- ಸಹಾಯಕ ನಿಬಂಧಕರ ಸಹಕಾರ ಅಭಿವೃದ್ಧಿ ಅಧಿಕಾರಿಗಳ ಸಂಪರ್ಕಿಸಲು ಸೂಚನೆ
- - -ದಾವಣಗೆರೆ: ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಹಾಗೂ ನಿಯಮಗಳ ಅನುಸಾರ ಕಾರ್ಯನಿರ್ವಹಿಸದ ಕಾರಣ ಜಿಲ್ಲೆಯಲ್ಲಿನ 16 ಸಹಕಾರ ಸಂಘಗಳನ್ನು ಸಮಾಪನೆಗೊಳಿಸಲಾಗುವುದು.
ಮಲ್ಲಿಕಾರ್ಜುನ ಪ.ಜಾ., ಪ.ಪಂ. ಕೈಗಾರಿಕಾ ಸಹಕಾರ ಸಂಘ, ದಾವಣಗೆರೆ ತಾಲೂಕು ಪ್ರಿಂಟರ್ಸ್ ಸಹಕಾರ ಸಂಘ, ಕಿಸಾನ್ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಸಹಕಾರ ಸಂಘ, ದಾವಣಗೆರೆ ತಾಲೂಕು ಎಸ್.ಎಫ್.ಎಂ.ಎಫ್.ಎಲ್.ಐ.ಸಿ ಸಹಕಾರ ಸಂಘ, ದಾವಣಗೆರೆ ನಗರ ಗ್ರಾಮಾಂತರ ತೋಟದ ಅಣಬೆ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘ, ಬಣಜಾರ ವಿವಿಧೋದ್ದೇಶ ಮತ್ತು ಅಭಿವೃದ್ಧಿ ಸಹಕಾರ ಸಂಘ.ದಿ ದಾವಣಗೆರೆ ಮೈನಾರಿಟಿಸ್ ಕೋ-ಆಪರೇಟಿವ್ ಸೊಸೈಟಿ, ಶಿರಮಗೊಂಡನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ, ಕುಂಟಪಾಲನಹಳ್ಳಿ ಹಾಲು ಉತ್ಪಾದಕರ ಸಂಘ, ಶ್ರೀ ಸ್ವಾಮಿ ವಿವೇಕಾನಂದ ಎಸ್.ಸಿ, ಎಸ್.ಟಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ, ಅಪ್‌ರೈಸ್ ಕೋ-ಆಪರೇಟಿವ್ ಸೊಸೈಟಿ, ದೊಡ್ಡಬಾತಿಯ ಭದ್ರಾ ಸಹಕಾರಿ ಸಕ್ಕರೆ ಕಾರ್ಖಾನೆ ನೌಕರರ ಸಹಕಾರ ಸಂಘ.
ದಾವಣಗೆರೆ ಪ.ಜಾತಿ, ಪ.ಪಂ ಗ್ರಾಮೀಣಾಭಿವೃದ್ಧಿ ಸಹಕಾರ ಸಂಘ, ಸಾಲೇಶ್ವರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ, ತುರ್ಚಘಟ್ಟದ ಶಿವ ವಿವಿಧೋದ್ದೇಶ ಸಹಕಾರ ಸಂಘ ಮತ್ತು ಶ್ರೀ ಬಸವೇಶ್ವರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸೇರಿ ಒಟ್ಟು 16 ಸಹಕಾರ ಸಂಘಗಳನ್ನು ಸಮಾಪನೆಗೊಳಿಸಲಾಗಿದೆ.ಸದರಿ ಸಂಘಗಳಿಗೆ ಸಂಬಂಧಪಟ್ಟವರು ವಿದ್ಯಾನಗರದ ಆಂಜನೇಯ ದೇವಸ್ಥಾನ ಎದುರಿನ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಸಹಕಾರ ಅಭಿವೃದ್ಧಿ ಅಧಿಕಾರಿಗಳನ್ನು ಈ ಕೂಡಲೇ ಸಂಪರ್ಕಿಸಲು ತಿಳಿಸಿದೆ. ಇಲ್ಲವಾದಲ್ಲಿ ನೇರವಾಗಿ ಸಹಕಾರ ಸಂಘಗಳ ನೋಂದಣಿ ರದ್ದುಪಡಿಸಲಾಗುವುದು ಮಾಡಲಾಗುವುದು ಎಂದು ತಿಳಿಸಿದ್ದಾರೆ.
- - -