ಕನ್ನಡಪ್ರಭ ವಾರ್ತೆ ರಾಮನಗರ
ವಂಡರ್ ಲಾ ಸುಮಾರು 35 ಕೋಟಿ ರು.ಗಳ ಹೂಡಿಕೆಯೊಂದಿಗೆ ಯುಎಸ್ ಮತ್ತು ಯೂರೇಪಿನ ಪ್ರಮುಖ ಥೀಮ್ ಪಾರ್ಕ್ ವಿನ್ಯಾಸ ಕಂಪನಿಗಳೊಂದಿಗೆ ಬಾಹ್ಯಾಕಾಶ ವಿಷಯ ಹೊಂದಿರುವ ಮಿಷನ್ ಇಂಟರ್ ಸ್ಟೆಲ್ಲಾರ್ ರೈಡ್ ಮಾಡಿ ಆಶಿಕಾ ರಂಗನಾಥ್ ಮೆಚ್ಚುಗೆ ವ್ಯಕ್ತಪಡಿಸಿದರು.
ಇಂತಹ ಅದ್ಭುತ ಅನುಭವವನ್ನು ಅನುಭವಿಸಲು ವಿದೇಶಗಳಿಗೆ ತೆರಳಬೇಕಿತ್ತು. ಆದರೆ, ವಂಡರ್ ಲಾ ಬೆಂಗಳೂರಿನಲ್ಲೇ ಅಂತಾರಾಷ್ಟ್ರೀಯ ಮಟ್ಟದ ಥಿಯೇಟರ್ ಅನ್ನು ಸ್ಥಾಪಿಸಿರುವುದು ಹಾಗೂ ಅದನ್ನು ಸ್ವತಃ ನಾನೇ ಉದ್ಘಾಟಿಸಿರುವುದು ಅತ್ಯಂತ ಸಂತೋಷ ನೀಡಿದೆ ಎಂದರು.ಇಂಟರ್ ಸ್ಟೆಲ್ಲರ್ ಥಿಯೇಟರ್ ನ ರೈಡ್ ಬಾಹ್ಯಾಕಾಶಕ್ಕೆ ಹೋಗಿ ಬಂದಂತಹ ಅತ್ಯದ್ಭುತ ಅನುಭವವನ್ನು ನೀಡಿದೆ. ಆರಂಭದಲ್ಲಿ ನನಗೆ ಕೊಂಚ ಹೆದರಿಕೆ ಆಗಿತ್ತು. ಆದರೆ, ಎಲ್ಲಾ ರಕ್ಷಣಾ ಮಾನದಂಡಗಳನ್ನು ಅಳವಡಿಸಿರುವುದರಿಂದ ಯಾವುದೇ ಅಪಾಯವಿಲ್ಲ ಎಂದು ನಂತರ ತಿಳಿಯಿತು. ಸಾರ್ವಜನಿಕರು ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿಗಳು ತಪ್ಪದೇ ಆಗಮಿಸಿ, ಇಂಟರ್ ಸ್ಟೆಲ್ಲರ್ ಥಿಯೇಟರ್ ನ ರೋಮಾಂಚಕಾರಿ ಅನುಭವವನ್ನು ಪಡೆಯಿರಿ ಎಂದು ಮನವಿ ಮಾಡಿದರು.
ವಂಡರ್ ಲಾ ಸಂದರ್ಶಕರ ನಿರಂತರವಾಗಿ ಬದಲಾಗುತ್ತಿರುವ ನಿರೀಕ್ಷೆಗಳನ್ನು ಪೂರೈಸಲು ವಿಕಸನಗೊಂಡಿದೆ ಮತ್ತು ಮಿಷನ್ ಇಂಟರ್ ಸ್ಟೆಲ್ಲರ್ ವಿಶ್ವ ದರ್ಜೆಯ ಅನುಭವಗಳನ್ನು ನೀಡುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ. ಈ ವರ್ಷ ವಂಡರ್ ಲಾ 25ನೇ ವರ್ಷವನ್ನು ಆಚರಿಸಿಕೊಳ್ಳುವುದನ್ನು ನಾವು ಎದುರು ನೋಡುತ್ತಿರುವಾಗ, ಈ ಉದ್ಘಾಟನೆಯ ನಮ್ಮ ಪ್ರಯಾಣಕ್ಕೆ ಪ್ರಮುಖ ಸೇರ್ಪಡೆಯನ್ನು ಸೂಚಿಸುತ್ತದೆ ಎಂದು ಹೇಳಿದರು.
ಈ ವೇಳೆ ವಂಡರ್ ಲಾ ಹಾಲಿಡೇಸ್ ನ ಸಿಇಒ ಧೀರನ್ ಚೌಧರಿ, ಪಾರ್ಕ್ ಮುಖ್ಯಸ್ಥ ಎಚ್.ಎಸ್. ರುದ್ರೇಶ್ ಉಪಸ್ಥಿತರಿದ್ದರು.