ಕನ್ನಡಪ್ರಭ ವಾರ್ತೆ ಕಾಪು
ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಅಧ್ಯಕ್ಷ ಕಿಶೋರ್ ಆಳ್ವ ಅವರು ಮಾನಸದ ಅಧ್ಯಕ್ಷ ಹೆನ್ರಿ ಮೆನೆಜ಼ೆಸ್ ಮತ್ತು ವ್ಯವಸ್ಥಾಪಕ ಟ್ರಸ್ಟಿ ಡಾ. ಎಡ್ವರ್ಡ್ ಲೋಬೊ ಅವರಿಗೆ ಉಡುಪಿ ಡಯಸಿಸ್‌ನ ವಿಕಾರ್ ಜನರರ್ ಫಾ. ಫರ್ಡಿನ್ಯಾಂಡ್ ಗೊನ್ಸಾಲ್ವೆಸ್ ಮತ್ತು ಮಾನಸದ ಪದಾಧಿಕಾರಗಳ ಸಮ್ಮುಖದಲ್ಲಿ ಈ ಅನುದಾನವನ್ನು ಹಸ್ತಾಂತರಿಸಿದರು.
ನಂತರ ಮಾತನಾಡಿದ ಕಿಶೋರ್ ಆಳ್ವ, ಅದಾನಿ ಫ಼ೌಂಡೇಶನ್ ಸದಾ ಸಮುದಾಯದ ಉನ್ನತಿಗಾಗಿ ಬದ್ಧವಾಗಿದೆ. ಮಾನಸ ಪುನರ್ವಸತಿ ಮತ್ತು ತರಬೇತಿ ಕೇಂದ್ರವು ವಿಶೇಷ ಮಕ್ಕಳ ಪಾಲಿಕೆ ಬೆಳಕಿನ ಕಣ್ಮಣಿಯಾಗಿ ಸೇವೆ ಸಲ್ಲಿಸುತ್ತಿದೆ. ಈ ಹೊಸ ಮೂಲಸೌಕರ್ಯವು ವಿಶೇಷ ಮಕ್ಕಳ ಶಿಕ್ಷಣ, ಚಿಕಿತ್ಸೆ ಮತ್ತು ಸಂಪೂರ್ಣ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಸಮಾಜವು ಎಲ್ಲಾ ವಿಶೇಷ ಮಕ್ಕಳಿಗೆ ಸಮಾನ ಅವಕಾಶಗಳನ್ನು ಒದಗಿಸಬೇಕು, ಅವರ ಪ್ರತಿಭೆಗೆ ಮಾನ್ಯತೆ ನೀಡಬೇಕು, ಹಾಗೂ ಪ್ರೀತಿಯೊಂದಿಗೆ ಶಿಕ್ಷಣದೊಂದಿಗೆ ಮತ್ತು ಶಕ್ತಿಕರ್ತತ್ವದೊಂದಿಗೆ ಅವರನ್ನು ಬೆಳಸಬೇಕು ಎಂಬ ಕಾರಣದಿಂದ ಈ ಅನುದಾನವನ್ನು ನೀಡಲಾಗುತ್ತಿದೆ ಎಂದರು.ಫಾ.ಫರ್ಡಿನ್ಯಾಂಡ್ ಗೊನ್ಸಾಲ್ವೆಸ್ ತಮ್ಮ ಸಂತೋಷವನ್ನು ಹಂಚಿಕೊಂಡರು, ಹೆನ್ರಿ ಮೆನೆಜ಼ೆಸ್ ಮತ್ತು ಅಧ್ಯಕ್ಷ ಡಾ. ಎಡ್ವರ್ಡ್ ಲೋಬೊ ಅವರು ಅದಾನಿ ಸಮೂಹಕ್ಕೆ ಕೃತಜ್ಞತೆ ಸಲ್ಲಿಸಿದರು.