ತಹಸೀಲ್ದಾರ್, ಪೌರಾಯುಕ್ತರ ಮೇಲೆ ಕ್ರಮ ಸೂಚಿಸುವೆ

KannadaprabhaNewsNetwork |  
Published : May 02, 2026, 03:15 AM IST
01ಹಗಹಜ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಸಿಂದಗಿ ನಗರದ ರಸ್ತೆಯ ಸುತ್ತಲೂ ಕಸ. ರಸ್ತೆಯುದ್ದಕ್ಕೂ ಗುಂಡಿಗಳಿವೆ. ನಗರ ಸ್ವಚ್ಚವಾಗಿಲ್ಲ. ಇದನ್ನು ಗಮನಿಸಿದರೆ ತಾಲೂಕಾಡಳಿತ ಹದಗೆಟ್ಟಿದೆ ಎಂಬುದು ಮಲ್ನೋಟಕ್ಕೆ ತಿಳಿಯುತ್ತದೆ. ನಗರ ಅಶುಚಿತ್ವದಿಂದಿದೆ ತಹಸೀಲ್ದಾರ್ ಹಾಗೂ ನಗರಸಭೆ ಪೌರಾಯುಕ್ತರ ಮೇಲೆ ಕ್ರಮಕೈಗೊಳ್ಳುವಂತೆ ಮೇಲಾಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

ನಗರದ ರಸ್ತೆಯ ಸುತ್ತಲೂ ಕಸ. ರಸ್ತೆಯುದ್ದಕ್ಕೂ ಗುಂಡಿಗಳಿವೆ. ನಗರ ಸ್ವಚ್ಚವಾಗಿಲ್ಲ. ಇದನ್ನು ಗಮನಿಸಿದರೆ ತಾಲೂಕಾಡಳಿತ ಹದಗೆಟ್ಟಿದೆ ಎಂಬುದು ಮಲ್ನೋಟಕ್ಕೆ ತಿಳಿಯುತ್ತದೆ. ನಗರ ಅಶುಚಿತ್ವದಿಂದಿದೆ ತಹಸೀಲ್ದಾರ್ ಹಾಗೂ ನಗರಸಭೆ ಪೌರಾಯುಕ್ತರ ಮೇಲೆ ಕ್ರಮಕೈಗೊಳ್ಳುವಂತೆ ಮೇಲಾಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಹೇಳಿದರು. ನಗರದ ವಿಜಯಪುರ ರಸ್ತೆಯಲ್ಲಿರುವ ಮಾಂಗಲ್ಯ ಭವನದಲ್ಲಿ ಸಿಂದಗಿಯ ಡಾ.ಚನ್ನಪ್ಪ ಕಟ್ಟಿ ಅಭಿನಂದನ ಸಮಿತಿ ಹಮ್ಮಿಕೊಂಡ ಅಭಿನಂದನ ಸಮಾರಂಭ ನೆಲೆ ಅಭಿನಂದನಾ ಗ್ರಂಥ ಬಿಡುಗಡೆ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದರು.ಆಂಗ್ಲ ಪ್ರಾಧ್ಯಾಪಕರರಾಗಿ ಕನ್ನಡ ಸಾಹಿತ್ಯ ಲೋಕಕ್ಕೆ ಡಾ.ಚನ್ನಪ್ಪ ಕಟ್ಟಿ ಅವರ ಕೊಡುಗೆ ಅನನ್ಯ. ಕಥೆ, ಕಾವ್ಯ, ಸಂಶೋಧನೆ, ಜೀವನ ಚರಿತ್ರೆ ಮತ್ತು ಅನುವಾದದ ಮೂಲಕ ಸಾಹಿತ್ಯದ ಕೃಷಿಯನ್ನು ಮಾಡಿ ಅಮೋಘ ಸಾಧನೆ ಮಾಡಿದ್ದಾರೆ. ಅವರ ಈ ಅವಿರತ ಪರಿಶ್ರಮದಿಂದಲೇ ಇಂದು ಅವರು ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಒದಗಿ ಬಂದಿದ್ದು, ಸಿಂದಗಿ ನೆಲೆಗೆ ಹೆಮ್ಮೆಯ ಗರಿ ಸಾಹಿತ್ಯ ಲೋಕದ ಹಿರಿಮೆಯನ್ನು ಹೆಚ್ಚಿಸಿದ್ದಾರೆ ಎಂದರು.

ಈ ವೇಳೆ ನೆಲೆ ಅಭಿನಂದನ ಗ್ರಂಥವನ್ನು ಬಿಡುಗಡೆಗೊಳಿಸಿದ ಬೆಂಗಳೂರಿನ ಸಂಸ್ಕೃತಿ ಚಿಂತಕ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ನೆಲೆ ಎನ್ನುವ ಹೆಸರೇ ಚನ್ನಪ್ಪ ಕಟ್ಟಿ ಅವರ ಅಸ್ಮಿತೆ. ಅವರ ಇಡೀ ಬದುಕು ಮತ್ತು ಸಾಹಿತ್ಯ ಚಟುವಟಿಕೆಗೆ ಒಂದು ನೆಲೆ ಸಿಕ್ಕಿರುವುದೇ ಈ ನೆಲೆ ಎನ್ನುವ ಶಬ್ದ ಅವರ ವ್ಯಕ್ತಿತ್ವದ ಗುಣವಾಗಿದೆ. ಸ್ವಾಹಿತ ಮತ್ತು ಸಮಾಜ ಹಿತಕ್ಕಾಗಿ ಕಾರ್ಯ ಮಾಡಿದಾಗ ಮಾತ್ರ ಅದು ಸತ್ಯ ಶುದ್ಧ ಕಾಯಕವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ವಿಜಯಪುರದ ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಡಾ.ಎಂ.ಎಸ್.ಮದಭಾವಿ ಅಭಿನಂದನಾ ನುಡಿಗಳನ್ನಾಡಿದರು. ಡಾ.ಅರವಿಂದ ಮನಗೂಳಿ, ಅಭಿನಂದನ ಗ್ರಂಥದ ಗೌರವ ಸಂಪಾದಕ ಡಾ.ಶ್ರೀರಾಮ ಇಟ್ಟಣ್ಣವರ ಹಾಗೂ ಮಾಜಿ ವಿಪ ಸದಸ್ಯ ಅರುಣ ಶಹಾಪುರ ಮಾತನಾಡಿದರು.

ಈ ವೇಳೆ ಸಂಗಮೇಶ ಮೇತ್ರಿ ಸಂಪಾದಿಸಿದ ಅಮೋಘಸಿದ್ಧ ಜನಪದ ಮಹಾಕಾವ್ಯ ಸಾಂಸ್ಕೃತಿಕ ಮುಖಾಮುಖಿ ಗ್ರಂಥವನ್ನು ಮಾಜಿ ಶಾಸಕ ರಮೇಶ ಭೂಸನೂರ ಮತ್ತು ಚನ್ನಪ್ಪ ಕಟ್ಟಿ ಅವರ ವಿಮರ್ಶಾ ಸಂಕಲನ ಒಕ್ಕಣೆಯನ್ನು ವಿಪ ಮಾಜಿ ಸದಸ್ಯ ಅರುಣ ಶಹಾಪೂರ ಬಿಡುಗಡೆ ಮಾಡಿದರು.

ಸಾರಂಗಮಠದ ಪೀಠಾಧಿಪತಿ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಸಮ್ಮುಖ ವಹಿಸಿದ ಹಾಲುಮತ ಗುರುಪೀಠ ಅಗತೀರ್ಥದ ಸರೂರದ ರೇವಣಸಿದ್ದೇಶ್ವರ ಶಾಂತಮಯ ಸ್ವಾಮೀಜಿ ವಹಿಸಿ ಆಶೀರ್ವದಿಸಿದರು.

ವಿಜಯಪುರ ಲೋಕಾಯುಕ್ತ ಎಸ್‌ಪಿ ಟಿ.ಮಲ್ಲೇಶ, ಪ್ರಧಾನ ಸಂಪಾದಕ ಡಾ.ಎಂ.ಎಂ.ಪಡಶೆಟ್ಟಿ, ಡಾ.ಸಂಗಮೇಶ ಮೇತ್ರಿ, ಡಾ.ಚನ್ನಪ್ಪ ಕಟ್ಟಿ, ಪತ್ನಿ ಸರೋಜಾ ಕಟ್ಟಿ, ಎಂ.ಎಸ್.ಹೈಯ್ಯಾಳಕರ, ಶಿವಪ್ಪ ಗವಸಾಯಿ, ಬಿ.ಎಸ್.ಹಣಮಶೆಟ್ಟಿ ಸೇರಿದಂತೆ ಅವರ ಗೆಳೆಯರ ಬಳಗ, ಶಿಷ್ಯ ಬಗಳ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಾನಪದ ಕೇವಲ ಕಲೆಯಲ್ಲ, ಬದುಕಿನ ದಾರಿದೀಪ
ಚಿನ್ನಾ ಸೇಲಂ ಅರಿಷಿಣ ಬೀಜಕ್ಕೆ ಕೊರತೆ