ನಟ ರಾಮಕೃಷ್ಣ, ಅಣ್ಣಾರಾಯರಿಗೆ ನಮ್ಮನೆ ಪ್ರಶಸ್ತಿ

KannadaprabhaNewsNetwork |  
Published : Oct 04, 2024, 01:07 AM ISTUpdated : Oct 04, 2024, 01:08 AM IST
೩ಎಸ್.ಆರ್.ಎಸ್೨ಪೊಟೋ೧ (ನೀರ್ನಳ್ಳಿ ರಾಮಕೃಷ್ಣ)೩ಎಸ್.ಆರ್.ಎಸ್೨ಪೊಟೋ೩ (ಅಣ್ಣರಾಯ ತಳವಾರ)೩ಎಸ್.ಆರ್.ಎಸ್೨ಪೊಟೋ೩ (ಐಶ್ವರ್ಯ ದೇಸಾಯಿ) | Kannada Prabha

ಸಾರಾಂಶ

ಡಿ. ೮ರಂದು ಶಿರಸಿ ತಾಲೂಕಿನ ಬೆಟ್ಟಕೊಪ್ಪದಲ್ಲಿ ನಡೆಯುವ ೧೩ನೇ ವರ್ಷದ ನಮ್ಮನೆ ಹಬ್ಬದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಶಿರಸಿ: ವಿಶ್ವಶಾಂತಿ ಸೇವಾ ಟ್ರಸ್ಟ್ ಕರ್ನಾಟಕ ನೀಡುವ ನಮ್ಮನೆ ಪ್ರಶಸ್ತಿಗೆ ನಟ ನೀರ್ನಳ್ಳಿ ರಾಮಕೃಷ್ಣ, ಬೆಂಗಳೂರಿನ ಅವಿನಾಶಿ ಸಂಸ್ಥೆಯ ಸ್ಥಾಪಕ ಅಣ್ಣಾರಾಯ ಎಸ್. ತಳವಾರ ಹಾಗೂ ನಮ್ಮನೆ ಯುವ ಪುರಸ್ಕಾರಕ್ಕೆ ಧಾರವಾಡದ ಯುವ ಗಾಯಕಿ ಐಶ್ವರ್ಯ ದೇಸಾಯಿ ಆಯ್ಕೆಯಾಗಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಟ್ರಸ್ಟ್ ಕಾರ್ಯದರ್ಶಿ ಗಾಯತ್ರಿ ರಾಘವೇಂದ್ರ ಅವರು, ಡಿ. ೮ರಂದು ಶಿರಸಿ ತಾಲೂಕಿನ ಬೆಟ್ಟಕೊಪ್ಪದಲ್ಲಿ ನಡೆಯುವ ೧೩ನೇ ವರ್ಷದ ನಮ್ಮನೆ ಹಬ್ಬದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಅರ್ಜಿ ಇಲ್ಲದೇ ಆಯ್ಕೆ:

ಕಳೆದ ಹನ್ನೆರಡು ವರ್ಷಗಳಿಂದಲೂ ಅರ್ಜಿ ಆಹ್ವಾನಿಸದೇ ಸಾಧಕ ವ್ಯಕ್ತಿಗಳನ್ನು ಅರಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತಿದೆ. ಜಿಲ್ಲೆಯ ಒಳಗೆ, ಜಿಲ್ಲೆಯ ಹೊರಗೆ ಓರ್ವ ಸಾಧಕರು, ಹಾಗೂ ಓರ್ವ ಯುವ ಅಥವಾ ಬಾಲ, ಕಿಶೋರ ಪುರಸ್ಕಾರ ನೀಡಲಾಗುತ್ತದೆ. ಈ ಬಾರಿಯೂ ಟ್ರಸ್ಟ್ ಅಧ್ಯಕ್ಷ, ಹಿರಿಯ ಪತ್ರಕರ್ತ ರವೀಂದ್ರ ಭಟ್ಟ ಅವರ ನೇತೃತ್ವದಲ್ಲಿ ಪ್ರಶಸ್ತಿಗೆ ಆಯ್ಕೆಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.ಕತಗಾಲ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಕಾರವಾರ: ಅಂಕೋಲಾದ ಶೆಟಗೇರಿ ಸತ್ಯಾಗ್ರಹ ಸ್ಮಾರಕ ಕ್ರಾಂತಿ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಕತಗಾಲದ ಎಸ್‌ಕೆಪಿ ಹೈಸ್ಕೂಲ್‌ನ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ದಿವ್ಯಾ ಸಿ. ನಾಯ್ಕ ಪೋಲ್ ವಾಲ್ಟ್‌ನಲ್ಲಿ ಸತತ 3ನೇ ಬಾರಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾಳೆ. ಸಂಕೇತ್ ಕೆ. ಅಂಬಿಗ ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾನೆ.ವಿದ್ಯಾರ್ಥಿಗಳ ಸಾಧನೆಗೆ ಹಾಗೂ ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕ ಜಿ.ಕೆ. ಗೌಡ ಅವರಿಗೆ ಶಾಲಾ ಆಡಳಿತ ಮಂಡಳಿ, ಉಪನಿರ್ದೇಶಕರು, ದೈಹಿಕ ಶಿಕ್ಷಣ ಪರಿವೀಕ್ಷಕರು, ಎಸ್‌ಡಿಎಂಸಿ ಅಧ್ಯಕ್ಷರು ಸದಸ್ಯರು, ಮುಖ್ಯಾಧ್ಯಾಪಕರು, ಶಿಕ್ಷಕರು, ಊರನಾಗರಿಕರು ಅಭಿನಂದಿಸಿದ್ದಾರೆ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...