ರಾಜ್ಯದ ಅಡಕೆಗೆ ತಡೆ ಸಮಸ್ಯೆ ಪರಿಹಾರಕ್ಕೆ ಕ್ರಮ: ಅಶೋಕ್ ರೈ

KannadaprabhaNewsNetwork |  
Published : Jun 30, 2026, 02:45 AM IST
ಫೋಟೋ: ೨೯ಪಿಟಿಆರ್-ಎಂಎಲ್‌ಎ | Kannada Prabha

ಸಾರಾಂಶ

ಕರ್ನಾಟಕ ರಾಜ್ಯದಿಂದ ಅದರಲ್ಲೂ ದಕ್ಷಿಣಕನ್ನಡ ಜಿಲ್ಲೆಯಿಂದ ಹೋದ ಅಡಿಕೆ ತುಂಬಿದ ಸುಮಾರು ೭೦ ಲಾರಿಗಳನ್ನು ಮಹಾರಾಷ್ಟ್ರದಲ್ಲಿ ಅಧಿಕಾರಿಗಳು ತಡೆಹಿಡಿದ ವಿಚಾರದ ಬಗ್ಗೆ ಸೂಕ್ತ ಮಾಹಿತಿ ಪಡೆದುಕೊಂಡು ಮುಖ್ಯಮಂತ್ರಿ ಮೂಲಕ ಸಮಸ್ಯೆ ಬಗೆಹರಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

ಪುತ್ತೂರು: ಕರ್ನಾಟಕ ರಾಜ್ಯದಿಂದ ಅದರಲ್ಲೂ ದಕ್ಷಿಣಕನ್ನಡ ಜಿಲ್ಲೆಯಿಂದ ಹೋದ ಅಡಿಕೆ ತುಂಬಿದ ಸುಮಾರು ೭೦ ಲಾರಿಗಳನ್ನು ಮಹಾರಾಷ್ಟ್ರದಲ್ಲಿ ಅಧಿಕಾರಿಗಳು ತಡೆಹಿಡಿದ ವಿಚಾರದ ಬಗ್ಗೆ ಸೂಕ್ತ ಮಾಹಿತಿ ಪಡೆದುಕೊಂಡು ಮುಖ್ಯಮಂತ್ರಿ ಮೂಲಕ ಸಮಸ್ಯೆ ಬಗೆಹರಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ. ಅವರು ಸೋಮವಾರ ಪುತ್ತೂರಿನಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿ, ಜಿಲ್ಲೆಯಿಂದ ಹೋದ ೭೦ ಅಡಿಕೆ ಸಾಗಾಟದ ಲಾರಿಗಳನ್ನು ಅಲ್ಲಿನ ಮಹಾರಾಷ್ಟ್ರದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಅಲ್ಲದೆ ಲಾರಿಯಲ್ಲಿರುವ ಅಡಕೆಗಳನ್ನು ನಾಶ ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ ಎನ್ನುವ ವಿಚಾರ ನನ್ನ ಗಮನಕ್ಕೆ ಬಂದಿದೆ. ಆದರೆ ಅಡಕೆ ಸಾಗಾಟ ಮಾಡುವವರಾಗಲೀ, ವ್ಯಾಪಾರಿಗಳಾಗಲಿ ಈ ವಿಚಾರವನ್ನು ಸೂಕ್ತ ದಾಖಲೆ ನೀಡಿ ದೃಢಪಡಿಸಿಲ್ಲ ಎಂದರು.

ಕಂಬಳ ಕ್ರೀಡೆಯಲ್ಲಿ ಎಮ್ಮೆ ಓಡಿಸೋದಲ್ಲ: ವಾಟಾಳ್ ನಾಗರಾಜ್ ಅವರು ಕಂಬಳದಲ್ಲಿ ಎಮ್ಮೆಗಳನ್ನು ಓಡಿಸುತ್ತಾರೆ. ಈ ಕಂಬಳವನ್ನು ಮೈಸೂರು, ಬೆಂಗಳೂರಿನಲ್ಲಿ ನಡೆಸೋದು ಬೇಡ ಎಂದು ಅಭಿಪ್ರಾಯ ತಿಳಿಸಿದ್ದಾರೆ. ಅವರಿಗೆ ಕಂಬಳದ ಕುರಿತ ಮಾಹಿತಿ ಕೊಂಚ ಕಡಿಮೆಯಿದೆ. ತಿಳಿಯದೆ ಅವರು ಕಂಬಳದಲ್ಲಿ ಎಮ್ಮೆ ಓಡಿಸುತ್ತಾರೆ ಎಂದಿದ್ದಾರೆ. ನಾವು ಎಮ್ಮೆಗಳನ್ನು ಓಡಿಸುವುದಿಲ್ಲ. ಕೋಣಗಳನ್ನು ಓಡಿಸುವುದು ಎಂದರು.ಕಂಬಳದ ಬಗ್ಗೆ ಇರುವ ಅವರ ಗೊಂದಲಗಳನ್ನು ಪರಿಹರಿಸುವ ಕೆಲಸವನ್ನು ಮಾಡುತ್ತೇನೆ. ಕಂಬಳ ನಡೆಸಬೇಕು ಎಂದು ಮೈಸೂರು, ಬೆಂಗಳೂರಿನ ಜನ ನಿರಂತರವಾಗಿ ಬೇಡಿಕೆ ಇಡುತ್ತಿದ್ದಾರೆ. ಈ ಬಾರಿ ದಸರಾದಲ್ಲಿ ಕಂಬಳವು ಎಲ್ಲರ ಆಕರ್ಷಣೆಯಾಗಲಿದೆ ಎಂದ ಶಾಸಕರು ಮೈಸೂರು, ಬೆಂಗಳೂರು ಮಾತ್ರವಲ್ಲ, ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೇಡ್ ನಲ್ಲೂ ಕಂಬಳವನ್ನು ಪ್ರದರ್ಶಿಸುವ ಕನಸು ನನ್ನದಾಗಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಗವಿಕಲತೆ ತಡೆಗೆ ಪೋಲಿಯೋ ಲಸಿಕೆ ಕಡ್ಡಾಯ: ಪೊನ್ನಣ್ಣ
ಜಾಗತಿಕ ಆರ್ಥಿಕತೆಗೆ ಎಂಎಸ್‌ಎಂಇಯಿಂದ ಅಗಾಧ ಕೊಡುಗೆ: ಸಿಎ ಎಸ್‌.ಎಸ್‌. ನಾಯಕ್‌