ವಿಶೇಷಚೇತರಿಗೆ ಬದುಕಿನ ಬವಣೆ ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಕ್ರಮ-ಶಾಸಕ ಶಿವಣ್ಣನವರ

KannadaprabhaNewsNetwork |  
Published : Feb 15, 2025, 12:30 AM IST
ಪೋಟೋ ಇದೆ. | Kannada Prabha

ಸಾರಾಂಶ

ವ್ಯಕ್ತಿಯ ದೈಹಿಕ ಸಾಮರ್ಥ್ಯ, ಚಲನಶೀಲತೆ, ಸಹಿಷ್ಣುತೆ ಅಥವಾ ದಕ್ಷತೆ ಮೇಲೆ ಪರಿಣಾಮ ಬೀರಿದಾಗ ಅವರನ್ನು ದೈಹಿಕ ಅಂಗವೈಕಲ್ಯವೆನ್ನಬಹುದು. ಕಾರಣವೇನೆ ಇರಲಿ ದೈಹಿಕ ಅಂಗವೈಕಲ್ಯತೆ ವ್ಯಕ್ತಿಯ ಸಾಮರ್ಥ್ಯ ಮತ್ತು ಚಲನಶೀಲತೆ ಮೇಲೆ ಪರಿಣಾಮ ಬೀರುತ್ತದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

ಬ್ಯಾಡಗಿ: ವ್ಯಕ್ತಿಯ ದೈಹಿಕ ಸಾಮರ್ಥ್ಯ, ಚಲನಶೀಲತೆ, ಸಹಿಷ್ಣುತೆ ಅಥವಾ ದಕ್ಷತೆ ಮೇಲೆ ಪರಿಣಾಮ ಬೀರಿದಾಗ ಅವರನ್ನು ದೈಹಿಕ ಅಂಗವೈಕಲ್ಯವೆನ್ನಬಹುದು. ಕಾರಣವೇನೆ ಇರಲಿ ದೈಹಿಕ ಅಂಗವೈಕಲ್ಯತೆ ವ್ಯಕ್ತಿಯ ಸಾಮರ್ಥ್ಯ ಮತ್ತು ಚಲನಶೀಲತೆ ಮೇಲೆ ಪರಿಣಾಮ ಬೀರುತ್ತದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

ತಾಲೂಕಿನ ಕೆರವಡಿ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ, ಜಿಪಂ.ಹಾವೇರಿ, ತಾಪಂ ಬ್ಯಾಡಗಿ ಗ್ರಾಪಂ.ಕೆರವಡಿ 2020-21 ನೇ ಸಾಲಿನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಾಣಗೊಂಡ ವಿಶೇಷ ಚೇತನರ ನೂತನ ಭವನ ಉದ್ಘಾಟಿಸಿ ಅವರು ಮಾತನಾಡಿದರು.

ದೈಹಿಕ ಅಂಗವೈಕಲ್ಯಕ್ಕೆ ಕಾರಣಗಳಲ್ಲಿ ಬಹಳ ವ್ಯತ್ಯಾಸವಿದೆ ಮತ್ತು ಅಂಗವೈಕಲ್ಯಕ್ಕೆ ವ್ಯಕ್ತಿಯು ಒಂದೇ ರೀತಿಯ ಮಿತಿಗಳನ್ನು ಹೊಂದಿರುವುದಿಲ್ಲ. ಹೀಗಾಗಿ ರಾಜ್ಯ ಸರ್ಕಾರ ವಿಶೇಷ ಚೇತನರಿಗೆ ಸಾಕಷ್ಟು ಸಾಲ ಸೌಲಭ್ಯಗಳನ್ನು ನೀಡುತ್ತಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗುವಂತೆ ಕರೆ ನೀಡಿದರು.

ಶೇ.3ರಷ್ಟು ಮೀಸಲು:ವಿಶೇಷ ಚೇತರಿಗೆ ಬದುಕಿನ ಬವಣೆ ತಪ್ಪಿಸುವ ನಿಟ್ಟಿನಲ್ಲಿ ಸಾಲ ಸೌಲಭ್ಯ ಸೇರಿದಂತೆ ಹಲವು ಯೋಜನೆಗಳನ್ನು ಸರ್ಕಾರ ನೀಡುತ್ತಿದೆ. ಗ್ರಾಮ ಪಂಚಾಯತ್, ಪುರಸಭೆ, ನಗರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಆಯವ್ಯಯದ ಶೇ.3ರಷ್ಟು ಅನುದಾನವನ್ನು ಮೀಸಲಿಡಲಾಗುತ್ತಿದ್ದು ಅವುಗಳನ್ನು ಸದ್ಬಳಕೆ ಮಾಡಿಕೊಂಡು ಹಲವು ವಿಶೇಷ ಚೇತನರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಶಂಭನಗೌಡ ಪಾಟೀಲ, ತಾಪಂ. ಇಓ ಕೆ.ಎಂ. ಮಲ್ಲಿಕಾರ್ಜುನ, ನಿಜಲಿಂಗಪ್ಪ ಕೋಡಿಹಳ್ಳಿ, ಸಹಾಯಕ ಅಭಿಯಂತರ ವೈ.ಎಂ. ಮೆಟಗಾರ, ಪಿ.ಎಸ್. ಬಿಟ್ಟೂರ, ಬಿ.ಸಿ.ಆಶಾರಾಣಿ, ಆನಂದ ಬಣಗಾರ, ಆಶು ನದಾಫ, ಪರಶುರಾಮ ಅಗಸನಹಳ್ಳಿ, ಎಮ್.ಎಫ್.ಹುಲ್ಯಾಳ ಸೇರಿದಂತೆ ಕೆರವಡಿ ಮತ್ತು ಕಳಗೊಂಡ ಗ್ರಾಮಸ್ಥರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ