ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಈ ಬಾರಿ 10ನೇ ತರಗತಿ ಫಲಿತಾಂಶ ತೀರಾ ಕುಸಿದಿದ್ದು ಶಿಕ್ಷಕರು ಸರಿಯಾಗಿ ಪಾಠ ಮಾಡಲಿಲ್ಲವೇ, ಅಥವಾ ಸರ್ಕಾರ ಉತ್ತಮ ರೀತಿ ಸುಸೂತ್ರ ಕ್ರಮಕ್ಕಾಗಿ ಸಿಸಿಟಿವಿ ಅಳವಡಿಸಿದ್ದೆ ತಪ್ಪಾಯಿತೇ? ಮುಂದೆ ಈ ರೀತಿಯಾಗಬಾರದು ಎಂದು ಶಾಸಕ ಎ ಆರ್ ಕೃಷ್ಣಮೂರ್ತಿ ಹೇಳಿದರು.ಅಸ್ಸಿಸ್ಸಿ ಶಾಲೆಯಲ್ಲಿ ಆಯೋಜಿಸಿದ್ದ ಶೇ. ನೂರರ ಫಲಿತಾಂಶಕ್ಕೆ ಕಾರಣಕರ್ತರಾದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಕೊಳ್ಳೇಗಾಲ ತಾಲೂಕು ರಾಜ್ಯಮಟದ್ದಲ್ಲೆ ಗಮನ ಸೆಳೆಯುವ ಫಲಿತಾಂಶಕ್ಕೆ ಶಿಕ್ಷಕರು ಶ್ರಮಿಸಬೇಕು, ಮೊರಾರ್ಜಿ ವಸತಿ ಶಾಲೆ ಹಾಗೂ ಆದರ್ಶ ಶಾಲೆಯ ಶಿಕ್ಷಣ ಗುಣಮಟ್ಟದಲ್ಲಿರುವಂತ, ಇಲ್ಲಿ ಸಹಾ ಫಲಿತಾಂಶ ಹೆಚ್ಚಳಕ್ಕೆ ಎಲ್ಲಾ ಶಿಕ್ಷಕರು ಸ್ಪಂದಿಸಬೇಕು.
ಮುಂದಿನ ಬಾರಿ ಫಲಿತಾಂಶ ಹೆಚ್ಚಳಕ್ಕೆ ಎಲ್ಲರೂ ಕಟಿಬದ್ದರಾಗಬೇಕು, ಮಕ್ಕಳ ಪ್ರತಿಭೆ ಪ್ರೋತ್ಸಾಹಿಸುವ ಜೊತೆ ಮೌಲ್ಯಯುತ ಶಿಕ್ಷಣ ನೀಡಿ ಅವರನ್ನು ಹೆಚ್ಚು ಅಂಕಗಳಿಸಲು ಪ್ರೇರೆಪಿಸಬೇಕು, ಮುರಾರ್ಜಿ, ಆದರ್ಶ ಶಾಲೆಯಲ್ಲಿನ ಗುಣಮಟ್ಟದಂತೆ ಶಿಕ್ಷಣ ನೀಡಬೇಕು ಎಂದರು.ಕಳೆದ ಬಾರಿ ರಾಜ್ಯದಲ್ಲಿ 7ನೇ ಫಲಿತಾಂಶ ಗಳಿಸಿತ್ತು, ಈ ಬಾರಿ 24ಕ್ಕೆ ಫಲಿತಾಂಶ ಕುಸಿತಗೊಂಡಿದೆ. ಈ ಬೆಳವಣಿಗೆ ಗಮನಿಸಿದರೆ ಫಲಿತಾಂಶ ತೀರಾ ಕೆಳ ಹಂತಕ್ಕೆ ಇಳಿಸಲು ಕಾರಣವೇನೆಂಬ ಪ್ರಶ್ನೆ ಮೂಡುತ್ತೆ, ಶಿಕ್ಷಕರು ಸರಿಯಾಗಿ ಪಾಠ ಮಾಡಲಿಲ್ಲವೇ, ಇಲ್ಲ ಆಸಕ್ತಿವಹಿಸಿ ಮಕ್ಕಳೇ ಪರೀಕ್ಷೆ ಬರೆಯಲಿಲ್ಲವೇ. ಹಾಗಾಗಿ, ಫಲಿತಾಂಶ ಹಿಂದುಳಿಯಿತೆ, ಅಥವಾ ಸಿಸಿ ಕ್ಯಾಮರಾ ಅಳವಡಿಸಿದ್ದು ಕಾರಣವಾಯಿತೇ ಎಂಬಿತ್ಯಾದಿ ಪ್ರಶ್ನೆಗಳಿವೆ. ಮುಂದಿನ ದಿನಗಳಲ್ಲಿ ಶಿಕ್ಷಕರು ಪ್ರಾಮಾಣಿಕವಾಗಿ ಹೆಚ್ಚಿನ ಫಲಿತಾಂಶಕ್ಕೆ ಕಾರಣಕರ್ತರಾಗಬೇಕು. ಸತತ ಪರಿಶ್ರಮವಹಿಸಿ ಫಲಿತಾಂಶ ಹೆಚ್ಚಳ ನಿಟ್ಟಿನಲ್ಲಿ ಶ್ರಮಿಸಬೇಕಿದೆ ಎಂದು ಸಲಹೆ ನೀಡಿದರು.
ಸಂತ ಪ್ರಾನ್ಸಿಸ್ ಅಸ್ಸಿಸ್ಸಿ ಚರ್ಚ್ ಫಾಧರ್ ರಾಯಪ್ಪ, ತಹಸೀಲ್ದಾರ್ ಮಂಜುಳಾ, ಬಿಇಒ ಮಂಜುಳಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೊಟೇಶ್, ನಗರಸಭೆ ಸದಸ್ಯ ಶಾಂತರಾಜು ಬಸ್ತೀಪುರ, ಶಂಕರನಾರಾಯಣ ಗುಪ್ತ, ಜಯಮೇರಿ, ಮಂಜುನಾಥ್, ಮಾಜಿ ಸದಸ್ಯ ಅಕ್ಮಲ್ ಪಾಷ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಂಗಸ್ವಾಮಿ, ಫ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಶಿವರಾಜು, ಸಹ ಶಿಕ್ಷಕರ ಸಂಘದ ಅಕ್ಬರ್, ಜಿಲ್ಲಾ ಸಹ ಶಿಕ್ಷಕರ ಸಂಘದ ಶಾಂತರಾಜು, ದೈಹಿಕ ಶಿಕ್ಷಣ ಪರಿವೀಕ್ಷಕ ಸ್ಟೀವನ್, ಸಿದ್ದರಾಜು, ಚಿಕ್ಕರಾಜು ಇನ್ನಿತರಿದ್ದರು.