ಲೋಕಸಭೆಯಲ್ಲಿ ಪ್ರತಿಧ್ವನಿಸಿದ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಬೇಡಿಕೆ ಕನ್ನಡಪ್ರಭ ವಾರ್ತೆ ಕಲಬುರಗಿ
ಕರ್ನಾಟಕ ರಾಜ್ಯ ಸರ್ಕಾರವು ಕೇಂದ್ರ ಸರಕಾರಕ್ಕೆ ಈಗಾಗಲೇ ಶಿಫಾರಸು ಮಾಡಿದ್ದು ಪ್ರಸ್ತುತ ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ (rgi)ದಲ್ಲಿ ಮೌಲ್ಯಮಾಪನಕ್ಕಾಗಿ ಕಾದಿದೆ. ಈ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರದ ಎಲ್ಲಾ ಆಯೋಗಗಳನ್ನು ಕರ್ನಾಟಕದ ಎಸ್ಟಿ ಪಟ್ಟಿಗೆ ಸೇರಿಸಲು ಶಿಫಾರಸು ಮಾಡಲಾಗಿದೆ. ರಾಜ್ಯ ಸರ್ಕಾರವು ಕಳುಹಿಸಿದ 1901 -1931ರ ಜನಗಣತಿ ವರದಿಯಲ್ಲಿ ಮತ್ತು ಜನಾಂಗೀಯ ಅಧ್ಯಯನ ವರದಿಯಲ್ಲಿ ಈ ಸಮೂದಯಾಗಳು ಬುಡಕಟ್ಟು ಜನಾಂಗಕ್ಕೆ ಸೇರಿದ್ದಾರೆ ಎಂದು ಸೂಚಿಸಿದ್ದಾರೆ.
ಪ್ರಸ್ತುತ ಕೆಲವು ಸಮುದಾಯಗಳಾದ ಟೋಕ್ರೆ ಕೋಲಿ, ಡೋರ ಕೋಲಿ, ಕೋಯಾ, ಕೋಲ್ಚಾ, ಕೋಲ್ಗಾ, ರಾಜ್ ಕೋಯಾ, ಬಿನ್ ಕೋಯಾ ಇವೆಲ್ಲವೂ 1976ರಲ್ಲಿ ಕರ್ನಾಟಕದ ಎಸ್ಟಿ ಪಟ್ಟಿಯಲ್ಲಿ ಕ್ರಮವಾಗಿ 22 ಮತ್ತು 26ರಲ್ಲಿ ಸೇರಿಸಲಾಗಿದೆ.ಆದರೆ ಟೋಕ್ರೆ ಕೋಲಿ, ಕೋಯಾ, ಡೋರ ಕೋಲಿಗಳಲ್ಲಿ ಉಳಿದಿರುವ ಕೋಲಿ, ಕಬ್ಬಲಿಗ, ಗಂಗಾಮತ ಮತ್ತು ಅದರ 34 ಸಮಾನಾರ್ಥಕ ಪದಗಳು ಕರ್ನಾಟಕದ ಎಸ್ ಟಿ ಪಟ್ಟಿಯ ಸೂಚಿಯಲ್ಲಿ ಸೇರಿಸುವುದು ಅವಶ್ಯಕವಾಗಿದೆ ಎಂದರು.
ಸ್ವಾತಂತ್ರ್ಯದ ನಂತರ ಕುರುಬ ಸಮುದಾಯವು ಎಸ್ಟಿ ಸ್ಥಾನಮಾನವನ್ನು ಹೊಂದಿತ್ತು. 1977ರಲ್ಲಿ ಹಿಂದುಳಿದ ವರ್ಗಗಳ ಆಯೋಗದ ನೇತೃತ್ವವಹಿಸಿದ್ದ ನ್ಯಾಯಮೂರ್ತಿ ಎಲ್.ಜಿ. ಹಾವನೂರ್ ಅವರು ಕುರುಬರನ್ನು ಎಸ್ಟಿ ಪಟ್ಟಿಯಿಂದ ‘ಅತಿ ಹಿಂದುಳಿದ ವರ್ಗ’ ವರ್ಗಕ್ಕೆ ಸ್ಥಳಾಂತರಿಸಿದರು.
ಈ ನಿಟ್ಟಿನಲ್ಲಿ ನಾವು ಎಸ್‌ಟಿ ಸ್ಥಾನಮಾನ ಪಟ್ಟಿಗೆ ಹೊಸ ಸೇರ್ಪಡೆ ಕೇಳುತ್ತಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿಯೇ ಕುರುಬರನ್ನು ಎಸ್ಟಿ ಎಂದು ವರ್ಗೀಕರಿಸಲಾಗಿತ್ತು. ಅವರು ಕೇವಲ ಆ ಪಟ್ಟಿಯಲ್ಲಿ ಮರುಸ್ಥಾಪಿಸಲು ಒತ್ತಾಯಿಸುತ್ತಿದ್ದಾರೆ. ಸಮುದಾಯದ ಬಹುಪಾಲು ಇನ್ನೂ ಕುಗ್ರಾಮಗಳಲ್ಲಿ ವಾಸಿಸುತ್ತಿದ್ದಾರೆ. ಹುಲ್ಲುಗಾವಲುಗಳಲ್ಲಿ ಕುರಿಗಳನ್ನು ಮೇಯಿಸುತ್ತಿದ್ದಾರೆ. ಕಾಡು ಕುರುಬ ಮತ್ತು ಜೇನು ಕುರುಬರನ್ನು ಎಸ್ಟಿ ಎಂದು ಪರಿಗಣಿಸಿದಾಗ ಎಲ್ಲ ಕುರುಬರನ್ನು ಏಕೆ ಪರಿಗಣಿಸಬಾರದು?. ಗೊಂಡ, ರಾಜಗೊಂಡ ಮತ್ತು ಕುರುಬರು ಒಂದೇ ಆದರೆ ಕುರುಬರಿಗೆ ಎಸ್‌ಟಿ ಪ್ರಮಾಣಪತ್ರವನ್ನು ನೀಡುವುದಿಲ್ಲ.
ಕಳೆದ 3 ವರ್ಷಗಳಲ್ಲಿ ಈ ಮನವಿಯನ್ನು ಸಕಾರಾತ್ಮಕವಾಗಿ ಪರಿಗಣಿಸಲು ನಾನು ಸಚಿವರನ್ನು ನಿಯೋಗದೊಂದಿಗೆ ಭೇಟಿ ಮಾಡಿದ್ದೇನೆ. ಇದು ನನ್ನ ಸಂಸದೀಯ ಕ್ಷೇತ್ರದಿಂದ ಮತ್ತು ಕರ್ನಾಟಕ ರಾಜ್ಯದಿಂದ ಬಹುಕಾಲದ ಬೇಡಿಕೆಯಾಗಿದೆ.
ಅದ್ದಕ್ಕೆ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ ರವರಿಗೆ ಮನವಿ ಮಾಡಲು ಬಯಸುತ್ತೇನೆ ಅದೇನೆಂದರೆ ಈಗ ಈ ಫೈಲ್ ಮೌಲ್ಯಮಾಪನಕ್ಕಾಗಿ RGI ಅಡಿಯಲ್ಲಿದೆ, ಈ ವಿಷಯವನ್ನು ತ್ವರಿತಗೊಳಿಸಿ ಕೋಲಿ ಕಬ್ಬಲಿಗ ಕುರುಬ ಸಮುದಾಯವನ್ನು ಎಸ್ಟಿ ಪಟ್ಟಿಗೆ ಸೇರಿಸಲು ನಾನು ವಿನಂತಿಸುತ್ತೇನೆ ಎಂದು ಲೋಕಸಭಾ ಅಧ್ಯಕ್ಷರ ಮೂಲಕ ಮನವಿ ಸಲ್ಲಿಸಿದರು.