ಕನ್ನಡಪ್ರಭ ವಾರ್ತೆ ಮಂಡ್ಯ
ಘಟನೆ ಕುರಿತಂತೆ ಸಾಮಾಜಿಕ ಜಾಲ ತಾಣ ಫೇಸ್‌ಬುಕ್‌ನಲ್ಲಿ ಸುದೀರ್ಘ ಮಾಹಿತಿ ಹಂಚಿಕೊಂಡಿರುವ ಸುಮಲತಾ, ರೇಣುಕಾಸ್ವಾಮಿ ಕೊಲೆಗೆ ಸಂತಾಪ ಸೂಚಿಸಿ, ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ.
ಅವರಿಗೆ ನ್ಯಾಯ ಸಿಗಲಿ, ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸಿದ್ದಾರೆ.ಈ ಘಟನೆ ನನ್ನ ಹೃದಯವನ್ನು ಛಿದ್ರಗೊಳಿಸಿದೆ. ಬಹಳ ದಿನ ಆಘಾತ ಹಾಗೂ ನೋವು ತಂದಿದೆ. ದರ್ಶನ್ ಸ್ಟಾರ್ ಆಗುವುದಕ್ಕೂ ಮೊದಲಿನಿಂದಲೂ ನನಗೆ ಪರಿಚಯ. ಸ್ಟಾರ್‌ಗಿಂತ ನನ್ನ ಕುಟುಂಬದ ಸದಸ್ಯ, ಯಾವಾಗಲೂ ನನಗೆ ಮಗನಂತೆ. ನನಗೆ ತಾಯಿಯ ಗೌರವ ಸ್ಥಾನ ಹಾಗೂ ಮಗನ ಪ್ರೀತಿ ನೀಡಿದ್ದಾರೆ. ಯಾವ ತಾಯಿಯೂ ಈ ಪರಿಸ್ಥಿತಿಯಲ್ಲಿ ಮಗುವನ್ನು ನೋಡಲು ಸಹಿಸುವುದಿಲ್ಲ ಎಂದು ಬರೆದುಕೊಂಡಿದ್ದಾರೆ.
ದರ್ಶನ್ ಜೊತೆಗೆ ಪತ್ನಿ ವಿಜಯಲಕ್ಷ್ಮಿ ಹಾಗೂ ಮುಗ್ಧ ಮಗನನ್ನು ಸಾಮಾಜಿಕ ಮಾಧ್ಯಮದಲ್ಲಿ ಗುರಿಯಾಗಿಸಿಕೊಂಡಿರುವುದು ತುಂಬಾ ಅನ್ಯಾಯ. ತಮ್ಮ ಕಾಮೆಂಟ್ ಹೇಗೆ ಪರಿಣಾಮ ಬೀರಬಹುದು ಎಂಬುದನ್ನು ಪರಿಗಣಿಸಿದ್ದೇನೆ. ದರ್ಶನ್ ಪ್ರಕರಣದಲ್ಲಿ ಆರೋಪಿಯಾಗಿದ್ದು, ಇನ್ನು ಯಾವುದೂ ಸಾಬೀತಾಗಿಲ್ಲ ಅಥವಾ ಶಿಕ್ಷೆಯಾಗಿಲ್ಲ.
ಚಿತ್ರರಂಗ ಅಸ್ತವ್ಯಸ್ತವಾಗಿದೆ. ದರ್ಶನ್ ಅಭಿಮಾನಿಗಳು ಶಾಂತವಾಗಿರಿ. ಈ ಕ್ಷಣದಲ್ಲಿ ಯಾವುದೇ ಹೇಳಿಕೆಗಳನ್ನು ನೀಡಬೇಡಿ. ದಯವಿಟ್ಟು ಶಾಂತವಾಗಿರಿ. ನಮಲ್ಲಿ ಕಾನೂನಿಗಿಂತ ಯಾರೂ ಮೇಲಲ್ಲ. ನಾವು ಅದನ್ನು ಗೌರವಿಸಬೇಕು.
ಎಲ್ಲವೂ ಸರಿಯಾಗುತ್ತವೆ. ಸತ್ಯ ಮೇವ ಜಯತೆ ಎಂದು ಪೋಸ್ಟ್ ಹಾಕಿದ್ದಾರೆ.