ಸುಖದ ಬದುಕಿಗೆ ಹೊಂದಾಣಿಕೆ ಅವಶ್ಯಕ

KannadaprabhaNewsNetwork |  
Published : Sep 17, 2024, 12:54 AM IST
ಸಸಸಸ | Kannada Prabha

ಸಾರಾಂಶ

ಸಂಘ ಜೀವಿಯಾಗಿರುವಂತ ಮನುಷ್ಯ ಎಲ್ಲರೊಂದಿಗೆ ಸುಖವಾಗಿ ಬದುಕುವುದರೊಂದಿಗೆ ಅಪ್ಪಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಗುರುಸಿದ್ದೇಶ್ವರ ಪತ್ತಿನ ಸಹಕಾರಿ ಸಂಘದ ಉದ್ದೇಶವೆನೆಂದರೆ ಸಾಮಾಜಿಕ ಅರ್ಥ ವ್ಯವಸ್ಥೆಯನ್ನು ಮೇಲೆತ್ತುವುದು ಎಂದು ಗಿರಿಸಾಗರ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ಸಂಘ ಜೀವಿಯಾಗಿರುವಂತ ಮನುಷ್ಯ ಎಲ್ಲರೊಂದಿಗೆ ಸುಖವಾಗಿ ಬದುಕುವುದರೊಂದಿಗೆ ಅಪ್ಪಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಗುರುಸಿದ್ದೇಶ್ವರ ಪತ್ತಿನ ಸಹಕಾರಿ ಸಂಘದ ಉದ್ದೇಶವೆನೆಂದರೆ ಸಾಮಾಜಿಕ ಅರ್ಥ ವ್ಯವಸ್ಥೆಯನ್ನು ಮೇಲೆತ್ತುವುದು ಎಂದು ಗಿರಿಸಾಗರ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಪಟ್ಟಣದ ಕಲ್ಮಠದ ಆವರಣದಲ್ಲಿ ಸೋಮವಾರ ನಡೆದ ಗುರುಸಿದ್ಧೇಶ್ವರ ಪತ್ತಿನ ಸಹಕಾರಿ ಸಂಘದ ೧೯ನೇ ವಾರ್ಷಿಕ ಸಾಧಾರಣಾ ಸಭೆಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಸಹಕಾರ ಎಂಬುವುದು ಸಮಾಜದ ಸಮಕಾಲಿನಿಂದ ಹುಟ್ಟಿರುವಂತದ್ದು. ಜಗತ್ತಿನ ಸೃಷ್ಟಿಯಲ್ಲಿ ಭಗವಂತ ಎಲ್ಲವನ್ನು ನೀಡಿದ್ದಾನೆ. ಇಲ್ಲಿ ಮನುಷ್ಯ ಯಾವ ರೀತಿಯಾದರೂ ಬದುಕಬಹುದು. ಅವನು ನೆಮ್ಮದಿಯಾಗಿ ಸುಖಿಯಾಗಿ ಬದುಕಬೇಕಾಗಿತ್ತು ಎಂದರೆ ಧರ್ಮದಿಂದ ನಡೆಯಬೇಕು. ಜಂಗಮರು ತಮ್ಮ ಕಾಯಕ ವೃತ್ತಿಯನ್ನು ಗೌರವದಿಂದ ಮುಂದುವರಿಸಿಕೊಂಡು ಹೋಗಬೇಕು. ಯಾರು ದುಶ್ಚಟಗಳಿಗೆ ಅಧೀನರಾಗಬಾರದು. ನೀವು ಸಮಾಜದಲ್ಲಿ ಗೌರವದ ಸ್ಥಾನದಲ್ಲಿ ಇರುವಿರಿ. ನಿತ್ಯ ಲಿಂಗಪೂಜೆ ಸಲ್ಲಿಸಿ ಭಗವಂತನಿಗೆ ಪಾತ್ರರಾಗಿ ಎಂದರು.

ಗುರುಸಿದ್ಧೇಶ್ವರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಆರ್.ಸಿ.ಪತ್ರಿ ಮಾತನಾಡಿ, ೨೦೨೩-೨೪ನೇ ಸಾಲಿನಲ್ಲಿ ನಮ್ಮ ಬ್ಯಾಂಕ್ ಎಲ್ಲರ ಸಹಕಾರದಿಂದ ಪ್ರಗತಿಹೊಂದಿ ₹೫೪.೦೪ ಲಕ್ಷ ನಿವ್ವಳ ಲಾಭಾಂಶದೊಂದಿಗೆ ಅಭಿವೃದ್ಧಿಯತ್ತ ಸಾಗುತ್ತಿದೆ. ಸಂಘದ ಸದಸ್ಯರು, ಹಿತೈಷಿಗಳು, ಮತ್ತು ಸಾರ್ವಜನಿಕರು ಸಂಘದ ಮೇಲಿನ ಶ್ರದ್ಧೆ ಸಹಕಾರಗಳೇ ಈ ಪ್ರಗತಿಗೆ ಕಾರಣ ಎನ್ನಬಹುದು ಎಂದರು.ಸಾನ್ನಿಧ್ಯ ಕಲ್ಮಠದ ಗುರುಪಾದ ಶ್ರೀಗಳು ವಹಿಸಿ ಮಾತನಾಡಿದರು. ಉಪಾಧ್ಯಕ್ಷ ಪಿ.ಎಸ್.ಮಠಪತಿ, ನಿರ್ದೇಶಕರಾದ ಅನವೀರಯ್ಯಪ್ಯಾಟೀಮಠ, ಬಸವರಾಜ್ ಉಮಚಗಿಮಠ, ಸಿದ್ದಯ್ಯ ಚೌಕಿಮಠ, ಪಾರ್ವತಿ ಹಿರೇಮಠ, ನಂದಬಸವ್ವ ಹಿರೇಮಠ, ಸುವರ್ಣಾ ಭಜಂತ್ರಿ, ಸಂಗಪ್ಪ ಅವಟಿ,ಹಿರಿಯರಾದ ಈರಯ್ಯ ಗೋಠೆ,ಸಂಗಯ್ಯ ಹಿರೇಮಠ, ಮಲ್ಲಯ್ಯ ಕಂಬಿ, ಶಿವಾನಂದ ಯಾಳವರಮಠ,ನ್ಯಾಯವಾದಿ ಪಿ ಎಂ ವಸ್ತ್ರದ, ರಾಚಯ್ಯ ವಸ್ತ್ರದ, ಪಶುಪತಿ ವಸ್ತ್ರದ, ಕಾರ್ಯನಿರ್ವಾಹಕ ಪಂಚಾಕ್ಷರಿ ಹಿರೇಮಠ ಸೇರಿದಂತೆ ಇತರರು ಇದ್ದರು.

---

ಕೋಟ್‌

ವಿಶಾಲವಾದ ಮನಸ್ಸು ಮತ್ತು ಹೃದಯ ಪ್ರತಿಯೊಬ್ಬರಲ್ಲಿ ಇರಬೇಕಾಗಿದೆ. ಇಂದು ಸಾಮಾಜಿಕ ಮೌಲ್ಯಗಳು ಅತ್ಯಂತ ತಳಮಟ್ಟದಲ್ಲಿ ಕುಸಿಯುತ್ತಿದೆ. ಯಾಕಂದ್ರೆ ನಮ್ಮ ನಮ್ಮಲ್ಲಿರುವಂತಹ ಸ್ವಾರ್ಥ, ಅಸೂಹೆ ಮನೋಭಾವಗಳಿಂದ ನಮ್ಮ ವ್ಯಕ್ತಿತ್ವ ನಾಶವಾಗಿ ಹೋಗುತ್ತಿದೆ. ಸಾರ್ಥಕ ಬದುಕು ನಡೆಸಲು ಧರ್ಮ ದಾರಿಯಲ್ಲಿ ನಡೆಯಬೇಕು.

-ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು.

PREV

Recommended Stories

ದಸರಾ ಹಬ್ಬ ಅದ್ಧೂರಿ ಆಚರಣೆಗೆ ಎಲ್ಲರೂ ಸಹಕರಿಸಿ: ಏಗಪ್ಪ ಸವದಿ
ಬಿಡಿಸಿಸಿ ಬ್ಯಾಂಕ್‌ ಹಿತರಕ್ಷಣೆಗೆ ನಾವು ಬದ್ಧ