ತ್ಯಾಗರಾಜ ಕೋ ಆಪರೇಟಿವ್‌ ಬ್ಯಾಂಕ್‌ನಿಂದ ರಸಪ್ರಶ್ನೆ ಸ್ಪರ್ಧೆ

| Published : Nov 06 2025, 04:15 AM IST

ಸಾರಾಂಶ

72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಪ್ರಯುಕ್ತ ನಗರದ ಬಿಇಎಸ್‌ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಶ್ರೀ ತ್ಯಾಗರಾಜ ಕೋ ಆಪರೇಟಿವ್‌ ಬ್ಯಾಂಕ್‌ ಲಿ. ನಿಂದ ರಸಪ್ರಶ್ನೆ ಸ್ಪರ್ಧೆ ಮತ್ತು ಝೀರೋ ಬ್ಯಾಲೆನ್ಸ್‌ ಉಳಿತಾಯ ಖಾತೆ ಅಭಿಯಾನ ನಡೆಯಿತು.

72ನೇ ಸಹಕಾರ ಸಪ್ತಾಹ ಪ್ರಯುಕ್ತ ಈ ಕಾರ್ಯಕ್ರಮ

ಝೀರೋ ಬ್ಯಾಲೆನ್ಸ್‌ ಉಳಿತಾಯ ಖಾತೆ ಅಭಿಯಾನಕನ್ನಡಪ್ರಭ ವಾರ್ತೆ ಬೆಂಗಳೂರು

72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಪ್ರಯುಕ್ತ ನಗರದ ಬಿಇಎಸ್‌ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಶ್ರೀ ತ್ಯಾಗರಾಜ ಕೋ ಆಪರೇಟಿವ್‌ ಬ್ಯಾಂಕ್‌ ಲಿ. ನಿಂದ ರಸಪ್ರಶ್ನೆ ಸ್ಪರ್ಧೆ ಮತ್ತು ಝೀರೋ ಬ್ಯಾಲೆನ್ಸ್‌ ಉಳಿತಾಯ ಖಾತೆ ಅಭಿಯಾನ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಕೆಸಿಎಸ್‌ ಅಧಿಕಾರಿ ಎಸ್‌.ಎನ್‌.ಅರುಣ್‌ಕುಮಾರ್‌, ರಾಷ್ಟ್ರೀಯ ಸಹಕಾರ ನೀತಿಯ ಪ್ರತಿ ಅಧ್ಯಾಯದಲ್ಲೂ ಯುವಕರೇ ಕೇಂದ್ರಬಿಂದು. ದೇಶದ ಪ್ರತಿ ವ್ಯಕ್ತಿಯ ಸಬಲೀಕರಣಕ್ಕೆ ಒತ್ತು ನೀಡುವಲ್ಲಿ ಸಹಕಾರ ಕ್ಷೇತ್ರ ಪ್ರಮುಖ ಪಾತ್ರ ವಹಿಸಲಿದೆ. ಯುವ ಸಮೂಹ ಸಹಕಾರ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್‌.ನವೀನ್‌ ಮಾತನಾಡಿ, ರಾಜ್ಯದಲ್ಲಿ 46ಸಾವಿರಕ್ಕೂ ಅಧಿಕ ಸಹಕಾರ ಮಂಡಳಗಳು ಕಾರ್ಯ ನಿರ್ವಹಿಸುತ್ತಿವೆ. ಸುಮಾರು ₹4ಲಕ್ಷ ಕೋಟಿ ದುಡಿಯುವ ಬಂಡವಾಳವನ್ನು ಇವು ಹೊಂದಿವೆ. ಹಾಗೆಯೇ 1.70 ಲಕ್ಷ ಕೋಟಿ ಠೇವಣಿ ಹೊಂದಿದೆ. ಸಹಕಾರ ಕ್ಷೇತ್ರ ಸರ್ವವ್ಯಾಪಿ ಸರ್ವಸ್ಪರ್ಶಿಯಾಗುವಂತೆ ಎಲ್ಲರೂ ದುಡಿಯಬೇಕು ಎಂದರು.

ತ್ಯಾಗರಾಜ ಕೋ ಅಪರೇಟಿವ್‌ ಬ್ಯಾಂಕ್‌ ಲಿ. ಅಧ್ಯಕ್ಷ ಎಂ.ಆರ್‌.ವೆಂಕಟೇಶ್‌ ಪ್ರಾಸ್ತಾವಿಕವಾಗಿ ಮಾತನಾಡಿ , ಬ್ಯಾಂಕ್‌ ಜನಸಾಮಾನ್ಯರಲ್ಲಿ ಅದರಲ್ಲೂ ವಿಶೇಷವಾಗಿ ಯುವ ಸಮುದಾಯದಲ್ಲಿ ಸಹಕಾರ ಕ್ಷೇತ್ರದ ಬಗ್ಗೆ ಅರಿವು ಮೂಡಿಸಿ ತನ್ನ ಸಾಮಾಜಿಕ ಬದ್ಧತೆ ಪ್ರದರ್ಶಿಸುತ್ತಿದೆ. ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ ವಿಶೇಷ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಹೇಳಿದರು.

----

ಫೋಟೋ

ಶ್ರೀ ತ್ಯಾಗರಾಜ ಕೋ ಅಪರೇಟಿವ್‌ ಬ್ಯಾಂಕ್‌ ಲಿ. ನಿಂದ ರಸಪ್ರಶ್ನೆ ಸ್ಪರ್ಧೆ ಮತ್ತು ಝಿರೋ ಬ್ಯಾಲೆನ್ಸ್‌ ಉಳಿತಾಯ ಅಭಿಯಾನ ನಡೆಯಿತು.