂದನ ಭಾಷಣ ಮಾಡುವೆ ಎಂದರು.

ಇದಕ್ಕೂ ಮೊದಲು ಶಾಸಕ ಕೆ. ನೇಮರಾಜ ನಾಯ್ಕ್ ತಹಸೀಲ್ದಾರ್ ಅಮರೇಶ ಜಿ.ಕೆ. ಅವರು ಗೌರವ ವಂದನೆ ಸ್ವೀಕರಿಸಿದರು. ಪಿಎಸ್‌ಐ ಗೀತಾಂಜಲಿ ಸಿಂದೆ ನೇತೃತ್ವದಲ್ಲಿ 16 ತಂಡಗಳ ಕವಾಯಿತು ನಡೆಸಿತು. ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ್ದ ಶೇಖರಪ್ಪ, ಮತ್ತಿಹಳ್ಳಿ ಪರಶಪ್ಪ, ಎಂ.ಎಂ.ಜಿ. ಕಾವ್ಯಾ, ಜೀತೇಂದ್ರ ಕುಮಾರ, ಬಿ. ಮರಿಸ್ವಾಮಿ, ಉತ್ತಂಗಿ ಕೊಟ್ರೇಶ, ಬಂದತರ ಕೊಟ್ರೇಶ್ ಹಾಗೂ 20 ಸಾಧಕರನ್ನು ಸನ್ಮಾನಿಸಲಾಯಿತು.

ತಾಪಂ ಇಒ ಡಾ. ಆನಂದಕುಮಾರ, ಪಪಂ ಅಧ್ಯಕ್ಷೆ ಬದ್ದಿ ರೇಖಾ ರಮೇಶ, ಉಪಾಧ್ಯಕ್ಷ ಜಿ. ಸಿದ್ದಯ್ಯ, ಸಿಪಿಐ ನಾರಾಯಣ, ಪಪಂ ಸದಸ್ಯರಾದ ಮರಬದ ಕೊಟ್ರೇಶ, ಬಾವಿಕಟ್ಟಿ ಶಿವಾನಂದ, ಕೆಂಗ್ಗಪ್ಪ, ಜಗದೀಶ, ಶಫೆ, ವೀಣಾ ವಿವೇಕಾನಂದ, ಯೋಗೀಶ್ವರ ದಿನೆ ಮತ್ತು ಇತರ ಗಣ್ಯರು ಇದ್ದರು.

ಉಪನ್ಯಾಸಕ ರೆಡ್ಡೇರ ಸಕ್ರಪ್ಪ ಸ್ವಾಗತಿಸಿದರು. ಉಪನ್ಯಾಸಕ ಜಗದೀಶಚಂದ್ರ ಬೋಸ್ ಕಾರ್ಯಕ್ರಮ ನಿರೂಪಿಸಿದರು.

PREV

Recommended Stories

79 ವರ್ಷಗಳ ನಂತ್ರ ಅಥಣಿಗೆ ಸರ್ಕಾರಿ ಪ್ರೌಢಶಾಲೆ!
ಪ್ರಜಾಪ್ರಭುತ್ವ ಉಳಿವಿಗೆ ಹೋರಾಟ ಅನಿವಾರ್ಯ