ಹಿಂಗಾರು ಹಂಗಾಮು ನೀರು ಪೂರೈಕೆಗೆ ಕ್ರಮ

KannadaprabhaNewsNetwork | Published : Nov 22, 2024 1:19 AM

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆ ಅಬಕಾರಿ ಸಚಿವರು ಹಾಗೂ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಆರ್.ಬಿ.ತಿಮ್ಮಾಪೂರ ಅಧ್ಯಕ್ಷತೆಯಲ್ಲಿ ನಡೆದ ಕೃಷ್ಣಾ ಮೇಲ್ದಂಡೆ ಯೋಜನೆಯ ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಿದಂತೆ ಡಿಸೆಂಬರ್‌ 9, 2024ರಿಂದ ಮಾರ್ಚ್‌ 23, 2025ರವರೆಗೆ ಕಾಲುವೆ ಜಾಗಕ್ಕೆ ನೀರು ಹರಿಸಲಾಗುತ್ತದೆ ಎಂದು ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ ಅಧೀಕ್ಷಕ ಅಭಿಯಂತರ ಗೋವಿಂದ ರಾಠೋಡ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಅಬಕಾರಿ ಸಚಿವರು ಹಾಗೂ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಆರ್.ಬಿ.ತಿಮ್ಮಾಪೂರ ಅಧ್ಯಕ್ಷತೆಯಲ್ಲಿ ನಡೆದ ಕೃಷ್ಣಾ ಮೇಲ್ದಂಡೆ ಯೋಜನೆಯ ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಿದಂತೆ ಡಿಸೆಂಬರ್‌ 9, 2024ರಿಂದ ಮಾರ್ಚ್‌ 23, 2025ರವರೆಗೆ ಕಾಲುವೆ ಜಾಗಕ್ಕೆ ನೀರು ಹರಿಸಲಾಗುತ್ತದೆ ಎಂದು ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ ಅಧೀಕ್ಷಕ ಅಭಿಯಂತರ ಗೋವಿಂದ ರಾಠೋಡ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿದ ಅವರು, ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿಗೆ 14 ದಿನ ಚಾಲೂ ಹಾಗೂ 10 ದಿನಗಳ ಬಂದ್‌ ಪದ್ಧತಿ ಅನುಸರಿಸಲಾಗುತ್ತಿದೆ. ಡಿ.9ರಿಂದ 22ರವರೆಗೆ (14ದಿನ), ಜ.2, 2025ರಿಂದ 15ರವರೆಗೆ (14 ದಿನ), ಜ.26, 2025ರಿಂದ ಫೆ.8ವರೆಗೆ (14 ದಿನ), ಫೆ.19ರಿಂದ ಮಾ.4ರವರೆಗೆ (14 ದಿನ) ಹಾಗೂ ಮಾ.15ರಿಂದ ಮಾ.23ರವರೆಗೆ (9 ದಿನ) ಚಾಲೂ ಇರುವ ದಿನಗಳಾಗಿವೆ.

ಡಿಸೆಂಬರ 23, 2024ರಿಂದ ಜ.1, 2025ರವರೆಗೆ (10 ದಿ), ಜ.16ರಿಂದ 25ರವರೆಗೆ (10 ದಿನ), ಫೆ.9ರಿಂದ 18ರವರೆಗೆ (10 ದಿನ) ಮಾ.5ರಿಂದ 14ರವರೆಗೆ (10 ದಿನ) ಬಂದ್ ಇರುವ ದಿನಗಳಾಗಿವೆ. ಕಾಲುವೆ ಜಾಲದ ಗೇಟ್‌ಗಳನ್ನು ಹಾನಿ ಮಾಡುವುದು, ಎಸ್ಕೇಪ್‌ಗಳ ಮೂಲಕ ಹಳ್ಳಕ್ಕೆ ನೀರು ಹರಿಸುವುದು, ಸೈಪನ್‌ಗಳ ಮೂಲಕ ಮಣ್ಣಿನ ಏರಿಯಲ್ಲಿ ನೀರನ್ನು ಎತ್ತಿಕೊಳ್ಳುವುದು, ಕಾಲುವೆ ಜಾಲದಲ್ಲಿ ಪಂಪುಗಳ ಮೂಲಕ ನೀರನ್ನು ಎತ್ತುವುದನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಇಂತಹ ಪರಿಸ್ಥಿತಿ ಕಂಡುಬಂದಲ್ಲಿ ಸಂಬಂಧಿಸಿದವರ ಮೇಲೆ ನೀರಾವರಿ ಕಾಯ್ದೆ 1965ರನ್ವಯ ಕಾನೂನು ಕ್ರಮಕೈಗೊಳ್ಳಲಾಗುವುದು. ರೈತರು ಕೃಷ್ಣಾ ಮೇಲ್ದಂಡೆ ಯೋಜನೆ ಅಚ್ಚುಕಟ್ಟು ಪ್ರದೇಶದಲ್ಲಿ 105 ದಿನಗಳಲ್ಲಿ ಬರುವ ಲಘು ನೀರಾವರಿ ಬೆಳೆಗಳನ್ನು ಮಾತ್ರ ತಮ್ಮ ಕ್ಷೇತ್ರದ 50 ಪ್ರತಿಶತ ಕ್ಷೇತ್ರಕ್ಕೆ ಬೆಳೆಯುವಂತೆ ವಿನಂತಿಸಿದ್ದಾರೆ. ಕಬ್ಬು, ಬಾಳೆ ಮತ್ತು ಭತ್ತದ ಬೆಳೆಗಳನ್ನು ನೀರಾವರಿ ಆಶ್ರಯದಲ್ಲಿ ಬೆಳೆಯುವುದನ್ನು ನಿಷೇಧಿಸಲಾಗಿದೆ. ಆದ್ದರಿಂದ ನೀರಿನ ಬಳಕೆಯಲ್ಲಿ ಮಿತವ್ಯಯ ಸಾಧಿಸುವಂತೆ ಅಧೀಕ್ಷಕರ ಅಬಿಯಂತರರು ಕೋರಿದ್ದಾರೆ.

Share this article