ಕನ್ನಡಪ್ರಭ ವಾರ್ತೆ ಬಳ್ಳಾರಿ
ಡಾ. ವಿಷ್ಣುವರ್ಧನ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಘೋಷಣೆ ಮಾಡಿರುವುದು ಅತ್ಯಂತ ಸಂತಸ ತಂದಿದೆ. ಅನೇಕ ಸಮಾಜಮುಖಿ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ವಿಷ್ಣುವರ್ಧನ್ ಅವರು ಸಮಾಜಸ್ವಾಸ್ಥ್ಯವನ್ನು ಕಾಪಾಡುವ ದಿಸೆಯಲ್ಲಿ ಸಾಕಷ್ಟು ಶ್ರಮಿಸಿದ್ದಾರೆ. ಕನ್ನಡ ಸಿನಿಮಾ ಕ್ಷೇತ್ರ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಲು ವಿಷ್ಣುವರ್ಧನ್ ಅವರ ಕೊಡುಗೆ ಸಾಕಷ್ಟಿದೆ ಎಂದು ಹೇಳಿದರು.
ಇದೇ ವೇಳೆ ಬಂಡ್ರಿ ಲಿಂಗಪ್ಪ ಬಯಲಾಟದ ಮಾತುಗಳನ್ನು ಪ್ರಸ್ತುತಪಡಿಸಿ ಗಮನ ಸೆಳೆದರು. ಬಳಿಕ ಜರುಗಿದ ಕವಿಗೋಷ್ಠಿಯಲ್ಲಿ ಕವಿ ಡಾ. ಅರವಿಂದ್ ಪಾಟೀಲ್, ಪಿ.ಆರ್. ವೆಂಕಟೇಶ್, ಮಂಜುನಾಥ್ ರೆಡ್ಡಿ, ಡಾ. ಶ್ರೀನಿವಾಸ್ ಮೂರ್ತಿ, ಎ.ಎರಿಸ್ವಾಮಿ, ಡಾ. ಎಸ್.ಮಂಜುನಾಥ್, ಕವಿತಾ ವಿರುಪಾಕ್ಷಪ್ಪ, ಎಚ್.ಎಂ. ಮಂಜುನಾಥ್ ಸ್ವಾಮಿ, ಡಾ. ತಿಪ್ಪೇರುದ್ರ, ಆಲಂಬಾಷ ಸೇರಿದಂತೆ ಅನೇಕ ಕವಿಗಳು ಭಾಗವಹಿಸಿ ಕಾವ್ಯ ವಾಚನ ಮಾಡಿದರು. ಸಮಾರಂಭದ ಮುಖ್ಯ ಅತಿಥಿಗಳಾಗಿ ನೀರಾವರಿ ಇಲಾಖೆಯ ಅಧಿಕಾರಿ ಮಂಜುನಾಥ್, ಉಪನ್ಯಾಸಕ ಮಂಜುನಾಥ ರೆಡ್ಡಿ ಹಿರಿಯ ಸಾಹಿತಿ ಪಿ.ಆರ್. ವೆಂಕಟೇಶ್, ಕವನ ಪ್ರಕಾಶನದ ಪ್ರಕಾಶಕಿ ವಾಣಿ ಅಜಯ್ ಬಣಕಾರ್ ಉಪಸ್ಥಿತರಿದ್ದರು. ಕವಿ ಅಜಯ್ ಬಣಕಾರ್ ಪ್ರಾಸ್ತಾವಿಕ ಮಾತನಾಡಿದರು. ಪರ್ವೀನ್ ಬಾನು ಹಾಗೂ ಕೆ.ವಿ. ನಾಗರೆಡ್ಡಿ ಕಾರ್ಯಕ್ರಮ ನಿರ್ವಹಿಸಿದರು.