ಕನ್ನಡಪ್ರಭ ವಾರ್ತೆ ಮರಿಯಮ್ಮನಹಳ್ಳಿ
ಇಲ್ಲಿನ ಪೊಲೀಸ್ ಠಾಣೆಯಲ್ಲಿ ಭಾನುವಾರ ಸಂಜೆ ನಡೆದ ಶ್ರೀಲಕ್ಷ್ಮೀನಾರಾಯಣಸ್ವಾಮಿ ಹಾಗೂ ಶ್ರೀ ಆಂಜನೇಯಸ್ವಾಮಿ ಜೋಡು ರಥೋತ್ಸವದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಥೋತ್ಸವ ವೇಳೆ ದೇವಸ್ಥಾನದ ಬಾವುಟ ಹೊರತು ಪಡಿಸಿ ಬೇರೆ ಯಾವುದೇ ಬಾವುಟಗಳಿಗೆ ನಿಷೇಧ ಹಾಕಲಾಗಿದೆ. ತೇರು ಎಳೆಯುವಾಗ ಸೊನ್ನೆ ಹಾಕುವ ಯುವಕರು ಸಹ ಸೆಡ್ಡು ಹೊಡೆಯುವಂತಿಲ್ಲ. ಹೊಸ ರಥಗಳು ಆಗಿರುವುದರಿಂದ ತೇರಿನ ಗಾಲಿಗಳಿಗೆ ಯಾರು ತೆಂಗಿನ ಕಾಯಿ ಹೊಡೆಯುವ ಹಾಗಿಲ್ಲ ಮತ್ತು ಜೋಡು ರಥೋತ್ಸವ ಜಾತ್ರೆಯಲ್ಲಿ ಸಾಕಷ್ಟು ಜನಸಂದಣಿ ಸೇರಿರುತ್ತಾರೆ. ಜನರಿಗೆ ಕಿರಿಕಿರಿ ಉಂಟಾಗುವ ಮತ್ತು ಕರ್ಕಶ ಶಬ್ದ ಉಂಟು ಮಾಡುವ ಪೀಪಿಗಳ ಮಾರಾಟ ನಿಷೇಧಿಸಲಾಗಿದೆ ಎಂದು ಅವರು ವಿವರಿಸಿದರು.ಈ ವರ್ಷ ಹೊಸ ತೇರು ಆಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರೆಯಲ್ಲಿ ಜನರು ಭಾಗವಹಿಸುತ್ತಾರೆ. ಯಾವುದೇ ಅಹಿತಕರ ಘಟನಗಳು ಉಂಟಾಗದಂತೆ ನಮ್ಮ ಪೊಲೀಸ್ ಸಿಬ್ಬಂದಿಗಳನ್ನು ಮಫ್ತಿಯಲ್ಲಿ ಎಲ್ಲಾ ಕಡೆ ಓಡಾಡುತ್ತಿರುತ್ತಾರೆ. ಎಲ್ಲದನ್ನೂ ಗಮನಿಸುತ್ತಿರುತ್ತಾರೆ.
ಸಿಪಿಐ ವಿಕಾಸ್ ಲಮಾಣಿ ಮಾತನಾಡಿ, ರಥೋತ್ಸವದಂದು ಸಂಚಾರದ ಮಾರ್ಗ ಬದಲಾವಣೆ ಮಾಡಲಾಗಿದೆ. ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ಮರಿಯಮ್ಮನಹಳ್ಳಿ ಪಟ್ಟಣದ ಮೂಲಕ ವಿವಿಧ ಊರುಗಳಿಗೆ ಹಾದು ಹೋಗುವ ವಾಹನಗಳನ್ನು ರಾಷ್ಟ್ರೀಯ ಹೆದ್ದಾರಿ 50 ರಸ್ತೆಯ ದೇವಲಾಪುರದ ಮೂಲಕ ಟ್ರಾಫಿಕ್ ನ್ನು ಡಿವೈಡ್ ಮಾಡಲಾಗಿದೆ. ಅತ್ಯಂತ ಆಕರ್ಷಣೆ ಮತ್ತು ಸುಂದರವಾಗಿ ಜೋಡು ರಥಗಳ ನಿರ್ಮಾಣವಾಗಿದ್ದು, ಹೊಸತೇರು, ದೇವಸ್ಥಾನ ನವೀಕರಣ, ಹೊಸನೀರು ಎನ್ನುವ ವಾಕ್ಯದೊಂದಿಗೆ ಮರಿಯಮ್ಮನಹಳ್ಳಿಯ ಜನರು ಪಡೆದುಕೊಂಡಿದ್ದಾರೆ. ರಥೋತ್ಸವನ್ನು ಅತ್ಯಂತ ಶ್ರದ್ದಾಭಕ್ತಿಯಿಂದ ಆಚರಿಸುವ ಮೂಲಕ ಶಾಂತಿಯನ್ನು ಕಾಪಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಪಪಂ ಅಧ್ಯಕ್ಷ ಆದಿಮನಿ ಹುಸೇನ್ ಭಾಷ, ಉಪತಹಶೀಲ್ದಾರ್ ಶ್ರೀಧರ್, ಪಿಎಸ್.ಐ ಮೌನೇಶ್ ರಾಠೋಡ್, ಜೆಸ್ಕಾಂನ ಅಧಿಕಾರಿ ವೆಂಕಟೇಶ್, ಸ್ಥಳೀಯ ಮುಖಂಡರಾದ ಗೋವಿಂದರ ಪರುಶುರಾಮ, ಯು. ವೆಂಕಟೇಶ್, ಎನ್.ಎಸ್. ಬುಡೇನ್ ಸಾಹೇಬ್, ಗುಂಡಾಸ್ವಾಮಿ, ಎಂ. ಬದ್ರಿನಾಥ ಶೆಟ್ಟಿ, ಸಿ. ಮಂಜುನಾಥ, ರವಿಕಿರಣ್, ಎಲ್. ಚಂದ್ರಶೇಖರ್, ಎಲ್. ಉಮೇಶ್, ಕಲ್ಲಾಳ್ ಪರುಶುರಾಮಪ್ಪ, ಜಿ.ವಿ. ಸುಬ್ಬರಾವ್, ಈ. ರಮೇಶ್, ಲೋಕಪ್ಪನಹೊಲದ ಹನುಮಂತಪ್ಪ ಸಭೆಯಲ್ಲಿ ಮಾತನಾಡಿದರು.