ಕ್ರಿಯಾಶೀಲವಾಗಿ ಕಾರ್ಯ ಮಾಡುತ್ತಿರುವ ಕಸಾಪ: ಎನ್.ಬಿ. ಗೊರವರ

KannadaprabhaNewsNetwork |  
Published : May 07, 2025, 12:48 AM IST
ಬಾಗಲಕೋಟೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಸಾಪ ಸಭಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಸಾಪ 111ನೇ ಸಂಸ್ಥಾಪನಾ ದಿನಾಚರಣೆಯನ್ನು ನಿವೃತ್ತ ಉಪನಿರ್ದೇಶಕ ಎನ್.ಬಿ.ಗೊರವರ ಉದ್ಘಾಟಿಸಿದರು. | Kannada Prabha

ಸಾರಾಂಶ

ಕನ್ನಡ ಭಾಷೆ ಬೆಳವಣಿಗೆಗೆ ಕಂಕಣ ಬದ್ಧವಾಗಿ ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಸ್ತುತ್ಯರ್ಹಾ ಕಾರ್ಯ. ಶಾಲಾ, ಕಾಲೇಜುಗಳಲ್ಲೂ ಕಾರ್ಯಕ್ರಮ ಹಮ್ಮಿಕೊಂಡು ಶಿಕ್ಷಕರು, ಶಾಲಾ ಮಕ್ಕಳು ಕನ್ನಡ ಭಾಷಾಭಿಮಾನ ಬೆಳೆಸಿಕೊಂಡು ಮಾತೃಭಾಷೆ ಮಹತ್ವ ಅರಿಯುವಂತೆ ಕಸಾಪ ಒಳ್ಳೆಯ ಕಾರ್ಯ ಮಾಡುತ್ತಿದೆ ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಎನ್.ಬಿ. ಗೊರವರ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕನ್ನಡ ಭಾಷೆ ಬೆಳವಣಿಗೆಗೆ ಕಂಕಣ ಬದ್ಧವಾಗಿ ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಸ್ತುತ್ಯರ್ಹಾ ಕಾರ್ಯ. ಶಾಲಾ, ಕಾಲೇಜುಗಳಲ್ಲೂ ಕಾರ್ಯಕ್ರಮ ಹಮ್ಮಿಕೊಂಡು ಶಿಕ್ಷಕರು, ಶಾಲಾ ಮಕ್ಕಳು ಕನ್ನಡ ಭಾಷಾಭಿಮಾನ ಬೆಳೆಸಿಕೊಂಡು ಮಾತೃಭಾಷೆ ಮಹತ್ವ ಅರಿಯುವಂತೆ ಕಸಾಪ ಒಳ್ಳೆಯ ಕಾರ್ಯ ಮಾಡುತ್ತಿದೆ. ಸಾಧಕರನ್ನು, ಹಿರಿಯ ಸಾಹಿತಿಗಳನ್ನು ಗೌರವಿಸುವುದು. ಕೃತಿಗಳನ್ನು ಪ್ರಕಟಿಸುವುದು ಹೀಗೆ ಜಿಲ್ಲೆಯಲ್ಲಿ ಶೆಲ್ಲಿಕೇರಿಯವರ ನೇತೃತ್ವದಲ್ಲಿ ಕಸಾಪ ಕ್ರಿಯಾಶೀಲವಾಗಿ ಕಾರ್ಯ ಮಾಡುತ್ತಿರುವುದು ಗಮನಾರ್ಹವಾಗಿದೆ ಎಂದು ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಎನ್.ಬಿ. ಗೊರವರ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಸಾಪ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಕಸಾಪ 111ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ ಬಾಗಲಕೋಟೆ ಶಾಸಕರ ಮಾದರಿ ಶಾಲೆಯ ಮುಖ್ಯಶಿಕ್ಷಕ ಸಾಹಿತಿ ಸಂಗಮೇಶ ಸಣ್ಣತಂಗಿ ಮಾತನಾಡಿ, ಕನ್ನಡಿಗರ ಹಿತ ಕಾಯುವುದು, ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ, ನೆಲ, ಜಲ ಸಂರಕ್ಷಣೆ, ಇವುಗಳ ಬೆಳವಣಿಗೆ, ಕನ್ನಡ ಗ್ರಂಥ ಪ್ರಕಟಿಸುವುದು, ಸಮ್ಮೇಳನಗಳ ಆಯೋಜನೆ, ಜನಜಾಗೃತಿ ಮೂಡಿಸುವ ಧ್ಯೇಯ್ಯೋದ್ದೇಶಗಳೊಂದಿಗೆ ಸದಾಕಾಲ ಕಾರ್ಯೋನ್ಮುಖವಾದ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಹೆಮ್ಮೆಯ, ಅಭಿಮಾನದ ಸಂಸ್ಥೆಯಾಗಿದೆ ಎಂದರು.

ಕಸಾಪ ನಾಡು ನುಡಿ ಒಳಿತಿಗಾಗಿ ವೈಶಿಷ್ಟಪೂರ್ಣ ಕಾರ್ಯಕ್ರಮ, ಸಮ್ಮೇಳನಗಳನ್ನು ಆಯೋಜಿಸಿ ಜನಸಾಮಾನ್ಯರು ಕನ್ನಡ ಕಾರ್ಯಕ್ರಮಗಳಲ್ಲಿ ಭಾಗವಹಿಸುವ, ಕನ್ನಡಿಗರನ್ನು ಒಗ್ಗೂಡಿಸುವ ಕಾರ್ಯ ಮಾಡುತ್ತಿದೆ. ರಾಜ್ಯ, ಜಿಲ್ಲೆ, ತಾಲೂಕು, ಹೋಬಳಿ ಮಟ್ಟದಲ್ಲಿ ಕಸಾಪ ಘಟಕಗಳಿವೆ. ದೇಶ ವಿದೇಶಗಳಲ್ಲಿಯೂ ಕನ್ನಡಪರ ಕಾರ್ಯಕ್ರಮಗಳು ನಡೆಯುತ್ತಿವೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಶಿರೂರಿನ ಹಿರಿಯರು, ಕನ್ನಡ ಪಂಡಿತರಾದ ಎ.ಸಿ. ಚೌಕಿಮಠ, ಮಹಾಲಿಂಗಪುರದ ಹಿರಿಯ ಸಾಹಿತಿ ಗುರುರಾಜ ಖಾಸನೀಸ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಎ.ಸಿ. ಚೌಕಿಮಠ, ಸಾಹಿತಿ ಗುರುರಾಜ ಖಾಸನೀಸ್‌ ಮಾತನಾಡಿದರು.

ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಆನಂದ ಹಲಕುರ್ಕಿ, ಆರ್. ಸಿ. ಚಿತ್ತವಾಡಗಿ, ಜಿಲ್ಲಾ ಕಸಾಪ ಮಹಿಳಾ ಪ್ರತಿನಿಧಿ ಜಯಶ್ರೀ ಮುರನಾಳ, ಪಿ.ಎ. ಚೌಕಿಮಠ ಇನ್ನಿತರರು ಪಾಲ್ಗೊಂಡಿದ್ದರು.ಜಿಲ್ಲೆಯಲ್ಲಿ ನಿರಂತರ ಕಾರ್ಯಕ್ರಮ ಆಯೋಜಿಸುವಲ್ಲಿ ಜಿಲ್ಲಾ ಕಸಾಪ ಮುಂಚೂಣಿಯಲ್ಲಿದೆ. ಅಲಕ್ಷಿತ ಸಾಹಿತಿಗಳಿಗೆ, ಕಲಾವಿದರಿಗೆ ವೇದಿಕೆ ಒದಗಿಸಿಕೊಟ್ಟು ಪೂಜ್ಯರ, ಹಿರಿಯರ, ಹಿರಿಯ ಸಾಹಿತಿಗಳ ಮಾರ್ಗದರ್ಶನದೊಂದಿಗೆ ಜಿಲ್ಲಾ ಸಮ್ಮೇಳನಗಳು, ತಾಲೂಕು ಸಮ್ಮೇಳನಗಳು, ಶಿಕ್ಷಕ-ಸಾಹಿತಿಗಳ ಸಮ್ಮೇಳನ, ವಿಭಾಗ ಮಟ್ಟದ ಸಾಂಸ್ಕೃತಿಕ ಸಮ್ಮೇಳನ ನಡೆಸಿದೆ. ವಿಶ್ವವಿದ್ಯಾಲಯಗಳು, ಅಕಾಡೆಮಿಗಳ ಸಹಯೋಗದೊಂದಿಗೂ ಹತ್ತು ಹಲವು ಕಾರ್ಯಕ್ರಮಗಳನ್ನು ಜಿಲ್ಲೆಯ ವಿವಿದೆಡೆ ನಡೆಸಲಾಗಿದೆ. ಜಿಲ್ಲೆಯಲ್ಲಿ ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸಿ 30ಕ್ಕೂ ಹೆಚ್ಚು ಕೃತಿಗಳನ್ನು ಜಿಲ್ಲಾ ಕಸಾಪ ಪ್ರಕಟಿಸಿದೆ

- ಶಿವಾನಂದ ಶೆಲ್ಲಿಕೇರಿ ಕಸಾಪ ಜಿಲ್ಲಾಧ್ಯಕ್ಷ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ